ಬೆಂಗಳೂರು: ಅಪಾರ್ಟ್‌ಮೆಂಟ್‌ನಲ್ಲಿ (Apartment) ಸಿಲಿಂಡರ್ ಸ್ಫೋಟಗೊಂಡ (Cylinder Blast) ಪರಿಣಾಮ ಮನೆಯಲ್ಲಿದ್ದ ಮೂವರು ಗಂಭೀರ ಗಾಯಗೊಂಡ ಘಟನೆ ಪುಲಿಕೇಶಿ ನಗರದ (Pulikeshi Nagar) ಡೆವೀಸ್ ರಸ್ತೆಯಲ್ಲಿ ನಡೆದಿದೆ.
ವಿಶ್ರಾಂ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಮನೆ ಸಂಪೂರ್ಣ ಜಕ್ಕಂ ಆಗಿದೆ. ಬುಧವಾರ ಮುಂಜಾನೆ 5 ಗಂಟೆಯ ಸುಮಾರಿಗೆ ಘಟನೆ ಸಂಭವಿಸಿದೆ. ಘಟನೆಯಲ್ಲಿ ಸಿದ್ದೇಶ್, ಸಿಲಿಕಾ ಹಾಗೂ ಮತ್ತೊಬ್ಬರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಬೆಳಗಾವಿ | ಎಂಬಿಎ ಪದವೀಧರೆ ಪಿ.ಜಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಬ್ಲಾಸ್ಟ್ ಆದ ಗ್ಯಾಸ್‌ನ ಪೀಸ್ ಕೂಡ ಪತ್ತೆ ಆಗದೆ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಸ್ಫೋಟದ ತೀವ್ರತೆಗೆ ಕಿಟಕಿ ಗ್ರಿಲ್‌ಗಳೆಲ್ಲಾ ರಸ್ತೆಗೆ ಬಿದ್ದಿದೆ. ಇದನ್ನೂ ಓದಿ: ಏ.1ರಿಂದ ಟೋಲ್ ದರದಲ್ಲಿ ರಿಯಾಯಿತಿ – ನಿತಿನ್ ಗಡ್ಕರಿ