ಬೆಂಗಳೂರು: ಮಾಂಡಸ್ ಚಂಡಮಾರುತದ (Cyclone Mandous) ರೌದ್ರವತಾರ ಜೋರಾಗಿದೆ. ವಾತಾವರಣದ ಬದಲಾವಣೆಗೆ ರಾಜ್ಯದ ಜನ ಬೆಚ್ಚಿಬಿದ್ದಿದ್ದಾರೆ. ಈಗ ಮತ್ತೆ ಮಳೆಯ ಮುನ್ಸೂಚನೆಯನ್ನ ಹವಮಾನ ಇಲಾಖೆ ನೀಡಿದೆ. ಬೆಂಗಳೂರು (Bengaluru Rains) ಸೇರಿದಂತೆ ರಾಜ್ಯದ ಹಲವೆಡೆ ಇನ್ನೂ ಮೂರು ದಿನ ಚಳಿ ಜೊತೆಗೆ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೇ ರಾಜ್ಯದ 15 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಮೋಡಕವಿದ ವಾತಾವರಣ, ತುಂತುರು ಮಳೆ, ವಿಪರೀತ ಚಳಿಯ ವಾತಾವರಣ ಇದೆ. ಮಾಂಡಸ್ ಚಂಡಮಾರುತದ ಎಫೆಕ್ಟ್ ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲೆಗಳಿಗೆ ತಟ್ಟಿದ್ದು, ಜನ ತತ್ತರಿಸಿ ಹೋಗಿದ್ದಾರೆ. ವೀಕೆಂಡ್ ಮಸ್ತಿಗೆ ಬ್ರೇಕ್ ಹಾಕಿರೋದಲ್ಲದೇ ಇದರ ಕಾಟ ಮುಂದುವರಿಯುವ ಎಚ್ಚರಿಕೆಯನ್ನ ಹವಾಮಾನ ಇಲಾಖೆ ನೀಡಿದೆ. ಇದನ್ನೂ ಓದಿ: ಗೋಕಾಕ್ ತಹಶೀಲ್ದಾರ್ ಮನೆಯಲ್ಲಿ ಕಳ್ಳತನ – ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಎಗರಿಸಿ ಪರಾರಿ
Advertisement
Advertisement
ಡಿಸೆಂಬರ್ 15ರವರೆಗೂ ಮೋಡ ಕವಿದ ವಾತಾವರಣ, ತುಂತುರು ಮಳೆ ಮತ್ತು ಚಳಿ ಇರುತ್ತೆ ಅಂತಾ ಹವಾಮಾನ ಇಲಾಖೆ ಹೈ ಅಲರ್ಟ್ ಅನ್ನು ನೀಡಿದೆ. ಬೆಂಗಳೂರಿನಲ್ಲಿ ಡಿಸೆಂಬರ್ 14 ರವರೆಗೂ ಮಳೆ ಜೊತೆಗೆ ಮೋಡಕವಿದ ವಾತಾವರಣ ಇರೋ ಬಗ್ಗೆ ಕೂಡ ಎಚ್ಚರಿಸಿದೆ. ಇದಲ್ಲದೇ ಕರಾವಳಿ ಭಾಗದ ಮೀನುಗಾರರಿಗೆ ಡಿ. 15 ರವರೆಗೆ ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆ ನೀಡಿದ್ದು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲೂ ಬಿಟ್ಟು ಬಿಡದೆ ಮಳೆಯಾಗುವ ವರದಿಯನ್ನ ಹವಾಮಾನ ಇಲಾಖೆ ನೀಡಿದೆ.
Advertisement
2016 ವಾದ್ರಾ ಚಂಡಮಾರುತ ವೇಳೆ ಬೆಂಗಳೂರಿನಲ್ಲಿ ಗರಿಷ್ಟ ತಾಪಮಾನ ಅತ್ಯಂತ ಕಡಿಮೆ ದಾಖಲಾಗಿತ್ತು. ಸಾಮಾನ್ಯವಾಗಿ ಚಳಿಗಾಲದ ಡಿಸೆಂಬರ್ ತಿಂಗಳು ಗರಿಷ್ಟ 25-27 ಡಿಗ್ರಿ ಇರುತ್ತೆ. ಮಾಂಡಸ್ ಚಂಡಮಾರುತ ಪರಿಣಾಮ ತಾಪಮಾನ ಇಳಿಕೆಯಾಗಿದೆ. ಬಂಗಾಳ ಉಪಸಾಗರ ವಾಯುಭಾರ ಕುಸಿತದ ಪರಿಣಾಮ ಕಳೆದೆರಡು ದಿನಗಳಿಂದ ಗರಿಷ್ಟ ತಾಪಮಾನ ಇಳಿಮುಖದ ಜೊತೆಗೆ ಚಳಿ ವಾತಾವರಣ ಮೂರು ದಿನ ಮುಂದುವರಿಕೆಯಾಗಲಿದ್ದು, ಕನಿಷ್ಠ ತಾಪಮಾನ ಕೂಡ ಇಳಿಕೆಯ ಎಚ್ಚರಿಕೆಯನ್ನ ನೀಡಿದೆ. ಇನ್ನೊಂದು ವಾರ ಕನಿಷ್ಟ ಗರಿಷ್ಟ ತಾಪಮಾನ ಇರಲಿದೆ ಅಂತಾ ವರದಿಯಾಗಿದಡೆ. ಇದನ್ನೂ ಓದಿ: ಬೆಂಗಳೂರು – ಮಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ, ನಾಲ್ವರ ದುರ್ಮರಣ
Advertisement
ಚಂಡಮಾರುತದ ಪರಿಣಾಮದಿಂದಾಗಿ ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ ಶುರುವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಒಂದಡೆ ವ್ಯಾಪಾರವಿಲ್ಲದೇ ಅಂಗಡಿಗಳು ಖಾಲಿ ಖಾಲಿಯಾಗಿವೆ. ಮತ್ತೊಂದಡೆ ವಿಪರೀತ ಚಳಿ, ಜಿಟಿಜಿಟಿ ಮಳೆಗೆ ಮನೆಯಿಂದ ಹೊರಬಾರದೇ ಜನ ಮನೆಯಲ್ಲೇ ಉಳಿಯುವಂತಾಗಿದೆ. ನಿನ್ನೆ ವೀಕೆಂಡ್ ಇದ್ರೂ ಮಾಲ್‌ಗಳು ಸೇರಿ ಇತರೆ ಶಾಪಿಂಗ್ ಸ್ಪಾಟ್‌ಗಳು ಖಾಲಿ ಖಾಲಿಯಾಗಿದ್ದವು.