ಕಳಪೆ ಆಹಾರ ನೀಡಿದ್ದಕ್ಕೆ ರೆಸ್ಟೋರೆಂಟ್ ಕಿಚನ್‍ಗೆ ನುಗ್ಗಿ ಗ್ರಾಹಕನಿಂದ ಹಲ್ಲೆ

Public TV
1 Min Read
mp restaurant

ಭೋಪಾಲ್: ಕಳಪೆ ಆಹಾರ ನೀಡಿದ್ದಕ್ಕೆ ಗ್ರಾಹಕನೊಬ್ಬ ರೆಸ್ಟೋರೆಂಟ್ ಕಿಚನ್‍ಗೆ ನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಘಟನೆ ಸೋಮವಾರ ಮಧ್ಯಪ್ರದೇಶದ ಭೋಪಾಲ್‍ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ರೆಸ್ಟೋರೆಂಟ್‍ನಲ್ಲಿ ನಡೆದ ಗಲಾಟೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಗ್ರಾಹಕರು ಹಾಗೂ ಹೋಟೆಲ್ ಸಿಬ್ಬಂದಿ ರೆಸೋರೆಂಟ್‍ನ ಅಡುಗೆ ಮನೆಯಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಕೆಲವರು ಊಟ ನೀಡಲು ತಡವಾಗಿದ್ದಕ್ಕೆ ಗ್ರಾಹಕರು ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಗ್ರಾಹಕರು ಮೊದಲು ಟೇಬಲ್ ಬಳಿ ಊಟಕ್ಕಾಗಿ ಕಾಯುತ್ತಿದ್ದರು. ನಂತರ ಅಡುಗೆ ಮನೆಗೆ ಹೋಗಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಶುರು ಮಾಡಿದ್ದರು.

Police Jeep

ಈ ಬಗ್ಗೆ ಪ್ರತಿಕ್ರಿಯಿಸಿದ ಎಎಸ್‍ಪಿ ಸಂಜಯ್ ಸಾಹು, ನಮಗೆ ಮಾಹಿತಿ ತಿಳಿಯುತ್ತಿದ್ದಂತೆ ರೆಸ್ಟೋರೆಂಟ್‍ಗೆ ಭೇಟಿ ನೀಡಿದ್ದೆವು. ಊಟ ನೀಡಲು ತಡವಾಗಿದಕ್ಕೆ ಗ್ರಾಹಕರು ಹಾಗೂ ಹೋಟೆಲ್ ಸಿಬ್ಬಂದಿ ನಡುವೆ ಜಗಳವಾಗಿದೆ. ಗ್ರಾಹಕರು ಹಾಗೂ ಹೋಟೆಲ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೆವೆ ಎಂದು ಹೇಳಿದ್ದಾರೆ.

ಇದೇ ವೇಳೆ ರೆಸ್ಟೋರೆಂಟ್ ಮಾಲೀಕ, ಗ್ರಾಹಕರು ಮಹಿಳಾ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಬಳಿಕ ಮಾತನಾಡಿದ ಮಹಿಳಾ ಸಿಬ್ಬಂದಿ ಗ್ರಾಹಕರು ಕುಡಿದ ನಶೆಯಲ್ಲಿದ್ದರು. ನಾನು ಜಗಳವನ್ನು ತಡೆಯಲು ಹೋದಾಗ ಅವರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *