ಬೆಳಗಾವಿ: ರಾತ್ರಿ ವೇಳೆ ಭೀಕರ ಸಿಲಿಂಡರ್ ಸ್ಫೋಟ (Cylinder Blast) ಸಂಭವಿಸಿದ ಪರಿಣಾಮ 9 ತಿಂಗಳ ಮಗು ಸೇರಿದಂತೆ ಒಂದೇ ಕುಟುಂಬದ 7 ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಗೋಕಾಕ್ (Gokak) ತಾಲೂಕಿನ ಅಕ್ಕತಂಗೇರಹಾಳ ಗ್ರಾಮದಲ್ಲಿ ನಡೆದಿದೆ.
ರಾತ್ರಿ ಮನೆಮಂದಿಯೆಲ್ಲಾ ಮಲಗಿದ್ದ ವೇಳೆ ಮನೆಯಲ್ಲಿದ್ದ ಸಿಲಿಂಡರ್ ಗ್ಯಾಸ್ (Gas) ಸೋರಿಕೆಯಾಗಿತ್ತು. ಈ ವೇಳೆ ಗ್ಯಾಸ್ ವಾಸನೆಗೆ ಮೊಬೈಲ್ ಟಾರ್ಚ್ ಆನ್ ಮಾಡಿ ನೋಡಲು ಹೋದಾಗ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಮನೆಯ ಹಂಚು ಹಾರಿ ಹೋಗಿದೆ. ಮನೆಯ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಇದನ್ನೂ ಓದಿ: 353ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಗುಡ್ಬೈ – ಬಡತನ, ಪೋಷಕರ ನಿರಾಸಕ್ತಿಯೇ ಕಾರಣ
Advertisement
Advertisement
ಘಟನೆಯಲ್ಲಿ ರಾಜಶ್ರೀ ನಿರ್ವಾಣಿ (42), ಅಶೋಕ ನಿರ್ವಾಣಿ (45), ಸೋಮನಗೌಡ (44), ದೀಪಾ (42), ನವೀನ (14), ವಿದ್ಯಾ (13), ಬಸನಗೌಡ ನಿರ್ವಾಣಿ (9 ತಿಂಗಳು) ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದವರಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ದೇಶದಲ್ಲಿ ಮತ್ತೆ ಕೊರೊನಾ ಆತಂಕ; ಪಕ್ಕದ ಕೇರಳದಲ್ಲಿ ಜೆಎನ್.1 ಸೋಂಕು ಪತ್ತೆ – ಕರ್ನಾಟಕದಲ್ಲೂ ಹೈ ಅಲರ್ಟ್