– ʻಇರುಂಬು ತಿರೈʼ ಸಿನಿಮಾ ಶೈಲಿಯ ಸೈಬರ್ ಜಾಲ ಪತ್ತೆ
ಬೆಂಗಳೂರು: 2018ರಲ್ಲಿ ತೆರೆ ಕಂಡ ತಮಿಳಿನ ʻಇರುಂಬು ತಿರೈʼ ಸಿನಿಮಾ (Irumbu Thirai Cinema) ಸೈಬರ್ ಜಗತ್ತನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು. ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈ ಸಿನಿಮಾ ಶೈಲಿಯಲ್ಲೇ ನಡೆಯುತ್ತಿದ್ದ ಅಪರಾಧ ಕೃತ್ಯವೊಂದನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಪತಿ ಪತ್ನಿಯರ, ಪ್ರೇಮಿಗಳ ಕಾಲ್ ಡಿಟೈಲ್ಸ್‌ಗಳನ್ನ (Call Details) ಹಣಕ್ಕಾಗಿ ಅಕ್ರಮವಾಗಿ ನೀಡ್ತಿದ್ದ ಪೊಲೀಸ್ ಕಾನ್ಸ್ಟೇಬಲ್ ಹಾಗೂ ಪ್ರೈವೆಟ್ ಡಿಟೆಕ್ಟೀವ್ ಏಜೆನ್ಸಿಯ ಕಿಂಗ್‌ಪಿನ್‌ನನ್ನು ಸಿಸಿಬಿ ಪೊಲೀಸರು (CCB Police) ಅರೆಸ್ಟ್ ಮಾಡಿದ್ದಾರೆ.
ಹೌದು. ಅರ್ಜುನ್ ಸರ್ಜಾ, ವಿಶಾಲ್, ಸಮಂತಾ ನಟನೆಯ ಈ ಸಿನಿಮಾ ಇಡೀ ಸೈಬರ್ ಜಗತ್ತಿನ (Cyber World) ಕುಕೃತ್ಯಗಳನ್ನ ಬಿಚ್ಚಿಟ್ಟಿತ್ತು. ನಾವು ಬಳಸುವ ಮೊಬೈಲ್‌ಗಳೇ ನಮಗೆ ಎಷ್ಟು ಅಪಾಯಕಾರಿಯಾಗುತ್ತೆ? ನಾವು ಸೈಬರ್ ಸೆಂಟರ್, ಅಪ್ಲಿಕೇಷನ್‌ಗಳಿಗೆ ಬಳಸುವ ದಾಖಲಾತಿಗಳು, ಕೆಲ ಮಳಿಗೆಗಳಲ್ಲಿ ಜೆರಾಕ್ಸ್ ಮಾಡಿಸಲು ಮುಂದಾದಾಗ ನಮಗೇ ಗೊತ್ತಿಲ್ಲದೇ ನಮ್ಮ ದಾಖಲಾತಿಗಳನ್ನು ಕದ್ದು, ಮಾರಾಟ ಮಾಡುವುದು. ಕಂಡ ಕಂಡ ಆಫರ್‌ಗಳಿಗಾಗಿ ನೀಡುವ ದಾಖಲಾತಿ ಕೊನೆಗೆ ನಮಗೆ ಕುತ್ತು ತರುತ್ತದೆ ಎಂಬೆಲ್ಲಾ ರಹಸ್ಯಗಳನ್ನ ಈ ಸಿನಿಮಾ ಕಣ್ಣ ಮುಂದಿಟ್ಟಿತ್ತು. ಇದೀಗ ಬೆಂಗಳೂರಿನಲ್ಲಿ ಅದೇ ಮಾದರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಾತೃತ್ವದ ರಜೆ ವೇಳೆ ಬೇರೆಯವರ ನೇಮಕ – ಹುದ್ದೆಯಲ್ಲಿ ಮುಂದುವರೆಯುವಂತೆ ಹೈಕೋರ್ಟ್ ತೀರ್ಪು
ಏನಿದು ಥ್ರಿಲ್ಲಿಂಗ್ ಕ್ರೈಂ ಸ್ಟೋರಿ?
ಕಳೆದ ಮೇ ತಿಂಗಳಲ್ಲಿ ಸಿಸಿಬಿ ಹಾಗೂ ವಿಜಯನಗರ ಉಪವಿಭಾಗದ ಪೊಲೀಸರು ಖಾಸಗಿ ಡಿಟೆಕ್ಟಿವ್ ಏಜೆನ್ಸಿಗಳ ಕಳ್ಳಾಟವನ್ನ ಬಯಲಿಗೆಳೆದಿದ್ದರು. ಇದೇ ಕೇಸ್‌ನಲ್ಲಿ ಇದೀಗ ಸಿಸಿಬಿ ಪೊಲೀಸ್ರು ಸಿಐಡಿ ಪೊಲೀಸ್ ಸಿಬ್ಬಂದಿಯನ್ನ ಬಂಧಿಸಿದ್ದಾರೆ. ಅನಧಿಕೃತವಾಗಿ ಸಿಡಿಆರ್ ಪಡೆಯುತ್ತಿದ್ದ ಆರೋಪದ ಮೇಲೆ ಮಹಾನಗರಿ ಡಿಟೆಕ್ಟಿವ್ ಮತ್ತು ಸೆಕ್ಯುರಿಟಿ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್, ರಾಜಧಾನಿ ಕಾರ್ಪೊರೇಟ್ ಸರ್ವಿಸ್ ಹೆಸರಿನ ಕಚೇರಿಗಳ ಮೇಲೆ ದಾಳಿ ನಡೆಸಿ ಪುರುಷೋತ್ತಮ ಕುಮಾರ್, ತಿಪ್ಪೇಸ್ವಾಮಿ, ಮಹಾಂತಗೌಡ, ರೇವಂತ, ಗುರುಪಾದಸ್ವಾಮಿ, ಶ್ರೀನಿವಾಸ ಮತ್ತು ಭರತ್ ಎಂಬುವವರನ್ನ ಬಂಧಿಸಲಾಗಿತ್ತು. ಇದನ್ನೂ ಓದಿ: ವಿನೇಶ್ ಫೋಗಟ್‌ಗೆ 4 ಕೋಟಿ ರೂ. ಬಹುಮಾನ – ಬೆಳ್ಳಿ ಪದಕ ವಿಜೇತೆ ಮಾದರಿಯಲ್ಲಿ ಗೌರವಿಸಲು ಸಕಲ ಸಿದ್ಧತೆ
ಇದೀಗ ಈ ತಂಡದ ಕಿಂಗ್ ಪಿನ್ ಆಂಧ್ರದ ಪುಲಿವೆಂದುಲು ಮೂಲದ ನಾಗೇಶ್ವರ ರೆಡ್ಡಿಯನ್ನ ಬಂಧಿಸಲಾಗಿದೆ. ಇನ್ನೂ ಈ ನಾಗೇಶ್ವರ ರೆಡ್ಡಿಗೆ ಸಿಡಿಆರ್ ನೀಡ್ತಿದ್ದ ಸಿಐಡಿ ಪೊಲೀಸ್ ಸಿಬ್ಬಂದಿ ಮುನಿರತ್ನ ಎಂಬಾತನನ್ನು ಸಹ ಬಂಧಿಸಲಾಗಿದೆ. ಮುನಿರತ್ನ ಹಲವು ವರ್ಷಗಳಿಂದ ಸಿಐಡಿ ಟೆಕ್ನಿಕಲ್ ಸೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಹಿರಿಯ ಅಧಿಕಾರಿಗಳು ಕೇಸ್ ಸಂಬಂಧ ಅಧಿಕೃತವಾಗಿ ಸಿಡಿಆರ್ ಪಡೆಯಲು ಸರ್ವಿಸ್ ಪ್ರೊವೈಡರ್ ಗಳಿಗೆ ನೀಡುವ ಪತ್ರದಲ್ಲಿ ತನಗೆ ಬೇಕಾದ ಫೋನ್ ನಂಬರ್‌ಗಳನ್ನ ಸೇರಿಸಿ ಸಿಡಿಆರ್ ಪಡೆದು ಹಣಕ್ಕಾಗಿ ನಾಗೇಶ್ವರ್ ರಾವ್ ಗೆ ಮಾರಾಟ ಮಾಡ್ತಿದ್ದ. ಇದನ್ನೂ ಓದಿ: ಬೆಳಗ್ಗೆ ಮದುವೆ, ಮಧ್ಯಾಹ್ನ ಮಚ್ಚಿನಿಂದ ಹೊಡೆದಾಟ – ನಿನ್ನೆ ವಧು, ಇಂದು ವರ ಸಾವು!
ಇನ್ನು ಗಂಡ ಹೆಂಡತಿ, ಪ್ರೇಮಿಗಳ ನಡುವಿನ ಅನುಮಾನಕ್ಕೆ ಸಿಡಿಆರ್ ಗಳು ಹೆಚ್ಚು ಬಳಕೆಯಾಗಿರೊ ಸಾಧ್ಯತೆಯಿದೆ. ಸಿಡಿಆರ್ ಪಡೆಯುತ್ತಿದ್ದವರು ಯಾರು ಅಂತ ನೋಡೊದಾದ್ರೆ ಹೆಚ್ಚಾಗಿ ಗಂಡ ಅಥವಾ ಹೆಂಡತಿ ಮತ್ತು ಪ್ರೇಮಿಗಳು ಸಂಬಂಧದಲ್ಲಿ ಅನುಮಾನ ಮೂಡಿ ತಮ್ಮ ಪ್ರೀತಿ ಪಾತ್ರರ ಯಾರು ಸಂಪರ್ಕದಲ್ಲಿದ್ದಾರೆ ಅನ್ನೋದನ್ನ ತಿಳಿದುಕೊಳ್ಳಲು ಈ ಕಾಲ್ ಡಿಟೈಲ್ಸ್‌ನ ಅನಧಿಕೃತವಾಗಿ ಪಡೆದುಕೊಳ್ಳುತ್ತಿದ್ದರಂತೆ. ಅಷ್ಟೇ ಅಲ್ಲದೇ ಬ್ಯುಸಿನೆಸ್ ಮೆನ್‌ಗಳು ಕೆಲ ರಾಜಕೀಯ ವ್ಯಕ್ತಿಗಳು ತಮ್ಮ ಎದುರಾಳಿಗಳ ಸಿಡಿಆರ್ ಪಡೆದಿರೋ ಶಂಕೆ ವ್ಯಕ್ತವಾಗಿದೆ. ಇದ್ರಲ್ಲಿ ಕೆಲ ಪೊಲೀಸ್ ಅಧಿಕಾರಿಗಳ ಪತ್ನಿಯರು ತಮ್ಮ ಪತಿಯ ಕಾಲ್ ಡಿಟೈಲ್ ಪಡೆದಿದ್ದಾರಂತೆ. ಸದ್ಯ ನಾಗೇಶ್ವರ ರೆಡ್ಡಿ ಮತ್ತು ಪೊಲೀಸ್ ಸಿಬ್ಬಂದಿ ಮುನಿರತ್ನ ಬಂಧಿಸಿರೋ ಸಿಸಿಬಿ ಹೆಚ್ಚಿನ ವಿಚಾರಣೆಗೆ ಒಳಪಡಿಸ್ತಿದೆ.