ಬೆಂಗಳೂರು: ಕಾಂಗ್ರೆಸ್ನಲ್ಲಿ ಕುರ್ಚಿ ಕಿತ್ತಾಟ ಜಾಸ್ತಿ ಆಗಿದೆ. ಡಿ.ಕೆ ಶಿವಕುಮಾರ್ಗೆ ಧೈರ್ಯ ಇದ್ದರೆ ಪವರ್ ಶೇರಿಂಗ್ ಸತ್ಯ ಬಹಿರಂಗಪಡಿಸಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸವಾಲ್ ಹಾಕಿದ್ದಾರೆ.
ಬೆಂಗಳೂರಿನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಸಿಎಂ ಎಲ್ಲೇ ಹೋದ್ರು ಸಿಎಂ ಸೀಟು ಖಾಲಿ ಇಲ್ಲ ಎಂದು ಹೇಳ್ತಿದ್ದಾರೆ. ಆಡಳಿತ ಬಿಟ್ಟು ಕಾಂಗ್ರೆಸ್ ಕುರ್ಚಿ ಬೇಗುದಿಯಲ್ಲಿ ಬೆಂದು ಹೋಗಿದೆ. ಪವರ್ ಪಾಲಿಟಿಕ್ಸ್ ಜೋರಾಗಿ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.
Advertisement
ಡಿಕೆಶಿ ಚುನಾವಣೆ ಸಮಯದಲ್ಲಿ ನನ್ನ ಕೈಗೆ ಪೆನ್ನು ಕೊಡಿ ಎಂದು ಹೇಳುತ್ತಿದ್ದರು. ಈಗ MLA ಗಳ ಮುಂದೆ ಹೋಗಿ ಪೆನ್ ಕೊಡಿ ಎಂದು ಡಿಕೆಶಿ ಅಂಗಲಾಚೋ ಸ್ಥಿತಿ ಬಂದಿದೆ. ಇದನ್ನ ನೋಡಿದ್ರೆ ಅವರ ಬಗ್ಗೆ ಕರುಣೆ ಬರುತ್ತಿದೆ. ಡಿಕೆಶಿಗೆ ಧೈರ್ಯ ಇದ್ದರೆ ಪವರ್ ಶೇರಿಂಗ್ ಮಾತುಕತೆ ವೇಳೆ ಯಾರು ಇದ್ದರು ಎಂದು ಹೇಳಲಿ. ಕಾಂಗ್ರೆಸ್ನಲ್ಲಿ ಕತ್ತಲಲ್ಲಿ ಕರಡಿ ಹುಡುಕೋ ಕೆಲಸ ಆಗುತ್ತಿದೆ. ಡಿಕೆಶಿ ಏರಿಯಾದಲ್ಲಿ ಕರಡಿ ಜಾಸ್ತಿ ಇವೆ. ಹೀಗಾಗಿ ಸ್ಪಷ್ಟವಾಗಿ ಮಾತುಕತೆ ಆಗಿದ್ರೆ ಧೈರ್ಯವಾಗಿ ಹೇಳಿ ಎಂದಿದ್ದಾರೆ.
Advertisement
Advertisement
ಸಚಿವ ರಾಜಣ್ಣ, ಪರಮೇಶ್ವರ್ ಎಲ್ಲರೂ ಡಿಕೆಶಿ ವಿರುದ್ದ ಮಾತಾಡ್ತಿದ್ದಾರೆ. ಮಾಗಡಿ ಬಾಲಕೃಷ್ಣ, ಶಾಸಕ ಶಿವಗಂಗಾ ಡಿಕೆಶಿ ಸಿಎಂ ಎಂದು ಘೋಷಣೆ ಮಾಡಿದ್ದಾರೆ. ಡಿಕೆಶಿಗೆ ಬೆಳೆಯೂ ಇಲ್ಲ. ಬೆಳೆ ಪರಿಹಾರವೂ ಇಲ್ಲದಂತೆ ಆಗಿದೆ. ಜನರ ಮುಂದೆ ಇವರು ಹೇಳಿದ್ದು ಏನು? ಒಳ್ಳೆಯ ಸರ್ಕಾರ ಕೊಡ್ತೀನಿ ಎಂದು ಹೇಳಿ ಅಭದ್ರ ಸರ್ಕಾರ ಕೊಟ್ಟಿದ್ದಾರೆ. ನಿತ್ಯ ಕುರ್ಚಿ ಕಿತ್ತಾಟ ನೋಡ್ತಿದ್ದೇವೆ ಎಂದು ವ್ಯಂಗ್ಯವಾಡಿದ್ದಾರೆ.
Advertisement
ಈ ಸರ್ಕಾರದಲ್ಲಿ ಈಗಾಗಲೇ ಎಲ್ಲಾ ಬೆಲೆ ಏರಿಕೆ ಆಗಿದೆ. ಬಜೆಟ್ನಲ್ಲಿ ಇನ್ನೂ ಏನೇನು ಕಾದಿದೆಯೋ ಗೊತ್ತಿಲ್ಲ. ಇಂತಹ ಪಾಪಿ ಸರ್ಕಾರ ಯಾಕೆ ಬಂತು ಎಂದು ಜನ ಹೇಳ್ತಿದ್ದಾರೆ. ಇದನ್ನ ಸರಿ ಮಾಡದೇ ಹೋದ್ರೆ ಇಡೀ ದೇಶದಲ್ಲಿ ಜನ ಕಾಂಗ್ರೆಸ್ ಓಡಿಸಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಕಾಂಗ್ರೆಸ್ ಓಡಿಸೋ ಕಾಲ ಬರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.