ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಬೇಟೆ ಮುಂದುವರಿದಿದೆ. ನಿನ್ನೆ ಒಂದೇ ದಿನ 3 ಪದಕಗಳು ಭಾರತದ ಪಾಲಾಗಿದ್ದು. ಒಟ್ಟು 9 ಪದಕಗಳನ್ನು ಗೆದ್ದಿದೆ. ನಿನ್ನೆ 48 ಕೆಜಿ ಮಹಿಳೆಯರ ವಿಭಾಗದಲ್ಲಿ ಸುಶೀಲ ದೇವಿ ಲಿಕ್ಮಾದಂ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟರು. 60 ಕೆಜಿ ಪುರುಷರ ಜುಡೋ ವಿಭಾಗದಲ್ಲಿ ವಿಜಯ್ ಕುಮಾರ್ ಯಾದವ್ ಕಂಚಿನ ಪದಕ ಪಡೆದುಕೊಂಡಿದ್ದರು.
#HarjinderKaur wins Team India's 3rd medal of the day and the 7th medal in weighlifting in the Women's 71KG with a total lift of 212 KG.#EkIndiaTeamIndia #WeAreTeamIndia pic.twitter.com/8miqtMOotv
— Team India (@WeAreTeamIndia) August 1, 2022
Advertisement
ಇಂದು ಮಹಿಳೆಯರ 71 ಕೆಜಿ ಮಹಿಳೆಯರ ವಿಭಾಗದಲ್ಲಿ ವೇಯ್ಟ್ಲಿಫ್ಟರ್ ಹರ್ಜಿಂದ್ರ ಕೌರ್ ಶಕ್ತಿ ಪ್ರದರ್ಶಿಸಿ ಕಂಚಿನ ಪದಕದ ಬೇಟೆಯಾಡಿದ್ದಾರೆ. ಭಾರತದ ಹರ್ಜಿಂದರ್ ಕೌರ್ 71 ಕೆಜಿ ಮಹಿಳೆಯರ ವಿಭಾಗದ ವೇಯ್ಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 212 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದನ್ನೂ ಓದಿ: IND vs WI 2nd T20: ಎರಡು ಗಂಟೆ ತಡವಾಗಿ ಪಂದ್ಯ ಆರಂಭ – ಕಾರಣ ಮಾತ್ರ ಸಿಂಪಲ್
Advertisement
ಕ್ಲೀನ್ ಮತ್ತು ಜರ್ಕ್ ಸುತ್ತಿನಲ್ಲಿ ಹರ್ಜಿಂದರ್ ಸಿಂಗ್ ತನ್ನ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ವಿಯಾದರು. ತನ್ನ 3ನೇ ಪ್ರಯತ್ನದಲ್ಲಿ 119 ಕೆಜಿ (93 ಕೆಜಿ, 119 ಕೆಜಿ) ಎತ್ತುವ ಮೂಲಕ ತನ್ನ ಒಟ್ಟು ತೂಕ 212 ಕೆಜಿ ಎತ್ತುವಲ್ಲಿ ಯಶಸ್ವಿಯಾದರು.
Advertisement
Advertisement
ಹರ್ಜಿಂದರ್ ಕೌರ್ ಸ್ನ್ಯಾಚ್ ವಿಭಾಗದಲ್ಲಿ ಮೊದಲ ಪ್ರಯತ್ನದಲ್ಲಿ 90 ಕೆಜಿ ಎತ್ತುವಲ್ಲಿ ವಿಫಲರಾದರು. 2ನೇ ಸುತ್ತಿನಲ್ಲಿ 90 ಕೆಜಿ ಹಾಗೂ 3ನೇ ಸುತ್ತಿನಲ್ಲಿ ಯಶಸ್ವಿಯಾಗಿ 93 ಕೆಜಿ ಭಾರವನ್ನು ಎತ್ತಿದರು. ನಂತರ ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ ಮೊದಲ ಪ್ರಯತ್ನದಲ್ಲೇ 113 ಕೆ.ಜಿ ಎತ್ತುವಲ್ಲಿ ಯಶಸ್ವಿಯಾದರು. 2ನೇ ಸುತ್ತಿನಲ್ಲಿ 116 ಕೆಜಿ ಹಾಗೂ 3ನೇ ಸುತ್ತಿನಲ್ಲಿ 119 ಕೆಜಿಯನ್ನು ಯಶಸ್ವಿಯಾಗಿ ಎತ್ತುವ ಮೂಲಕ ಶಕ್ತಿ ಪ್ರದರ್ಶಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.