ಕಾರವಾರ: ಓರಿಸ್ಸಾ (Orissa) ಮೂಲದ ಕಾರ್ಮಿಕರ ವಸತಿ ಪ್ರದೇಶದಲ್ಲಿ ಸಿಲಿಂಡರ್ (Cylinder) ಸ್ಫೋಟಗೊಂಡು ಐದಕ್ಕೂ ಅಧಿಕ ಕಾರ್ಮಿಕರ ಶೆಡ್‍ಗಳು ಸುಟ್ಟು ಭಸ್ಮವಾದ ಘಟನೆ ಕಾರವಾರದ (Karwar) ಮುದಗಾದ ನೌಕಾ ನೆಲೆಯ (Navy) ವ್ಯಾಪ್ತಿಯಲ್ಲಿರುವ ಲೇಬರ್ ಕಾಲೋನಿಯಲ್ಲಿ ನಡೆದಿದೆ.
ಲೇಬರ್ ಕಾಲೋನಿಯಲ್ಲಿ ಶೆಡ್ ಒಂದರಲ್ಲಿ ಇರಿಸಿದ್ದು, ಒಂದು ದೊಡ್ಡ ಸಿಲಿಂಡರ್, ಎರಡು ಸಣ್ಣ ಸಿಲಿಂಡರ್‌ಗಳು ಸ್ಪೋಟಗೊಂಡಿದೆ. ಮಾಹಿತಿ ಪ್ರಕಾರ ಸಿಲೆಂಡರ್‌ನ ವಾಲ್‍ನಲ್ಲಿ ಲೀಕೇಜ್ ಆದ ಕಾರಣ ಈ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ. ಸ್ಫೋಟದ ತೀವ್ರತೆಗೆ ಐದು ಸೆಡ್‍ಗಳು ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣ ಹಾನಿಯಾಗಿದ್ದು, ಎಲ್ಲಾ ವಸ್ತುಗಳು ಸುಟ್ಟುಹೋಗಿದ್ದು, 25 ಮೊಬೈಲ್‍ಗಳು ಸುಟ್ಟು ಕರಕಲಾಗಿದೆ. ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದ ಜನತೆಗೆ ಸಿಹಿ ಸುದ್ದಿ – ದೆಹಲಿಗೆ ನಿತ್ಯ ವಿಮಾನ
ಅದೃಷ್ಟವಶಾತ್ ಶೆಡ್‍ನಲ್ಲಿ ಇದ್ದ ಜನರು ಬೆಂಕಿ ಕಾಣಿಸುತಿದ್ದಂತೆ ಹೊರಬಂದಿದ್ದು ಸುರಕ್ಷಿತವಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನೆಗೆ ಸಂಬಂಧಿಸಿ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಡ್ವಾಣಿ ಭೇಟಿಯಾದ ಪೇಜಾವರಶ್ರೀ- ರಾಮಮಂದಿರ ಹೋರಾಟ ದಿನಗಳ ಮೆಲುಕು