ಬೆಂಗಳೂರು: ಎಂಜಿನಿಯರಿಂಗ್ ಸೀಟ್ ಕೊಡಿಸುತ್ತೇನೆ ಅಂತಾ ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ರಾಜೇಶ್ವರ್ ಬಂಧಿತ ಆರೋಪಿ. ಸೈಬರ್ ಖದೀಮನು ರೇವಾ ಕಾಲೇಜ್‍ನಲ್ಲಿ ಮಿಸ್ ಆಗಿದ್ದ ಎಂಜಿನಿಯರಿಂಗ್ ಸೀಟ್ ಕೊಡಿಸುತ್ತೇನೆ ಅಂತಾ ವಂಚಿಸಿದ್ದನು. ದೂರುದಾರರ ಮಗಳು ಕಾಲೇಜ್‍ನಲ್ಲಿ (ಇಸಿಎಮ್) ಇಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ಬ್ರಾಂಚ್ ಪಡೆದಿದ್ದರು. ಆದರೆ (ಸಿಎಸ್) ಕಂಪ್ಯೂಟರ್ ಸೈನ್ಸ್ ಬ್ರಾಂಚ್ ಬದಲಾವಣೆಗಾಗಿ ಕಾಯುತ್ತಿದ್ದರು. ಈ ವೇಳೆ ಖದೀಮನು ಮೆಸೇಜ್ ಮೂಲಕ ಕೆಲ ಬ್ರಾಂಚ್‍ಗಳ ಸೀಟ್ ಖಾಲಿಯಾಗಿದ್ದು, ಸಿಎಸ್ ಬ್ರಾಂಚ್‍ಗೆ ಬದಲಾಯಿಸಿ ಸೀಟ್ ಕೊಡಿಸುವುದಾಗಿ ಮೆಸೇಜ್ ಮಾಡಿದ್ದನು. ಈ ವೇಳೆ ವಿದ್ಯಾರ್ಥಿನಿ ತಂದೆಗೆ ಮೆಸೇಜ್ ಬಂದಿದ್ದೇ ತಡ ನಂಬರ್‍ಗೆ ಕರೆ ಮಾಡಿ ಮಾತನಾಡಿದ್ದರು. ಇದನ್ನೂ ಓದಿ: ಮತ್ತೆ ಸಚಿವರ ವಿರುದ್ಧ ತಿರುಗಿ ಬಿದ್ದ ರೇಣುಕಾಚಾರ್ಯ – ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು
Advertisement
Advertisement
ನಂತರ ವಂಚಕನು ಅವರಿಂದ ಸಿಎಸ್ ಸೀಟ್ ಕೊಡಿಸುತ್ತೇನೆ ಅಂತಾ 1 ಲಕ್ಷದ 27 ಸಾವಿರದ 500 ರೂಪಾಯಿಗಳನ್ನು ತನ್ನ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದನು. ಅಕೌಂಟ್‍ಗೆ ಹಣ ಬರುತ್ತಿದ್ದಂತೆಯೇ ಅವನು ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ಇತ್ತ ವಿದ್ಯಾರ್ಥಿನಿ ತಂದೆ ಆರೋಪಿ ಮೊಬೈಲ್‍ಗೆ ಕರೆ ಮಾಡಿ ಬೇಸತ್ತಿದ್ದರು. ಇದನ್ನೂ ಓದಿ: ಸಿ.ಎಂ.ಇಬ್ರಾಹಿಂ ಬೆನ್ನಿಗೆ ಚೂರಿ ಹಾಕಿದ್ರು ಸಿದ್ದರಾಮಯ್ಯ: ಶ್ರೀರಾಮುಲು ಟೀಕೆ
Advertisement
ನಂತರ ಅವರು ತಾವು ಮೋಸ ಹೋಗಿದ್ದು ಗೊತ್ತಾಗಿ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ಸಂಬಂಧ ಆರೋಪಿಯನ್ನ ಬಂಧಿಸಿದ್ದಾರೆ. ಬಂಧಿತನಿಂದ 3 ಮೊಬೈಲ್, 4 ಲ್ಯಾಪ್ ಟಾಪ್, 7 ಸಿಮ್, 21 ಗ್ರಾಂ ಚಿನ್ನ, 3 ಚಿನ್ನದ ನಾಣ್ಯಗಳು ಹಾಗೂ 1 ಲಕ್ಷದ 72 ಸಾವಿರದ 500 ಹಣವನ್ನು ಜಪ್ತಿ ಮಾಡಿದ್ದಾರೆ. ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.