Bengaluru CityDistrictsKarnatakaLatestMain Post

ಓಖಿ ಚಂಡಮಾರುತಕ್ಕೆ 12 ಜೀವ ಬಲಿ – ಕೇರಳ, ತಮಿಳುನಾಡು, ಬೆಂಗ್ಳೂರಲ್ಲಿ ಮಳೆ

ಚೆನ್ನೈ: ಓಖಿ ಚಂಡಮಾರುತದ ಅಬ್ಬರ ಮುಂದುವರಿದಿದೆ. ಕೇರಳದಲ್ಲಿ ಸೈಕ್ಲೋನ್ ಅಬ್ಬರಕ್ಕೆ ನಾಲ್ಕು ಮಂದಿ, ತಮಿಳುನಾಡಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ.

ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲೂ ನಾಲ್ವರು ಮೃತಪಟ್ಟಿದ್ದಾರೆ. ತಮಿಳುನಾಡು, ಕೇರಳ ಕರಾವಳಿಯಲ್ಲಿ ಇಂದೂ ಕೂಡ ಧಾರಾಕಾರ ಮಳೆಯಾಗಲಿದೆ. ಬಿರುಗಾಳಿ ಸಹಿತ ಮಳೆಯಿಂದಾಗಿ ಗುರುವಾರ ಕೇರಳ ಕರಾವಳಿಯಲ್ಲಿ ಸಮುದ್ರಕ್ಕೆ ಇಳಿದಿದ್ದ 270 ಮಂದಿ ಮೀನುಗಾರರು ಇನ್ನೂ ಪತ್ತೆಯಾಗಿಲ್ಲ. ಒಂದು ನೌಕಾ ಹಡಗು, 28 ಮೀನುಗಾರಿಕಾ ದೋಣಿಗಳ ಮೂಲಕ ಮೀನುಗಾರರ ಹುಡುಕಾಟ ನಡೆಯುತ್ತಿದೆ.

ವಿಶ್ವವಿಖ್ಯಾತ ಶಬರಿಮಲೆ ಅಯ್ಯಪ್ಪ ದೇಗುಲವನ್ನು ಎರಡು ದಿನದ ಮಟ್ಟಿಗೆ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಒಖಿ ಚಂಡಮಾರುತ ಅಬ್ಬರದಿಂದ ಕೇರಳದಲ್ಲೂ ಬಿರುಗಾಳಿ ಸಹಿತ ಭಾರೀ ಮಳೆ ಆಗ್ತಿದ್ದು, ಪಂಪಾ ನದು ಉಕ್ಕಿ ಹರಿಯುತ್ತಿದೆ. ಕಾರ್ ಪಾರ್ಕಿಂಗ್ ಸ್ಥಳ ಸಂಪೂರ್ಣವಾಗಿ ಮುಳುಗಿಹೋಗಿದೆ. ಅಯ್ಯಪ್ಪ ಮಾಲಾಧಾರಿಗಳು ತತ್ತರಿಸಿಹೋಗಿದ್ದಾರೆ. ಮಳೆಯಿಂದ ರಕ್ಷಣೆ ಪಡೆಯುವುದು ಎಲ್ಲಿ ಎಂಬುದನ್ನು ತಿಳಿಯದೇ ಪರದಾಡುತ್ತಿದ್ದಾರೆ. ಕನ್ಯಾಕುಮಾರಿಯಿಂದ ಶಬರಿಮಲೆಗೆ ತೆರಳುವ ಹಾದಿಯಲ್ಲಿ ನೂರಾರು ಮರಗಳು ಧರೆಗುರುಳಿವೆ. ಅಯ್ಯಪ್ಪ ಭಕ್ತರ ಸುರಕ್ಷತೆ ದೃಷ್ಟಿಯಿಂದ ನಾಳೆವರೆಗೂ ಅಯ್ಯಪ್ಪ ದೇಗುಲವನ್ನು ಬಂದ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇತ್ತ ಬೆಂಗಳೂರಲ್ಲೂ ರಾತ್ರಿಯಿಂದಲೂ ತುಂತುರು ಮಳೆ ಮುಂದುವರೆದಿದೆ. ಇನ್ನೂ ಎರಡು ದಿನಗಳ ಕಾಲ ಮಹಾನಗರಿಯಲ್ಲಿ ಮಳೆ ಇರಲಿದೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಿನ್ನೆ ಬೆಳಗ್ಗೆಯಿಂದಲೇ ಸಿಲಿಕಾನ್ ಸಿಟಿಯಲ್ಲಿ ಮಳೆ ಆಗ್ತಿದೆ.

 

Leave a Reply

Your email address will not be published. Required fields are marked *

Back to top button