ಮಂಗಳೂರು: ಪೌರತ್ವದ ಪ್ರತಿಭಟನೆ, ಗಲಾಟೆನಿಂದ ಶಾಂತವಾಗಿರುವ ಮಂಗಳೂರಿನಲ್ಲಿ ಮತ್ತೆ ಪೊಲೀಸರು ಲೈಟಾಗಿ ಲಾಠಿ ಚಾರ್ಜ್ ಮಾಡಿದ್ದಾರೆ.
ನಗರದ ಸೆಂಟ್ರಲ್ ಮಾರ್ಕೆಟ್‍ನಲ್ಲಿ ಪೊಲೀಸರು ಮತ್ತೆ ಲಾಠಿಯೇಟು ಕೊಟ್ಟಿದ್ದಾರೆ. ಇಂದು ಕೂಡ ಮಂಗಳೂರಿನಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ಹೀಗಾಗಿ ಯಾರು ಕೂಡ ಓಡಾಡುವಂತಿಲ್ಲ. ಆದರೂ ಯುವಕರು ಇಲ್ಲದ ನೆಪ ಹೇಳಿ ಮನೆಯಿಂದ ಹೊರಬರಲು ಯತ್ನಿಸಿದ್ದಾರೆ. ಆಗ ಪೊಲೀಸರು ಯುವಕರಿಗೆ ಲಾಠಿರುಚಿ ತೋರಿಸಿ ಓಡಿಸಿದ್ದಾರೆ.
ಪೊಲೀಸ್ ಕಮಿಷನರ್ ಈಗಾಗಲೇ ಪರಿಸ್ಥಿತಿ ನೋಡಿಕೊಂಡು ಓಡಾಡಲೂ ಅವಕಾಶ ಕೊಡುತ್ತೇವೆ ಎಂದು ಕಳೆದ ದಿನವೇ ಹೇಳಿದ್ದರು. ಆದರೂ ಇಂದು ಬೆಳಗ್ಗೆ ಯುವಕರ ಆಸ್ಪತ್ರೆಗೆ ಹೋಗಬೇಕು ಎಂದು ಬೇರೆ ಬೇರೆ ನೆಪ ಹೇಳಿಕೊಂಡು ವಾಹನಗಳಲ್ಲಿ ನಗರದೊಳಗೆ ಬಂದಿದ್ದರು. ಅಂತಹವರಿಗೆ ಪೊಲೀಸರು ಲಾಠಿಯೇಟು ಕೊಟ್ಟಿದ್ದಾರೆ.
ಇಂದು ಕೂಡ ಕರ್ಫ್ಯೂ ಜಾರಿಯಲ್ಲಿರುವುದರಿಂದ ಪೊಲೀಸರು ಪ್ರತಿ ರಸ್ತೆಗೂ ಹೋಗಿ ಮನೆಯಿಂದ ಹೊರಗಡೆಗೆ ಯಾರು ಬರಬಾರದು ಎಂದು ಮೈಕಿನಲ್ಲಿ ಅನೌನ್ಸ್ ಮಾಡುತ್ತಿದ್ದಾರೆ. ಒಂದು ವೇಳೆ ತುರ್ತು ಪರಿಸ್ಥಿತಿಯಿದ್ದರೆ ತಕ್ಷಣವೇ ಪೊಲೀಸರಿಗೆ ಫೋನ್ ಮಾಡಿ ತಿಳಿಸಿದರೆ ಅವರೇ ಬೇಕಾದ ಸೌಲಭ್ಯವನ್ನು ಒದಗಿಸಲಿದ್ದಾರೆ. ಭಾನುವಾರ ರಾತ್ರಿಯವರೆಗೂ ಕರ್ಫ್ಯೂ ಜಾರಿಯಲ್ಲಿರುತ್ತಾರೆ.