Connect with us

ಶಶಿಕಲಾ ಸೆಲ್‍ಗೆ ಹೋಗಿ ಹಾಯ್ ಎಂದ ಸೈನೈಡ್ ಮಲ್ಲಿಕಾ

ಶಶಿಕಲಾ ಸೆಲ್‍ಗೆ ಹೋಗಿ ಹಾಯ್ ಎಂದ ಸೈನೈಡ್ ಮಲ್ಲಿಕಾ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರೋ ಶಶಿಕಲಾ ಈಗ ಸೈನೈಡ್ ಮಲ್ಲಿಕಾ ಇರುವ ಸೆಲ್ ಪಕ್ಕದಲ್ಲೇ ಸೆರೆವಾಸ ಅನುಭವಿಸುತ್ತಿದ್ದಾರೆ.

ಶಶಿಕಲಾ ಇದ್ದ ಸೆಲ್‍ಗೆ ಸೈನೇಡ್ ಮಲ್ಲಿಕಾ ವಿಸಿಟ್ ಕೊಟ್ಟು ಚಿನ್ನಮ್ಮನಿಗೆ ಹಾಯ್ ಎಂದಿದ್ದಾಳೆ. ಆದ್ರೆ ಮಲ್ಲಿಕಾಗೆ ಯಾವುದೇ ಪ್ರತಿಕ್ರಿಯೆ ನೀಡದೆ ಗುರಾಯಿಸಿ ನೋಡಿ ಶಶಿಕಲಾ ಮೌನವಾಗಿದ್ದರು. ಆದ್ರೂ ಸುಮ್ಮನಾಗದ ಮಲ್ಲಿಕಾ 2ನೇ ಬಾರಿ ಶಶಿಕಲಾರನ್ನ ಮಾತನಾಡಿಸಲು ಪ್ರಯತ್ನಿಸಿದ್ದು, ಶಶಿಕಲಾ ಪ್ರತಿಕ್ರಿಯಿಸದೇ ಸ್ಮೈಲ್ ಕೊಟ್ಟು ಸುಮ್ಮನಾದರು ಎಂದು ಪೊಲೀಸ್ ಮೂಲಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿವೆ.

ಚಿನ್ನಾಭರಣದ ಆಸೆಗಾಗಿ ಮಹಿಳೆಯರಿಗೆ ಸೈನೈಡ್ ನೀಡಿ ಕೊಲೆ ಮಾಡಿದ ಆರೋಪದಲ್ಲಿ ಜೈಲು ಸೇರಿರೋ ಮಲ್ಲಿಕಾ ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾಳೆ.

ಶಶಿಕಲಾ ಜೈಲಲ್ಲಿ ಸರಿಯಾಗಿ ನಿದ್ದೆ ಮಾಡದೆ 10/8ರ ವಿಸ್ತೀರ್ಣದ ಸೆಲ್‍ನಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಶಶಿಕಲಾ ತನ್ನ ಸೆಲ್‍ನಲ್ಲಿರೋ ಇಳವರಸಿ ಜೊತೆ ಕೂಡಾ ಸರಿಯಾಗಿ ಮಾತಾಡ್ತಿಲ್ಲ. ಹಾಗೊಮ್ಮೆ ಹೀಗೊಮ್ಮೆ ಮಾತ್ರ ಇಳವರಸಿ ಜೊತೆ ಮಾತನಾಡುತ್ತಿದ್ದು, ಯಾರನ್ನೂ ಭೇಟಿ ಮಾಡಲು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಶಿಕಲಾಗೆ ಚಿಕ್ಕ ಕೋಟ್ ಒಂದನ್ನು ಕೊಡಲಾಗಿದೆ. ಬಿಳಿ ಸೀರೆ ಕೊಟ್ರೂ ಶಶಿಕಲಾ ಅದನ್ನು ತೊಟ್ಟಿಲ್ಲ. ಈವರೆಗೆ ತಮ್ಮ ಹಳೇ ಸೀರೆಯನ್ನು ಬದಲಿಸಿಲ್ಲ. ರಾತ್ರಿ ಕೆಲವೇ ಗಂಟೆ ನಿದ್ರೆ ಮಾತ್ರ, ಬೆಳಗ್ಗೆ ಬೇಗ ಎಳ್ತಿದ್ದಾರೆ. ಸೆಲ್‍ನಿಂದ ಒಮ್ಮೆ ಕೂಡಾ ಶಶಿಕಲಾ ಹೊರಗೆ ಬಂದಿಲ್ಲ.

Advertisement
Advertisement