ನವದೆಹಲಿ: ಅಕ್ಟೋಬರ್ 16 ರಿಂದ 31ರ ವರೆಗೆ ತಮಿಳುನಾಡಿಗೆ ಪ್ರತಿ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ.
ಕಾವೇರಿ ನದಿ ನೀರು (Cauvery River Water) ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ ಮಹತ್ವದ ಸಭೆ ನಡೆಸಿದ ಸಮಿತಿಯು ತಮಿಳುನಾಡಿಗೆ (Tamil Nadu) ಇನ್ನೂ 15 ದಿನಗಳ ಕಾಲ ಅಂದ್ರೆ ಅಕ್ಟೋಬರ್ 16ರಿಂದ 31ರ ವರೆಗೆ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸಭೆ ನಡೆಸಿದ ಸಮಿತಿಯ ಅಧ್ಯಕ್ಷ ವಿನೀತ್ ಗುಪ್ತಾ ಶಿಫಾರಸ್ಸು ಮಾಡಿದ್ದಾರೆ. ಇದನ್ನೂ ಓದಿ: ನಾಳೆ CWRC ಸಭೆ – ಈ ಬಾರಿ ತಮಿಳುನಾಡು ಬೇಡಿಕೆಯಿಟ್ಟ ನೀರಿನ ಪ್ರಮಾಣ ಎಷ್ಟು ಗೊತ್ತಾ?
Advertisement
Advertisement
ಇದೇ ಸೆಪ್ಟೆಂಬರ್ 29 ರಂದು 15 ದಿನಗಳವರೆಗೆ ಪ್ರತಿ ನಿತ್ಯ 3,000 ಕ್ಯೂಸೆಕ್ ಕಾವೇರಿ ನೀರನ್ನು ತಮಿಳುನಾಡಿಗೆ (Tamil Nadu) ಹರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಆದೇಶಿಸಿತ್ತು. ಆದೇಶ ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನಡೆಸಿತು. ಇದನ್ನೂ ಓದಿ: ಅ.15 ರವರೆಗೆ ತಮಿಳುನಾಡಿಗೆ 3,000 ಕ್ಯೂಸೆಕ್ ನೀರು ಹರಿಸಿ – ಕರ್ನಾಟಕಕ್ಕೆ ಕಾವೇರಿ ಪ್ರಾಧಿಕಾರ ಸೂಚನೆ
Advertisement
Advertisement
ಸಭೆಯಲ್ಲಿ ತಮಿಳುನಾಡು ಪರ ಭಾಗಿಯಾಗಿದ್ದ ಕಾವೇರಿ ತಾಂತ್ರಿಕ ಸಮಿತಿ ಅಧ್ಯಕ್ಷ ಸುಬ್ರಮಣಿಯನ್, ಮುಖ್ಯ ಎಂಜಿನಿಯರ್ ಸುಬ್ರಮಣಿಯನ್ ಮತ್ತು ಪಟ್ಟಬ್ರಮಣ್ ನಿತ್ಯ 16000 ಕ್ಯೂಸೆಕ್ ನಂತೆ ಹದಿನೈದು ದಿನಗಳ ಕಾಲ 20.75 ಟಿಎಂಸಿ ನೀರು ಹರಿಸಲು ಒತ್ತಡ ಹೇರಿತು. ಇದಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕದ ಅಧಿಕಾರಿಗಳು ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ 50% ಮಳೆಯ ಕೊರತೆ ಇದೆ. ಮುಂದಿನ ದಿನಗಳ ಮಳೆಯಾಗುವ ಯಾವುದೇ ಭರವಸೆಗಳಿಲ್ಲ ಹೀಗಾಗೀ ನೀರು ಹರಿಸಲು ಸಾಧ್ಯವಿಲ್ಲ ಎಂದರು. ಎರಡು ರಾಜ್ಯಗಳನ್ನು ವಿಶ್ವಾಸಕ್ಕೆ ಪಡೆಯಲು ಸಮಿತಿಯೂ ಹಳೆ ಆದೇಶವನ್ನು ಅಕ್ಟೋಬರ್ 31 ವರೆಗೂ ಮುಂದುವರಿಸಲು ಶಿಫಾರಸ್ಸು ಮಾಡಿತು. ಮುಂದಿನ ಒಂದೇರಡು ದಿನಗಳಲ್ಲಿ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಸಭೆ ನಡೆಯಲಿದ್ದು ಈ ಆದೇಶ ಪ್ರಶ್ನಿಸಬಹುದಾಗಿದೆ. ಇದನ್ನೂ ಓದಿ: ಜಾತಿ, ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ: ಮಂತ್ರಿ ಸ್ಥಾನಕ್ಕೆ ದಲಿತ ನಾಯಕಿ ರಾಜೀನಾಮೆ
Web Stories