ಬರ್ಮಿಂಗ್ ಹ್ಯಾಮ್: 2020ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಕಿರೀಟ ಮುಡಿಗೇರಿಸಿಕೊಂಡಿದ್ದ ಸಾಯಿಕೋಮ್ ಮೀರಾಬಾಯಿ ಚಾನು ಇದೀಗ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
???????????????? ???????????? ???????????????????????????? ???????????????????? ????????????#TeamIndia's first gold at the @birminghamcg22 Commonwealth Games comes in the women's 49kg weightlifting????????#EkIndiaTeamIndia | #B2022 pic.twitter.com/NYy2hiyWph
— Team India (@WeAreTeamIndia) July 30, 2022
Advertisement
ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಮಹಿಳೆಯರ ವಿಭಾಗದ 49 ಕೆಜಿ ವೇಟ್ಲಿಫ್ಟಿಂಗ್ನಲ್ಲಿ 201 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಸ್ನ್ಯಾಚ್ನಲ್ಲಿ 88 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್ನಲ್ಲಿ 113 ಕೆಜಿ ಭಾರ ಎತ್ತುವ ಮೂಲಕ ಸ್ಪರ್ಧೆಯಲ್ಲಿ ಮೈಲಿಗಲ್ಲು ಸಾಧಿಸಿದ್ದಾರೆ. ಈ ಮೂಲಕ ಭಾರತ ಮೊದಲ ದಿನದ ಅಥ್ಲೆಟಿಕ್ಸ್ ವಿಭಾಗದಲ್ಲಿ ಸತತ 3 ಪದಕಗಳ ಭರ್ಜರಿ ಬೇಟೆಯಾಡಿದೆ. ಇದನ್ನೂ ಓದಿ: ಕಾಮನ್ವೆಲ್ತ್ನಲ್ಲಿ ಕರ್ನಾಟಕದ ಗುರುರಾಜ್ಗೆ ಕಂಚು – ಭಾರತಕ್ಕೆ 2ನೇ ಪದಕ
Advertisement
Advertisement
55 ಕೆಜಿ ಪುರುಷರ ವಿಭಾಗದಲ್ಲಿ ಸಂಕೇತ್ ಸರ್ಗರ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಖಾತೆ ತೆರೆದರು. ಈ ಬೆನ್ನಲ್ಲೇ ಕನ್ನಡಿಗ ಕುಂದಾಪುರದ ಗುರುರಾಜ್ ಪೂಜಾರಿ 61 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು. ಒಲಿಂಪಿಕ್ಸ್ನಲ್ಲಿ ಬೆಳ್ಳಿಪದಕಕ್ಕೆ ಮುತ್ತಿಟ್ಟಿದ್ದ ಮೀರಾಬಾಯಿ ಚಾನು ಕಾಮನ್ವೆಲ್ತ್ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದನ್ನೂ ಓದಿ: ಭಾರತದ ಪದಕ ಬೇಟೆ ಆರಂಭ – ಸಂಕೇತ್ಗೆ ವೇಟ್ಲಿಫ್ಟಿಂಗ್ನಲ್ಲಿ ಬೆಳ್ಳಿ
Advertisement
ಮೀರಾಬಾಯಿ ಚಾನು 2014ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ, 2018ರಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಅಲ್ಲದೇ 2017ರಲ್ಲಿ ವಿಶ್ವ ಚಾಂಪಿಯನ್ಶಿಪ್ ಚಿನ್ನದ ಪದಕ ನಂತರ ಏಷ್ಯನ್ ಚಾಂಪಿಯನ್ಶಿಪ್ ಪದಕಗಳನ್ನೂ ಬೇಟೆಯಾಡಿದ್ದಾರೆ.