ಬೆಂಗಳೂರು: ನಮ್ಮ ನಾಯಕರನ್ನು ಭೇಟಿಯಾಗೋದು ನನ್ನ ಧರ್ಮ ಎಂದು ಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಹೇಳಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿಯಾದ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅವರು ಈ ಉತ್ತರ ನೀಡಿದ್ದಾರೆ.
ನಮ್ಮ ನಾಯಕರನ್ನ ಭೇಟಿ ಮಾಡಿ ವಿಚಾರಿಸೋದು ನನ್ನ ಧರ್ಮ ಅಲ್ವಾ? ಮಾಜಿ ಸಿಎಂ ಅವರನ್ನ ಭೇಟಿ ಮಾಡಿ ಬಂದಿದ್ದೀನಿ ಎಂದು ತಿಳಿಸಿದ್ದಾರೆ. ಸ್ಟಿಂಗ್ ಪ್ರಕರಣ ಹೊರಬಂದ ನಂತರ ಇದೇ ಮೊದಲ ಬಾರಿಗೆ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಸಿಎಂ ಡಿಕೆ ಶಿವಕುಮಾರ್ ಭೇಟಿಯಾಗಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ ಸಿದ್ದರಾಮಯ್ಯ ಭೇಟಿಯಾದ ಸಿಎಂ ಡಿಕೆಶಿ – ಕೆಲಕಾಲ ಮಾತುಕತೆ

ಇದೇ ವೇಳೆ ಕಬ್ಬು ಬೆಳೆಗಾರರ ಜೊತೆ ಮಾತನಾಡುತ್ತೇನೆ. ಬೇಕಾದಷ್ಟು ಸಮಸ್ಯೆಗಳಿವೆ, ಅವರ ಬೇಡಿಕೆಗಳನ್ನ ತಿಳಿದುಕೊಳ್ಳುತ್ತೇನೆ. ಇದು ರಾಷ್ಟ್ರ ಮಟ್ಟದ ಸಮಸ್ಯೆ ಎಂದು ಹೇಳಿದ್ದಾರೆ.
ಮಂಡ್ಯದಲ್ಲಿ ಕಾವೇರಿ ಆರತಿಗೆ ಚಾಲನೆ ನೀಡಿದ ಬಳಿಕ ಮೈಸೂರಿಗೆ ಬಂದ ಡಿಕೆಶಿ ಕುವೆಂಪು ನಗರದಲ್ಲಿರುವ ಸಿದ್ದರಾಮಯ್ಯ ಅವರ ಹೊಸ ಮನೆಗೆ ಭೇಟಿ ನೀಡಿದ್ದರು. ಸ್ಟಿಂಗ್ ಪ್ರಕರಣ ಹೊರಬಂದ ನಂತರ ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ಭೇಟಿಯಾದ ಸಿಎಂ ಸಿದ್ದರಾಮಯ್ಯರೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದ್ದರು. ಇದನ್ನೂ ಓದಿ: 2023ರಲ್ಲಿ ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಆಗಿದೆ – ಹೆಚ್ಡಿಕೆ ಹೊಸ ಬಾಂಬ್

