ಬೆಂಗಳೂರು: ಟೆಂಟಲ್ಲಿ ಬ್ಲೂ ಫಿಲಂ ತೋರಿಸಿ ಜೀವನ ಮಾಡಿಕೊಂಡು ಬಂದವನು ಎಂದು ವಾಗ್ದಾಳಿ ನಡೆಸಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ (H.D.Kumaraswamy) ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K.Shivakumar) ತಿರುಗೇಟು ನೀಡಿದ್ದಾರೆ. ನಾನು ಬ್ಲೂ ಫಿಲಂ ತೋರಿಸಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಪಬ್ಲಿಕ್ ಟಿವಿ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಡಿಕೆಶಿ, ದೊಡ್ಡ ಆಲಹಳ್ಳಿ ಸುತ್ತಮುತ್ತ ಯಾವನಾದರೂ ಒಬ್ಬ ನಾನು ಬ್ಲೂ ಫಿಲಂ ತೋರಿಸಿದ್ದೀನಿ ಎಂದು ಹೇಳಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಕುಮಾರಸ್ವಾಮಿ ಕನಕಪುರಕ್ಕೆ ಬರಲಿ, ಬ್ಲೂ ಫಿಲಂ ಬಗ್ಗೆ ಮಾತಾಡಲಿ. ಲೋಕಸಭೆ ಚುನಾವಣೆಯಲ್ಲಿ ಗೊತ್ತಾಗುತ್ತೆ. ವಿಧಾನಸಭೆ ಚುನಾವಣೆಯಲ್ಲಿ ಕನಕಪುರಕ್ಕೆ ಬಂದು ಕುಮಾರಸ್ವಾಮಿ ಪ್ರಚಾರ ಮಾಡಿಲ್ಲ. ಬಂದು ಬ್ಲೂ ಫಿಲಂ ಬಗ್ಗೆ ಹೇಳಬೇಕಿತ್ತು, ಆಗ ಗೊತ್ತಾಗೋದು ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಕುಮಾರಸ್ವಾಮಿ ಜೊತೆ ದತ್ತಮಾಲೆ ಧರಿಸಲಿದ್ದಾರೆ ಜೆಡಿಎಸ್ ಶಾಸಕರು
Advertisement
Advertisement
ನನಗೆ ಯಾರ್ ಬ್ರೇಕ್ ಹಾಕ್ತಾರೆ ರೀ, ಪ್ರಕೃತಿ ನಿಯಮ ಇದೆ. ನನಗೆ ಯಾರು ಬ್ರೇಕ್ ಗೀಕ್ ಹಾಕಲ್ಲ. ಕೆಲವರು ಲಿಮಿಟೇಶನ್ ದಾಟುತ್ತಾರೆ ಅಷ್ಟೇ. ಕುಮಾರಸ್ವಾಮಿ ಜೊತೆ ಗುದ್ದಾಟಕ್ಕೆ ನನಗೆ ಟೈಂ ಇಲ್ಲ. ಅಯ್ಯೋ ಪಾಪ ಅವರಿಗೆ ಪ್ರಾಬ್ಲಂ ಇದೆ. ಈಗಲೂ 21 ಥಿಯೇಟರ್ ಇವೆ. ನಮ್ಮದು ಎಲ್ಲಾದ್ರೂ ಉಂಟೇನ್ರಿ. ದೊಡ್ಡ ಆಲಹಳ್ಳಿ, ಕೋಡಹಳ್ಳಿ, ಸಾತನೂರಿನಲ್ಲಿ ಹೋಗಿ ಜನರನ್ನ ಕೇಳಿ. ಒಬ್ಬ ಏನಾದ್ರೂ ಡಿಕೆಶಿ ಬ್ಲೂ ಫಿಲ್ಮ್ ತೋರಿಸ್ತಿದ್ದ ಅಂದ್ರೆ ನಾನು ರಾಜಕೀಯ ನಿವೃತ್ತಿ ತಗೋತೀನಿ ಎಂದು ತಿರುಗೇಟು ಕೊಟ್ಟರು.
Advertisement
ಇಂದಿರಾಗಾಂಧಿ ಹೆಸರಲ್ಲಿ ಥಿಯೇಟರ್ ಮಾಡಿದ್ದೆ. ಬೆಳಗಾವಿ ಸೆಷನ್‌ನಲ್ಲಿ ಓಪನ್ ಡಿಬೇಟ್‌ಗೆ ನಾನು ರೆಡಿ. ಮುಹೂರ್ತ ಗಳಿಗೆ ನೋಡ್ಕೊಂಡು ಬರಲಿ. ಡೂಪ್ಲಿಕೇಟ್ ಸಿಎಂ ಬಿರುದನ್ನ ಸಂತೋಷದಿಂದ ಸ್ವೀಕಾರ ಮಾಡುತ್ತೇನೆ. ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಕೋಲಾರದ ಜನ ಅಷ್ಟೋ ಇಷ್ಟೋ ನನ್ ಹೆಣ ಹೊತ್ತಿದ್ದಾರೆ. ಡೆಲ್ಲಿಗೆ ಬರಿಗಾಲಲ್ಲಿ ನಡೆದಿದ್ದಾರೆ. ಕುಮಾರಸ್ವಾಮಿನೂ ತಿಹಾರ್ ಜೈಲಿಗೆ ಏಕೆ ಬಂದಿದ್ರು? ಆಗ ಜೋಡೆತ್ತು ಸರಿ ಇದ್ನಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಡಿಸೆಂಬರ್ 9ಕ್ಕೆ ಹೊಸ ರಾಷ್ಟ್ರೀಯ ಅಧ್ಯಕ್ಷರ ನೇಮಕ ಆಗುತ್ತದೆ: ಸಿಎಂ ಇಬ್ರಾಹಿಂ
Advertisement
ಯತೀಂದ್ರ ಸಿದ್ದರಾಮಯ್ಯ ಸಂಭಾಷಣೆ ಕುರಿತು ಮಾತನಾಡಿ, ನೂರು ವಿವೇಕಾನಂದ ಇದ್ದಾರೆ. ನೂರು ಸಿದ್ದರಾಮಯ್ಯ, ನೂರು ಶಿವಕುಮಾರ್ ಇದ್ದಾರೆ. ಅವರ ತಂದೆಯ ಕೆಲಸ ಮಾಡಿದ್ರೆ ತಪ್ಪೇನು? ಯತೀಂದ್ರ ಲೀಡರ್ ಆಗ್ತಿದ್ದಾರೆ. ಕೆಲಸ ಮಾಡ್ತಿದ್ದಾರೆ ಎಂದರು.