ಕೊಪ್ಪಳ: ರಾಮ ಬಂಟ ಹನುಮಂತನ ನಾಡು ಅಂಜನಾದ್ರಿಯಿಂದ (Anjanadri) ಅಯೋಧ್ಯೆಗೆ (Ayodhya) ಸೈಕಲ್ ಮೂಲಕ ತೆರಳಲು ಅಡಿ ಇಟ್ಟಿರೋ ಯುವಕ ಪ್ರಯಾಣ ಆರಂಭಿಸಿದ್ದಾನೆ.
ವಿಜಯಪುರ (Vijayapura) ಜಿಲ್ಲೆ ಬಸವನ ಬಾಗೇವಾಡಿ ತಾಲೂಕು ತಾಳೇವಾಡ ಗ್ರಾಮದ ಬಿ. ಸುರೇಶ ಕೋಟಗೊಂಡ ಎಂಬ ಯುವಕ ಈ ಸಾಹಸ ಯಾತ್ರೆ ಕೈಗೊಂಡಿದ್ದಾನೆ. ಇನ್ನು ಸೈಕಲ್ ಯಾತ್ರೆಯುದ್ದಕ್ಕೂ ಅಲ್ಲಲ್ಲಿ ಗೋಡೆ ಮೇಲೆ ರಾಮನ ಭಾವಚಿತ್ರ ಬಿಡಿಸುವ ಸಂಕಲ್ಪ ಮಾಡಿರುವುದು ವಿಶೇಷ. ಅಯೋಧ್ಯೆಯಲ್ಲಿ ಇದೇ ಜ.22 ರಂದು ರಾಮಮಂದಿರ ಲೋಕಾರ್ಪಣೆ ಆಗುತ್ತಿರುವ ಹಿನ್ನೆಲೆ ಸುರೇಶ ಈ ಸೈಕಲ್ ಯಾತ್ರೆ ಕೈಗೊಂಡಿದ್ದಾನೆ. ಇದನ್ನೂ ಓದಿ: ರಾಮಮಂದಿರಕ್ಕಾಗಿ 30 ವರ್ಷಗಳಿಂದ ‘ಮೌನ ವ್ರತ’ – ಒಂದು ಮಾತೂ ಆಡದೇ ಇದ್ದ ಮಹಿಳೆ ಮುಖದಲ್ಲಿ ಮಂದಹಾಸ
Advertisement
Advertisement
ರಾಮ ಭಕ್ತ ಹನುಮಂತನ ಜನ್ಮಸ್ಥಳ ಅಂಜನಾದ್ರಿಯಿಂದ ರಾಮ ಜನ್ಮಭೂಮಿ ಅಯೋಧ್ಯೆವರೆಗೂ ತೆರಳುವ ಉದ್ದೇಶ ಹೊಂದಿರುವ ಯುವಕ, ಇಂದು ಅಂಜನಾದ್ರಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗೋಡೆ ಬರಹದ ಅಭಿಯಾನ ಶುರು ಮಾಡಿದ್ದಾನೆ.
Advertisement
ಈ ಸಾಹಸ ಮೆಚ್ಚಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಭಿಮಾನಿಗಳು ಸ್ಥಾಪಿಸಿಕೊಂಡಿರುವ `ಮೋದಿ ಬ್ರಿಗೇಡ್’ನ ಕೊಪ್ಪಳ ಜಿಲ್ಲಾ ಘಟಕದಿಂದ ಯುವಕನಿಗೆ ನೆರವಾಗಲಿ ಎಂಬ ಕಾರಣಕ್ಕೆ ಉಚಿತವಾಗಿ ಸೈಕಲ್ ಕೊಡುಗೆಯಾಗಿ ನೀಡಲಾಗಿದೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ – ಜ.22ರಂದು ಉತ್ತರ ಪ್ರದೇಶದಲ್ಲಿ ಶಾಲಾ ಕಾಲೇಜುಗಳಿಗೆ ರಜೆ
Advertisement
ಅಳಿಲು ಸೇವೆ
ಸೈಕಲ್ ಯಾತ್ರೆ ಬಗ್ಗೆ ಮಾತನಾಡಿದ ಯುವಕ ಸುರೇಶ, ದೇಶದ ಇತಿಹಾಸದಲ್ಲಿ ರಾಮಮಂದಿರ ಲೊಕಾರ್ಪಣೆ ಸುವರ್ಣ ಅಕ್ಷರದಲ್ಲಿ ಬರೆದಿಡಬೇಕು. ಇಂತಹ ಐತಿಹಾಸಿಕ ಘಟನೆಗೆ ನನ್ನದೂ ಒಂದು ಅಳಿಲು ಸೇವೆ ಇರಲಿ ಎಂಬ ಕಾರಣಕ್ಕೆ ನಾಡಿನಾದ್ಯಂತ ಪ್ರಭು ಶ್ರೀರಾಮಚಂದ್ರನ ಚಿತ್ರ ಬಿಡಿಸುವ ಗುರಿ ಇರಿಸಿಕೊಂಡಿದ್ದೇನೆ. ಮುಖ್ಯವಾಗಿ ಶ್ರೀರಾಮನ ಪರಮ ಭಕ್ತ ಹನುಮನ ಜನ್ಮ ಸ್ಥಾನದಿಂದಲೇ ಈ ಕಾರ್ಯ ಮಾಡಬೇಕು ಎಂಬ ಉದ್ದೇಶದಿಂದ ಇಲ್ಲಿಗೆ ಬಂದು ಪೂಜೆ ಸಲ್ಲಿಸಿ ಚಿತ್ರ ಬಿಡಿಸುವ ಕಾರ್ಯ ಹಮ್ಮಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಕಿಷ್ಕಿಂಧೆಯಿಂದ ಅಯೋಧ್ಯೆವರೆಗೂ ಎದುರಾಗುವ ಗೋಡೆಗಳಿಗೆ ಶ್ರೀರಾಮಚಂದ್ರನ ಚಿತ್ರ ಬರೆಯುತ್ತೇನೆ. ದಿನಕ್ಕೆ 50ರಿಂದ 70 ಕಿಲೋ ಮೀಟರ್ ಸಂಚರಿಸುವ ಗುರಿ ಇರಿಸಿಕೊಂಡಿದ್ದೇನೆ. ಪ್ರತಿ ಗ್ರಾಮದಲ್ಲಿ ಕನಿಷ್ಟ 2 ರಿಂದ 4 ಕಡೆ ಗೋಡೆ ಮೇಲೆ ಶ್ರೀರಾಮನ ಭಾವಚಿತ್ರ ಮೂಡಿಸುವ ಉದ್ದೇಶವಿದೆ. ಊಟ, ವಸತಿ, ಬಣ್ಣಕ್ಕೆ ದಾನಿಗಳು ನೆರವು ನೀಡುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: Ayodhya Ram Mandir: ಶೀಘ್ರದಲ್ಲೇ ಸಂಚರಿಸಲಿವೆ ನೋಯ್ಡಾದಿಂದ ಅಯೋಧ್ಯೆಗೆ ಡೈರೆಕ್ಟ್ ಬಸ್