Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಲೀಟರ್‌ ಹಾಲು 175 ರೂ., ಕೆಜಿ ಟೊಮೆಟೊ 185 – ಭಾರತಕ್ಕಿಂತ 3 ಪಟ್ಟು ಕುಸಿದ ಕರೆನ್ಸಿ, ವೆನೆಜುವೆಲಾಗೆ ತೈಲ ಸಂಪತ್ತು ಅರೆಯಬಹುದೇ ಮದ್ದು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಲೀಟರ್‌ ಹಾಲು 175 ರೂ., ಕೆಜಿ ಟೊಮೆಟೊ 185 – ಭಾರತಕ್ಕಿಂತ 3 ಪಟ್ಟು ಕುಸಿದ ಕರೆನ್ಸಿ, ವೆನೆಜುವೆಲಾಗೆ ತೈಲ ಸಂಪತ್ತು ಅರೆಯಬಹುದೇ ಮದ್ದು?

Latest

ಲೀಟರ್‌ ಹಾಲು 175 ರೂ., ಕೆಜಿ ಟೊಮೆಟೊ 185 – ಭಾರತಕ್ಕಿಂತ 3 ಪಟ್ಟು ಕುಸಿದ ಕರೆನ್ಸಿ, ವೆನೆಜುವೆಲಾಗೆ ತೈಲ ಸಂಪತ್ತು ಅರೆಯಬಹುದೇ ಮದ್ದು?

Public TV
Last updated: January 20, 2026 4:53 pm
Public TV
Share
5 Min Read
01 18
SHARE

ತನ್ನದಲ್ಲದ ದೇಶಕ್ಕೆ ಕಾಲಿಟ್ಟು ಯುದ್ಧ ಮಾಡೋದು, ರಹಸ್ಯ ಕಾರ್ಯಾಚರಣೆಗಳನ್ನ ನಡೆಸೋದು, ಬಾಂಬ್‌ ಹಾಕೋದು, ಅಷ್ಟೇ ಯಾಕೆ ಆ ದೇಶದ ಅಧ್ಯಕ್ಷರನ್ನೇ ಸೆರೆಹಿಡಿದು ಹೊತ್ತೊಯ್ಯೋದು. ಇಡೀ ಜಗತ್ತೇ ತನ್ನ ಪ್ರಭಾವದಲ್ಲಿದೆ ಅನ್ನೋ ಹಾಗೇ ನಡೆಯೋದು ಅಮೆರಿಕಕ್ಕೆ ಕಾಮನ್‌ ಆಗಿಬಿಟ್ಟಿದೆ.

ಅಮೆರಿಕ ವೆನೆಜುವೆಲಾದ ಮೇಲೆ ನಡೆಸಿರುವ ದಾಳಿಯು ಆ ನಂತರ ತೆಗೆದುಕೊಂಡ ಕ್ರಮಗಳು ವಿಶ್ವಕ್ಕೆ ಇನ್ನಷ್ಟು ಭೀತಿ ತಂದೊಡ್ಡಿದೆ. ಹೌದು. ಆರ್ಥಿಕ ಉದ್ದೇಶಗಳಿಗಾಗಿ ವಿದೇಶಗಳ ಮೇಲೆ ಸುಂಕಾಸ್ತ್ರ ಪ್ರಯೋಗಿಸುತ್ತಿದ್ದ ಅಮೆರಿಕ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಸೇನಾಸ್ತ್ರ ಪ್ರಯೋಗಿಸುತ್ತಿದೆ. ಯಾವಾಗಲೂ ಯುದ್ಧ ನಿಲ್ಲಿಸಿದ್ದೇನೆ ತನಗೆ ಶಾಂತಿ ಪ್ರಶಸ್ತಿ ಕೊಡಬೇಕು ಎಂದು ಬಾಯಿ ಬಡಿದುಕೊಳ್ಳುತ್ತಿದ್ದ ಟ್ರಂಪ್‌ ಈಗ ಯುದ್ಧದ ಹಾದಿಯನ್ನ ಹಿಡಿದಿರೋದು ವಿಶ್ವದ ಇತರ ದೇಶಗಳಲ್ಲಿ ಭಾರೀ ಕಳವಳ ಹೆಚ್ಚಿಸಿದೆ.

ಇತಿಹಾಸದುದ್ದಕ್ಕೂ ವಿಶ್ವದ ದೊಡ್ಡಣ್ಣ ತನ್ನ ಸಾಮ್ರಾಜ್ಯಶಾಹಿ ಮನೋಭಾವ ಪ್ರದರ್ಶಿಸುತ್ತಲೇ ಬಂದಿದೆ. ಆಕ್ರಮಣಕಾರಿ ನೀತಿಗಳಿಂದ ವಿದೇಶಗಳ ಮೇಲೆ ಹಿಡಿತ ಸಾಧಿಸುತ್ತಿದೆ. ಇಡೀ ಜಗತ್ತೇ ತನ್ನ ಹಿಡಿತದಲ್ಲಿರಬೇಕು ಎನ್ನುವ ಸರ್ವಾಧಿಕಾರಿ ಮನೋಭಾವ ಅಮೆರಿಕದ್ದು. ದಿಢೀರ್ ಬೆಳವಣಿಗೆ ಎಂಬಂತೆ, ವೆನೆಜುವೆಲಾದ ಮೇಲೆ ದಾಳಿ ನಡೆಸಿ ಅಲ್ಲಿನ ಅಧ್ಯಕ್ಷರನ್ನು ಅಪಹರಿಸಿ ಸೆರೆಯಲ್ಲಿಟ್ಟಿದ್ದಾರೆ ಡೊನಾಲ್ಡ್ ಟ್ರಂಪ್. ಸುಭದ್ರ ಸರ್ಕಾರ ಮತ್ತು ಡ್ರಗ್ಸ್ ವಿರುದ್ಧದ ಹೋರಾಟಕ್ಕೆ ಈ ಕ್ರಮಕೈಗೊಳ್ಳಲಾಗಿದೆ ಅಂತ ಟ್ರಂಪ್ ನೆಪವೊಡ್ಡಿದ್ದಾರೆ. ಆದರೆ, ಅಸಲಿ ಕಾರಣವೇ ಬೇರೆ ಎನ್ನಲಾಗುತ್ತಿದೆ. ವೆನೆಜುವೆಲಾ (Venezuela) ಬೆನ್ನಲ್ಲೇ ಅಮೆರಿಕದ ನೆರೆಯ ಪುಟ್ಟ ರಾಷ್ಟ್ರಗಳಲ್ಲಿ ಆತಂಕ ಮನೆ ಮಾಡಿದೆ. ಯಾವಾಗ ಬೇಕಾದರೂ ನಮ್ಮ ಮೇಲೆ ದಾಳಿ ಮಾಡಬಹುದೆಂಬ ಭೀತಿ ಇದೆ.

ಅಷ್ಟೇ ಅಲ್ಲ ಒಂದು ಕಾಲದಲ್ಲಿ ದಕ್ಷಿಣ ಅಮೆರಿಕದ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿದ್ದ, ವಿಶ್ವದ ಅತಿದೊಡ್ಡ ತೈಲ ನಿಕ್ಷಪ ಹೊಂದಿರುವ ವೆನೆಜುವೆಲಾವನ್ನ ಈಗ ಕರುಣೆಯಿಂದ ನೋಡುವಂತೆ ಮಾಡಿರೋದು ಅಮೆರಿಕವೇ. ಕ್ಯಾರಕಾಸ್‌ ಮೇಲೆ ನಡೆಸಿದ ಆ ಒಂದು ದಾಳಿಯಿಂದ ಇಡೀ ವೆನೆಜುವೆಲಾ ಆರ್ಥಿಕ ದಿವಾಳಿಯತ್ತ ಸಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಸಾಮಾನ್ಯ ಜನ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈಗ ವೆನೆಜುವೆಲಾದ ಸ್ಥಿತಿ ಹೇಗಿದೆ? ವಿಶ್ವದ ತೈಲ ನಿಕ್ಷೇಪದ ಸ್ಥಿತಿಗತಿ ಏನು? ಇದರಿಂದ ಭಾರತಕ್ಕೇನಾದ್ರೂ ಲಾಭ ಇದ್ಯಾ? ಭಾರತದ ಕರೆನ್ಸಿಗಿಂತ 3 ಪಟ್ಟು ಕುಸಿದಿದ್ದು ಏಕೆ? ಅನ್ನೋದನ್ನ ತಿಳಿಯೋಣ…

ʻಕಪ್ಪುʼಚಿನ್ನವಿದ್ದರೂ ತಿನ್ನೋ ಅನ್ನಕ್ಕೆ ತವಕ!
ಹೌದು.. ಇಡೀ ವಿಶ್ವದಲ್ಲೇ ಅತಿದೊಡ್ಡ ತೈಲ ನಿಕ್ಷೇಪ (ಇದನ್ನೇ ಕಪ್ಪು ಚಿನ್ನ) ಎಂದು ಕರೆಯಲಾಗುತ್ತದೆ. ವೆನೆಜುವೆಲಾದಲ್ಲಿದೆ. ವಿಶ್ವದ ತೈಲ ನಿಕ್ಷೇಪಗಳಲ್ಲಿ ಶೇ.18 ರಷ್ಟು ಹೊಂದಿದೆ. ಆದ್ರೆ ಇಲ್ಲಿಯವರೆಗೆ ವೆನೆಜುವೆಲಾ ಹೊರತೆಗೆದಿರುವುದು ಶೇ.1 ರಷ್ಟು‌ ಮಾತ್ರ. ಏಕೆಂದ್ರೆ ಗಲ್ಫ್‌ ರಾಷ್ಟ್ರಗಳಲ್ಲಿ ಕಂಡುಬರುವ ಹಗುರ ತೈಲಕ್ಕೆ ಹೋಲಿಸಿದ್ರೆ, ವೆನೆಜುವೆಲಾ ಹೆಚ್ಚಿನ ಭಾರ ತೈಲ ನಿಕ್ಷೇಪ ಹೊಂದಿದೆ. ಭಾರ ತೈಲಕ್ಕೆ ಹೆಚ್ಚಿನ ಮಟ್ಟದ ಸಂಸ್ಕರಣಾ ಸೌಲಭ್ಯಗಳ ಅಗತ್ಯವಿದೆ. ವೆನೆಜುವೆಲಾ ಬಳಿ ಈ ಸಂಸ್ಕರಣಾ ಸೌಲಭ್ಯ ಇರಲಿಲ್ಲ. ಇದರೊಂದಿಗೆ ಅಮೆರಿಕ ವೆನೆಜುವೆಲಾ ಮೇಲೆ ನಿರ್ಬಂಧ ವಿಧಿಸಿ, ತೈಲ ರಫ್ತು ಮಾಡೋದನ್ನೂ ನಿಲ್ಲಿಸಿತ್ತು. ಇದು ವೆನೆಜುವೆಲಾಗೆ ದೊಡ್ಡ ಪೆಟ್ಟು ಬಿದ್ದಂತಾಗಿ, ಹೆಚ್ಚಿನ ತೈಲ ಬಳಕೆ ಮಾಡಲು ಸಾಧ್ಯವಾಗಲಿಲ್ಲ. ಈಗ ಇದರ ಮೇಲೆ ಕಣ್ಣಿಟ್ಟಿರುವ ಟ್ರಂಪ್‌ ಶತಕೋಟಿ ಡಾಲರ್‌ ಖರ್ಚು ಮಾಡಿ ಮೂಲ ಸೌಕರ್ಯ ಅಭಿವೃದ್ಧಿಪಡಿಸುವುದಾಗಿ ಹೇಳಿದ್ದಾರೆ. ಆದ್ರೆ ಇಷ್ಟು ಪ್ರಮಾಣದಲ್ಲಿ ಬ್ಲ್ಯಾಕ್‌ ಗೋಲ್ಡ್‌ ಹೊಂದಿರುವ ವೆನೆಜುವೆಲಾ ಈಗ ಮೂಲಭೂತ ಅವಶ್ಯಕತೆಗಳಿಗಾಗಿ ಹೆಣಗಾಡುತ್ತಿರುವುದು ದುರದೃಷ್ಟಕರ.

ಭಾರತದ ಮೇಲೇನು ಪರಿಣಾಮ?
ವೆನಿಜುವೆಲಾ ಜೊತೆ ರಫ್ತಾಗಲೀ, ಆಮದಾಗಲೀ ಭಾರತ ವ್ಯಾಪಾರ ಪ್ರಮಾಣ ಕಡಿಮೆಯೇ ಇದೆ. ಹೀಗಾಗಿ, ವೆನಿಜುವೆಲಾದಲ್ಲಿ ಮುಂದಿನ ಪರಿಸ್ಥಿತಿ ಏನೇ ಆದರೂ ಭಾರತದ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರುವುದಿಲ್ಲ.

ಬೆಲೆ ಏರಿಕೆ, ನಿರುದ್ಯೊಗದ ಬಿಸಿ
ತೈಲ ನಿಕ್ಷೇಪ ಹೊಂದಿರುವ ವೆನೆಜುವೆಲಾ ಅಮೆರಿಕದ ಮೇಲಿನ ಅವಲಂಬನೆಯಿಂದಾಗಿ ಈಗ ದಿವಾಳಿ ಹಂತಕ್ಕೆ ಬಂದುನಿಂತಿದೆ. ಒಂದೆಡೆ ನಿರುದ್ಯೋಗ ಸಮಸ್ಯೆ ದೇಶವನ್ನ ಕಾಡುತ್ತಿದ್ದರೆ, ಮತ್ತೊಂದು ಕಡೆ, ಹಸಿವು ಬಡವರನ್ನ ಕುಕ್ಕಿ ತಿನ್ನುತ್ತಿದೆ. ಮತ್ತೊಂದು ಕಡೆ `ಬೊಲಿವರ್’ ಎಂದು ಕರೆಯುವ ವೆನೆಜುವೆಲಾದ ಕರೆನ್ಸಿ ಭಾರತದ ರೂಪಾಯಿಗಿಂತ 3 ಪಟ್ಟು ಕುಸಿದಿದೆ. ಭಾರತದ 1 ರೂಪಾಯಿ ಬೆಲೆ 3.76 ಬೊಲಿವರ್‌ (ವೆನೆಜುವೆಲಾ ರೂಪಾಯಿ) ಇದ್ದು, ಹಣದುಬ್ಬರ ದೇಶವನ್ನ ಕಾಡುತ್ತಿದೆ. ಸಾಲದ್ದಕ್ಕೆ ವೆನೆಜುವೆಲಾದಲ್ಲಿ ಬಾಡಿಗೆಗೆ ಪಡೆಯುವ ಮನೆ, ವಾಹನಗಳ ಮೇಲಿನ ವೆಚ್ಚ 63.7% ಗೆ ದಿಢೀರ್‌ ಏರಿಕೆಯಾಗಿದೆ. ದಿನಸಿ ಬೆಲೆಗಳು ಶೇ.94.8 ರಷ್ಟು ಹೆಚ್ಚಿದ್ದರೆ, ರೆಸ್ಟೋರೆಂಟ್‌ಗಳಲ್ಲಿ ರೂಮ್‌ಗಳ ಬೆಲೆ 163.6%ಗೆ ಮುಟ್ಟಿದೆ.

ದಿನಸಿ ಮುಟ್ಟೋಕಾಗ್ತಿಲ್ಲ..!
ವೆನೆಜುವೆಲಾದಲ್ಲೀಗ ದಿನಸಿ ಪದಾರ್ಥಗಳ ಬೆಲೆ ಗಗನಕ್ಕೇರಿದೆ. 1 ಲೀಟರ್‌ ಹಾಲಿನ ಬೆಲೆ 175 ರೂಪಾಯಿಗೆ (ವೆನೆಜುವೆಲಾ ಕರೆನ್ಸಿಯಲ್ಲಿ) ತಲುಪಿದ್ರೆ, 1 ಪ್ಯಾಕ್‌ ಬ್ರೆಡ್‌ 170 ರೂ., 1 ಕೆಜಿ ಅಕ್ಕಿ 120 ರೂ., 1 ಡಜನ್‌ ಮೊಟ್ಟೆ 240 ರೂಪಾಯಿಗೆ ತಲುಪಿದೆ. ಅಷ್ಟೇ ಅಲ್ಲ. ಆಲೂಗೆಡ್ಡೆ, ಈರುಳ್ಳಿ, ಟೊಮೆಟೊಗಳಂತಹ ವಸ್ತುಗಳ ಬೆಲೆ ಮೂರ್ನಾಲ್ಕು ಪಟ್ಟು ಹೆಚ್ಚಾಗಿದೆ. ಟೊಮೆಟೊ ಕೆಜಿಗೆ 182 ರೂಪಾಯಿ ತಲುಪಿದ್ರೆ, ಆಲೂಗೆಡ್ಡೆ 163 ರೂ., ಈರುಳ್ಳಿ 170 ರೂಪಾಯಿಗೆ ಏರಿಕೆಯಾಗಿದೆ.

ಸಾಮಾನ್ಯವಾಗಿ ತಿನ್ನುವ ಆಹಾರ ಪದಾರ್ಥಗಳು ಯಾವುವು?
ವೆನೆಜುವೆಲಾದಲ್ಲಿ ಸಹಜವಾಗಿ ಅಕ್ಕಿ, ಜೋಳ, ಕಪ್ಪು ಬೀನ್ಸ್, ಚೀಸ್ ಮತ್ತು ಗೋಮಾಂಸ ಸಹಜವಾಗಿ ಬಳಸುವ ಆಹಾರ ಪದಾರ್ಥಗಳಾಗಿವೆ. ಬೆಲೆ ಗಗನಕ್ಕೆ ಏರಿಕೆಯಾಗಿರೋದ್ರಿಂದ ಜನ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕೆಲವು ಕೂಲಿಗಳಂತು ಮಾಡಿದ ಕೆಲಸಕ್ಕೆ ಹಣ ಪಡೆಯುವ ಬದಲಾಗಿ ಊಟಕ್ಕೆ ಬೇಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಸತತ ಪ್ರಯತ್ನಗಳು ವಿಫಲವಾಗಿ ದಾಳಿ ಮಾಡಿದ ಅಮೆರಿಕ
2013ರಿಂದ ಸತತವಾಗಿ ವೆನೆಜುವೆಲಾದ ಅಧ್ಯಕ್ಷ ಸ್ಥಾನದಲ್ಲಿರುವ ಮಡುರೊ ಅವರ ಅಧಿಕಾರವನ್ನ ಟ್ರಂಪ್ ಆಡಳಿತ ಪ್ರಶ್ನಿಸುತ್ತಿದೆ. ಇತ್ತೀಚೆಗೆ, ಅಂದ್ರೆ 2024ರಲ್ಲಿ ವೆನೆಜುವೆಲಾದಲ್ಲಿ ನಡೆದಿರುವ ಚುನಾವಣೆಯು ನ್ಯಾಯಯುತವಾಗಿಲ್ಲ ಎಂಬುದು ಅಮೆರಿಕದ ವಾದ. ಹಲವಾರು ಚುನಾವಣಾ ಅಕ್ರಮಗಳನ್ನು ಎಸಗಿ ಮಡುರೊ ಅವರು ಅಧಿಕಾರಕ್ಕೆ ಪದೇ ಪದೇ ಬರುತ್ತಿದ್ದಾರೆ ಎಂಬುದು ಅಮೆರಿಕದ ವಾದ. ಅದೇ ಕಾರಣಕ್ಕಾಗಿ, ವೆನೆಜುವೆಲಾದ ಆಂತರಿಕ ವಿಚಾರಗಳಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುತ್ತಾ, ಹಲವಾರು ರಾಜತಾಂತ್ರಿಕ ಪ್ರಯತ್ನಗಳು ಮತ್ತು ಆರ್ಥಿಕ ಒತ್ತಡಗಳನ್ನು ಹೇರುವ ಮೂಲಕ ಮಡುರೊ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸಲು ಅಮೆರಿಕ ಸತತವಾಗಿ ಪ್ರಯತ್ನಿಸುತ್ತಲೇ ಇತ್ತು. ಆ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದಕ್ಕೆ ನೇರ ದಾಳಿ ನಡೆಸಿತು.

ಸದ್ಯ ಅಮೆರಿಕದಿಂದ ಯಾವ ತೈಲ ಕಂಪನಿಯನ್ನ ವೆನೆಜುವೆಲಾಗೆ ಕಳಿಸಬೇಕು ಅನ್ನೋದ್ರ ಬಗ್ಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸತತ ಮಾತುಕತೆ ನಡೆಸುತ್ತಲೇ ಇದ್ದಾರೆ. ಶೀಘ್ರವೇ ವೆನೆಜುವೆಲಾದ ಸಮಸ್ಯೆಗಳಿಗೆ ತೈಲ ನಿಕ್ಷೇಪ ಮದ್ದರೆಯಬಹುದೇ ಎಂಬುದನ್ನ ಕಾದುನೋಡಬೇಕಿದೆ.

TAGGED:donald trumpindiaMarketsOil ReserveUS ActionUSAVenezuelaಅಮೆರಿಕಡೊನಾಲ್ಡ್ ಟ್ರಂಪ್ತೈಲ ನಿಕ್ಷೇಪವೆನೆಜುವೆಲಾ
Share This Article
Facebook Whatsapp Whatsapp Telegram

Cinema news

Vijay Deverakonda Rashmika Mandanna
ಮದ್ವೆ ಬಳಿಕ ಬಳಿಕ ಒಟ್ಟಿಗೆ ಶೂಟಿಂಗ್‌ಗೆ ತೆರಳಿದ ವಿರೋಶ್ ಜೋಡಿಗೆ ಅದ್ಧೂರಿ ಸ್ವಾಗತ
Cinema Latest Sandalwood South cinema Top Stories
Amita Singh Tomar
ಕೌನ್ ಬನೇಗಾ ಕರೋಡ್ ಪತಿಯಲ್ಲಿ 50 ಲಕ್ಷ ಗೆದ್ದಿದ್ದ ತಹಶೀಲ್ದಾರ್ ಅರೆಸ್ಟ್‌!
Cinema Crime Latest National Top Stories TV Shows
Dhurandhar 2 2
ಒಂದೇ ವಾರದಲ್ಲಿ 1000 ಕೋಟಿ ಕ್ಲಬ್ ಸೇರಿದ `ಧುರಂಧರ್ 2′
Bollywood Cinema Latest Top Stories
Rashmika Vijay 5
ಹನಿಮೂನ್ ಅಲ್ಲ ಬಡ್ಡೀಮೂನ್ – ರಶ್ಮಿಕಾ, ವಿಜಯ್ ಹೊಸ ಟ್ರೆಂಡ್
Cinema Latest South cinema Top Stories

You Might Also Like

container ship
Latest

ಈಗ ಚೀನಾ ಹಡಗುಗಳಿಗೂ ಶಾಕ್‌ – ಅನುಮತಿ ನೀಡದ ಇರಾನ್‌

Public TV
By Public TV
7 hours ago
davanagere south by election local youth express anger against sadiq pailwan
Davanagere

ಕಾಂಗ್ರೆಸ್ ಜೊತೆ ಪೈಲ್ವಾನ್‌ಗೂ ಮಣ್ಣು ಮುಕ್ಕಿಸುತ್ತೇವೆ – ಬೀದಿಗಿಳಿದು ಆಕ್ರೋಶ ಹೊರಹಾಕಿದ ಮುಸ್ಲಿಂ ಯುವಕರು

Public TV
By Public TV
8 hours ago
PM Modi virtual meeting chief ministers and lieutenant governors
Latest

ಕೋವಿಡ್‌ ರೀತಿ ರಾಜ್ಯ, ಕೇಂದ್ರ ಒಗ್ಗಟ್ಟಾಗಿ ಇಂಧನ ಬಿಕ್ಕಟ್ಟನ್ನು ಎದುರಿಸೋಣ: ಮೋದಿ ಕರೆ

Public TV
By Public TV
8 hours ago
karwar demand for firewood increases due to cylinder shortage forest department grants permission to cut 3 lakh trees
Latest

ಸಿಲಿಂಡರ್ ಅಭಾವದಿಂದ ಕಟ್ಟಿಗೆಗೆ ಹೆಚ್ಚಿದ ಬೇಡಿಕೆ – ಅರಣ್ಯ ಇಲಾಖೆಯಿಂದ 3ಲಕ್ಷ ಮರಗಳ ಕಟಾವಿಗೆ ಅನುಮತಿ

Public TV
By Public TV
8 hours ago
man killed pet dog in honnali
Crime

ಸಾಕು ನಾಯಿ ಬೊಗಳಿದ್ದಕ್ಕೆ ಕುಡುಗೋಲಲ್ಲಿ ಕೊಚ್ಚಿ ಕೊಂದ ಪಾಪಿ

Public TV
By Public TV
9 hours ago
Basangouda Patil Yatnal
Kolar

ಐಪಿಎಲ್‌ ಟಿಕೆಟ್‌ ಬೇಕೆನ್ನುವ ಶಾಸಕರಿಗೆ ನಾಚಿಕೆಯಾಗಬೇಕು: ಯತ್ನಾಳ್‌ ಕಿಡಿ

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?