ಬೆಳಗಾವಿ: ಮೇಕೆದಾಟು ಯೋಜನೆ ಬಗ್ಗೆ ನಾನು ಈಗಲೂ ಹೆಚ್ಚು ಆತ್ಮವಿಶ್ವಾಸದಿಂದ ಇದ್ದು, ಆದರೆ ತಮಿಳುನಾಡು ಸಿಎಂ ಮಾಧ್ಯಮಗಳಿಗೆ ನೀಡಿರುವ ಮಾಹಿತಿ ನನಗೆ ಅಚ್ಚರಿ ತಂದಿದೆ. ಈಗಲೂ ನಾನು ತಮಿಳುನಾಡು ಸಿಎಂ ಹಾಗು ಅಧಿಕಾರಿಗಳಿಗೆ ಯೋಜನೆ ಬಗ್ಗೆ ಭೇಟಿ ನೀಡಿಲು ಆಹ್ವಾನ ನೀಡುತ್ತೇನೆ ಎಂದು ಹೇಳುವ ಮೂಲಕ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬೆಳಗಾವಿಯಲ್ಲಿ ತಮಿಳುನಾಡಿನ ತೀರ್ಮಾನದ ಕುರಿತು ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್ ಅವರು, ನಮ್ಮ ರಾಜ್ಯ ಹಿತಕ್ಕಾಗಿ ಮೇಕೆದಾಟು ಯೋಜನೆ ಮಾಡುತ್ತಿದ್ದೇವೆ. ಆದರೆ ಇದರಿಂದ ತಮಿಳುನಾಡಿಗೂ ಅನುಕೂಲವಾಗುತ್ತದೆ. ಹಾಗಾಗಿ ಈಗಲೂ ಕಾಲ ಮಿಂಚಿಲ್ಲ. ನೇರ ನಾನು ತಮಿಳುನಾಡು ಸಿಎಂ ಹಾಗು ಅಧಿಕಾರಿಗಳಿಗೆ ಆಹ್ವಾನ ನೀಡುತಿದ್ದು, ಸ್ಥಳಕ್ಕೆ ಬಂದು ನಮ್ಮ ಯೋಜನೆ ಬಗ್ಗೆ ಪರಿಶೀಲನೆ ನಡೆಸಲು ಮನವಿ ಮಾಡುತ್ತೇನೆ ಎಂದರು.
Advertisement
Advertisement
ಕೂಡಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ ಎರಡು ರಾಜ್ಯಗಳಿಗೆ ಉಪಯೋಗವಾಗುವ ಯೋಜನೆಗೆ ತಮಿಳುನಾಡು ಮನವೊಲಿಸಬೇಕು. ಅಲ್ಲದೇ ತಮಿಳುನಾಡು ನ್ಯಾಯಾಲಯಕ್ಕೆ ತೆರಳಿದರೆ ಅನಿವಾರ್ಯವಾಗಿ ನಾವು ನ್ಯಾಯಾಲಯಲ್ಲೇ ಸೂಕ್ತ ಉತ್ತರ ನೀಡುತ್ತೇವೆ. ತಮಿಳುನಾಡಿನ ಈ ನಡೆ ನನಗೆ ಶಾಕ್ ನೀಡಿದೆ. ಕೇಂದ್ರ ಸರ್ಕಾರ ಈ ಎಲ್ಲಾ ವಿಚಾರದ ‘ಮೈನ್ ಕೀ’. ಅದ್ದರಿಂದ ಕೇಂದ್ರ ಮಧ್ಯ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ನ್ಯಾಯಾಲಯ ಈ ಕುರಿತು ನಮಗೆ ಏನು ಆದೇಶ ನೀಡಿದೆ ಅಷ್ಟು ನೀರನ್ನು ಮಾತ್ರ ಬಳಕೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಮೇಕೆದಾಟು ಯೋಜನೆ: ಮಾತುಕತೆಗೆ ಸಿದ್ಧವಿಲ್ಲವೆಂದ ತಮಿಳುನಾಡು
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv