ಬರ್ಮಿಂಗ್‌ಹ್ಯಾಮ್: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಳೆದ ಎರಡು ದಿನಗಳಿಂದ ಭಾರತ ಪದಕಗಳ ಭರ್ಜರಿ ಬೇಟೆಯಾಡುತ್ತಿದೆ. 21ರ ತರುಣ ಸಂಕೇತ್ ಮಹಾದೇವ್ ಸರ್ಗರ್ ಮೂಲಕ ಖಾತೆ ತೆರೆದ ಭಾರತ ಕಳೆದ ಎರಡು ದಿನಗಳಲ್ಲಿ 5 ಪದಕಗಳನ್ನು ಬಾಚಿಕೊಂಡಿದೆ.
A gutsy performance from @raltejeremy in the Men’s 67 KG Category gives team ???????? it’s second ???? in weightlifting ????????♀️ at @birminghamcg22. With a total lift of 300KG he also sets a #gamesrecord ! #ekindiateamindia #B2022 pic.twitter.com/CZ09t7GyOb
— Team India (@WeAreTeamIndia) July 31, 2022
Advertisement
ಭಾರತದ ಜೆರೆಮಿ ಲಾಲ್ರಿನ್ನುಂಗಾ ಪುರುಷರ 67 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 300 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದನ್ನೂ ಓದಿ: CommonwealthGames: ಚಿನ್ನದ ಬೇಟೆಯೊಂದಿಗೆ ದಾಖಲೆ ಬರೆದ ಮೀರಾಬಾಯಿ ಚಾನು
Advertisement
Advertisement
ಜೆರೆಮಿ ಸ್ನ್ಯಾಚ್ ಈವೆಂಟ್‌ನಲ್ಲಿ 140 ಕೆಜಿ ಹಾಗೂ ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ ಒಟ್ಟು 160 ಕೆಜಿ (ಒಟ್ಟು 300 ಕೆ.ಜಿ) ಎತ್ತುವ ಮೂಲಕ ಚಿನ್ನದ ಪದಕ ಬಾಚಿಕೊಂಡಿದ್ದು, ದಾಖಲೆ ನಿರ್ಮಿಸಿದ್ದಾರೆ. ಇದು ಭಾರತಕ್ಕೆ ಒಲಿದ 2ನೇ ಚಿನ್ನದ ಪದಕವಾಗಿದೆ. ಇದನ್ನೂ ಓದಿ: Commonwealth Games 2022: ಭಾರತಕ್ಕೆ ನಾಲ್ಕನೇ ಪದಕ – ವೇಟ್‍ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದ ಬಿಂದ್ಯಾರಾಣಿ ದೇವಿ
Advertisement
ನಿನ್ನೆ ಮೀರಾಬಾಯಿ ಚಾನು ಅವರು ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಮೊದಲ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.