ಬೆಂಗಳೂರು: ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶದ ಕರಾವಳಿ ಭಾಗದಲ್ಲಿ ಫೆಂಗಲ್ ಚಂಡಮಾರುತ (Cyclone Fengal) ಅಬ್ಬರಿಸಿ ಜನರನ್ನ ಹೈರಾಣಾಗಿಸಿದೆ. ರೈಲು, ವಿಮಾನ ಹಾಗೂ ಬಸ್ ಸಂಚಾರದಲ್ಲಿ ಭಾರಿ ವ್ಯತ್ಯಯ ಕಂಡುಬಂದಿದ್ದು, ಜನ ಪರದಾಡುವಂತಾಗಿದೆ. ಇತ್ತ ಕರುನಾಡಿಗೂ ಚಂಡಮಾರುತದ ಎಫೆಕ್ಟ್ ತಟ್ಟಿದ್ದು, ಹಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ (School , College Leave) ರಜೆ ಘೋಷಣೆ ಮಾಡಲಾಗಿದೆ. ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ…
Advertisement
ಕೋಲಾರ:
ಕಳೆದ ಎರಡು ದಿನಗಳಿಂದ ಕೋಲಾರದಲ್ಲಿ ನಿರಂತರವಾಗಿ ಜಿಟಿ ಜಿಟಿ ಮಳೆ ಮತ್ತು ಶೀತಗಾಳಿ ವಾತಾವರಣ ಇದೆ. ಅಲ್ಲದೇ ಹವಾಮಾನ ಇಲಾಖೆ ಮುಂದಿನ ಮೂರು ದಿನ ನಿರಂತರ ಮಳೆ ಇರುವುದಾಗಿ ಹೇಳಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು, ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
Advertisement
ಚಾಮರಾಜನಗರ:
ಭಾನುವಾರ ರಾತ್ರಿಯಿಂದ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಶಾಲಾ, ಕಾಲೇಜುಗಳಿಗೆ ಡಿಸಿ ಶಿಲ್ಪಾನಾಗ್ ರಜೆ ಘೋಷಣೆ ಮಾಡಿದ್ದಾರೆ.
Advertisement
ಮೈಸೂರು:
ನಗರ ಹಾಗೂ ಜಿಲ್ಲೆಯಲ್ಲೂ ಜಿಟಿ ಜಿಟಿ ಮಳೆ ಬಿಟ್ಟು ಬಿಡದೇ ಸುರಿಯುತ್ತಿರುವುದರಿಂದ ಜಿಲ್ಲಾದ್ಯಂತ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಸೂಚನೆ ಮೇರೆಗೆ ಡಿಡಿಪಿಐ ಎಸ್.ಟಿ ಜವರೇಗೌಡ ಅವರು ಆದೇಶಿಸಿದ್ದಾರೆ.
Advertisement
ಚಿಕ್ಕಬಳ್ಳಾಪುರ:
ಫೆಂಗಲ್ ಸೈಕ್ಲೋನ್ ಎಫೆಕ್ಟ್ ಕಾರಣ ಜಿಲ್ಲಾದ್ಯಂತ ಜಿಟಿ ಮಳೆ ಹಾಗೂ ವಿಪರೀತ ಚಳಿ ಇರುವ ಹಿನ್ನೆಲೆಯಲ್ಲಿ ಇಂದು (ಡಿ.2) ಚಿಕ್ಕಬಳ್ಳಾಪುರ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ರಜೆ ಘೋಷಣೆ ಮಾಡಿದ್ದಾರೆ. ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಾಂತ ಮೋಡ ಕವಿದ ವಾತವರಣವಿತ್ತು. ವಿಪರೀತ ಚಳಿ ಶೀತಗಾಳಿ ಆವರಿಸಿದೆ. ಹಾಗಾಗಿ ರಜೆ ಘೋಷಣೆ ಮಾಡಲಾಗಿದೆ.
ಮಂಡ್ಯ:
ಫೆಂಗಲ್ ಚಂಡಮಾರುತದ ಬಿಸಿ ತಟ್ಟಿದ್ದು ಜಿಲ್ಲಾದ್ಯಂತ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಡಿಸಿ ಡಾ.ಕುಮಾರ್ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ.