ಬೆಂಗಳೂರು: ನಾನು ಮೊದಲಿನಿಂದಲೂ ಹೇಳ್ತಾ ಇದ್ದೀನಿ. ಡಿಕೆಶಿ ಸಾಹೇಬ್ರು ನನಗೆ ಟಿಕೆಟ್ ಕೊಟ್ಟಿದ್ದಾರೆ. ನನ್ನ ರಾಜಕೀಯವಾಗಿ ಬೆಳಸಿದ್ದಾರೆ. ಡಿಕೆಶಿ (D.K.Shivakumar) ಸಾಹೇಬ್ರು ಸಿಎಂ ಆಗಬೇಕು ಅಂತಾ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ (Nayana Motamma) ಹೇಳಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು, ರಾಜಕೀಯವಾಗಿಯೂ ನಿನ್ನೆ ಸಭೆಯಲ್ಲಿ ಚರ್ಚೆ ಆಗಿದೆ. ಸಂದರ್ಭ ಬಂದರೆ ದೆಹಲಿಗೆ ಹೋಗ್ತೀವಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಬಲಿಗ ಶಾಸಕರ ಡಿನ್ನರ್ ಮೀಟಿಂಗ್ ಶಕ್ತಿ ಪ್ರದರ್ಶನ ಅಲ್ಲ: ಡಿ.ಕೆ.ಶಿವಕುಮಾರ್
ಬರ್ತ್‌ಡೇ ವಿಶೇಷ ಅಷ್ಟೆ. ಎಲ್ಲಾ ಎಂಎಲ್‌ಎಗಳು ಸೇರಿದ್ವಿ. ಸಹಜವಾಗಿ ರಾಜಕೀಯ ಬಗ್ಗೆ ಚರ್ಚೆ ಆಗಿದೆ. ಬಜೆಟ್, ರಾಜಕೀಯ ವರ್ತಮಾನ ಎಲ್ಲವೂ ಚರ್ಚೆ ಆಗಿದೆ. ಸರ್ ಸಿಎಂ ಆಗಬೇಕು ಅನ್ನೋದು ಇದೆ. ಅಲ್ಲಿ ರಾಜಕೀಯ ಡಿಸ್ಕಷನ್ ಆಗಿರೋದು ಸತ್ಯ ಎಂದಿದ್ದಾರೆ.
ಹೈಕಮಾಂಡ್ ಬಗ್ಗೆ ಏನೂ ಹೇಳೋದಿಲ್ಲ. ನಾವು ಶಾಸಕರು, ನಮ್ಮದು 140 ನಂಬರ್ ಇದೆ. ಗೊಂದಲ ಇತ್ಯರ್ಥ ಆಗಲಿ ಅನ್ನೋದು ನಮ್ಮ ಆಶಯ. ಶಾಸಕರಿಂದಷ್ಟೇ ಸಿಎಂ ಆಯ್ಕೆ ಅಂತೇನೂ ಅಲ್ಲ. ಹೈಕಮಾಂಡ್ ತೀರ್ಮಾನಿಸುತ್ತೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 2028 ಕ್ಕೂ ಕಾಂಗ್ರೆಸ್ ಬರಬೇಕು, ಅದಕ್ಕಾಗಿ ಹೈಕಮಾಂಡ್ ಕುರ್ಚಿ ಗೊಂದಲ ಬಗೆಹರಿಸಬೇಕು: ಗಣಿಗ ರವಿಕುಮಾರ್

