ಮೈಸೂರು: ಹಿಂದೂಗಳ ಧಾರ್ಮಿಕ ಮೆರವಣಿಗೆಯಲ್ಲಿ ಮುಸ್ಲಿಮರು ಯಾಕೆ ಕಲ್ಲು ಹೊಡೆಯುತ್ತಾರೆ? ಮುಸ್ಲಿಮರ ಮೆರವಣಿಗೆ ಮೇಲೆ ಯಾವತ್ತಾದರೂ ಹಿಂದೂಗಳು ಕಲ್ಲು ಹೊಡೆದಿದ್ದಾರಾ? ಹನುಮನ ಮೆರವಣಿಗೆ, ರಾಮನ ಮೆರವಣಿಗೆ ಮೇಲೆ ಮುಸ್ಲಿಮರು ಯಾಕೆ ಪದೇ ಪದೇ ಕಲ್ಲು ಹೊಡೆಯುತ್ತಾರೆ? ಕಲ್ಲು ಹೊಡೆಯುವ ಸಂಸ್ಕೃತಿ ಮುಸ್ಲಿಮರಲ್ಲಿದೆ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಹಿಂದೂಗಳ ಯಾತ್ರೆಯನ್ನು ಸೈತಾನರ ಯಾತ್ರೆ ರೀತಿ ಮುಸ್ಲಿಮರು ನೋಡುತ್ತಾರೆ. ಅನ್ಯ ಧರ್ಮದವರನ್ನು ಸೈತಾನರ ರೀತಿ ನೋಡುವ ಮುಸ್ಲಿಮರ ಮನಃಸ್ಥಿತಿ ಬದಲಾಗಬೇಕು. ನೆಲೆ ಕೇಳಿ ಕೊಂಡು ಹಿಂದೂ ರಾಷ್ಟ್ರಕ್ಕೆ ಬಂದವರು ಮುಸ್ಲಿಮರು. ಇಲ್ಲಿನ ಮುಸ್ಲಿಮರಲ್ಲಿ ಇರುವುದು ಹಿಂದೂ ಡಿಎನ್‌ಎ. ಮತಾಂತರದಿಂದ ಮುಸ್ಲಿಮರಾದ ನೀವು ಏನೋ ಅರಬ್ ಡಿಎನ್‌ಎ ಬಂದಿದೆ ಎನ್ನುವ ರೀತಿ ವರ್ತಿಸಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ನಿರ್ಮಲಾ ಸೀತಾರಾಮನ್ ಹಣದುಬ್ಬರದ ಬಗ್ಗೆ ಅರ್ಥಹೀನ ಮಾತನಾಡಿದ್ದಾರೆ: ದಿನೇಶ್ ಗುಂಡೂರಾವ್
Advertisement
Advertisement
ಕಲ್ಲು ಎಸೆದರೆ ಬುಲ್ಡೋಜರ್ ನಿಮ್ಮ ಮನೆ ಮುಂದೆ ಬರುತ್ತದೆ. ಕ್ರಿಯೆಗೆ ಪ್ರತಿಕ್ರಿಯೆಗೆ ಇರುತ್ತದೆ. ಸಮಾಜ ಬಾಹಿರ ಚಟುವಟಿಕೆಗೆ ಕೈ ಹಾಕುವವರ ಮೇಲೆ ಕ್ರಮ ಆಗಲೇ ಬೇಕು. ಭೂಗತ ಪಾತಕಿ ದಾವುದ್ ಇಬ್ರಾಹಿಂ ಕೂಡ ನಿಮ್ಮವನು ಎಂದು ನಿಮಗೆ ಅನ್ನಿಸಿ ಬಿಡುತ್ತೆ. ಕರ್ನಾಟಕದಲ್ಲಿ ಕೂಡಾ ಬುಲ್ಡೋಜರ್ ಬೀದಿಗೆ ಇಳಿಯುತ್ತವೆ. ಬುಲ್ಡೋಜರ್ ರಸ್ತೆಗೆ ಇಳಿಯಬಾರದು ಎಂದರೆ, ಪುಂಡ ಮುಸ್ಲಿಮರು ಗೌರವಯುತವಾಗಿ ಇರಿ ಎಂದು ಎಚ್ಚರಿಸಿದರು.
Advertisement
ಇದೇ ವೇಳೆ ಮೈಸೂರು ದೇವರಾಜ ಮಾರುಕಟ್ಟೆ ಉಳಿಸುವ ವಿಚಾರದಲ್ಲಿ ರಾಜವಂಶಸ್ಥ ಯದುವೀರ್ ಧ್ವನಿ ಎತ್ತಿದ ವಿಚಾರವಾಗಿ ಮಾತನಾಡಿದ ಪ್ರತಾಪ್ ಸಿಂಹ, ಮೈಸೂರು ಮಹಾರಾಜರ ಋಣದಲ್ಲಿ ನಾವಿದ್ದೇವೆ. ಇದು ರಾಜಕಾರಣಿಗಳು ಕಟ್ಟಿದ ಊರಲ್ಲ. ಇಲ್ಲಿನ ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ಯದುವಂಶದವರ ಅಭಿಪ್ರಾಯ ಕೇಳುತ್ತೇವೆ ಎಂದರು.
Advertisement
ಶಿಥಿಲ ವ್ಯವಸ್ಥೆಯಲ್ಲಿ ಮಾರುಕಟ್ಟೆ ಕಟ್ಟಡವಿದೆ. ಅದಕ್ಕಾಗಿ ಅದನ್ನು ಪುನರ್ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಯದುವಂಶದವರಿಗೆ ಸಂಪೂರ್ಣ ಮಾಹಿತಿ ನೀಡಿ, ಅವರಿಗೆ ವಾಸ್ತವ ಸ್ಥಿತಿ ಅರ್ಥ ಮಾಡಿಸುತ್ತೇವೆ. ಅವರು ನೀಡುವ ಸಲಹೆಗಳನ್ನು ಗೌರವಿಸಿ, ಈ ಕಾರ್ಯ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.
ಅದಾನಿ-ಅಂಬಾನಿ ಸಂಪತ್ತು ಹೆಚ್ಚಾದ ಬಗ್ಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನಿಗೆ ತಿರುಗೇಟು ನೀಡಿದ ಪ್ರತಾಪ್ ಸಿಂಹ, ಸಿದ್ದರಾಮಯ್ಯ ಯಾವ ಆಲುಗೆಡ್ಡೆ ಜೋಳ ಬೆಳೆದು ಹಣ ಮಾಡಿದರು? ನೀವು ಇವತ್ತು ಶ್ರಿಮಂತರಾಗಿಲ್ಲವಾ? 30-40 ವರ್ಷದ ಹಿಂದೆ ನೀವು ಹೇಗಿದ್ದರೋ ಇಂದು ಕೂಡಾ ಹಾಗೆಯೇ ಇದ್ದೀರಾ? ನಿಮ್ಮ ಜೊತೆ ಇರುವ ಕೆಜೆ ಜಾರ್ಜ್, ಎಂಬಿ ಪಾಟೀಲ್, ಡಿಕೆ ಶಿವಕುಮಾರ್ 40 ವರ್ಷದ ಹಿಂದೆ ಏನಾಗಿದ್ದರು ಹೇಳಿ? ಇವತ್ತು ಎಷ್ಟು ಶ್ರಿಮಂತರಾಗಿದ್ದಾರೆ. ಉದ್ಯಮಿಗಳ ಶ್ರೀಮಂತಿಕೆ ಬಗ್ಗೆ ಮಾತನಾಡುವ ನೀವು, ರಾಜಕಾರಣಿಗಳ ಶ್ರೀಮಂತಿಕೆ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದಿಂಗಾಲೇಶ್ವರ ಶ್ರೀಗಳಿಗೆ ತಲೆ ಸರಿ ಇಲ್ಲ: ರೇಣುಕಾಚಾರ್ಯ ವ್ಯಂಗ್ಯ
ಅದಾನಿ-ಅಂಬಾನಿನಾ ಹುಟ್ಟಿಸಿದ್ದು ಮೋದಿನಾ? ಮೋದಿ ಪ್ರಧಾನ ಮಂತ್ರಿ ಆಗುವುದಕ್ಕೂ ಮುಂಚೆ ಅವರು ಶ್ರೀಮಂತರಾಗಿರಲಿಲ್ಲವಾ? ಮಾತೆತ್ತಿದರೆ ಅದಾನಿ-ಅಂಬಾನಿ ಅಂತೀರಾ. ಎಷ್ಟೋ ಶ್ರೀಮಂತ ಉದ್ಯಮಿಗಳು ಹುಟ್ಟಿದ್ದು ಯಾರ ಕಾಲದಲ್ಲಿ? ಆಸ್ತಿ ಮೌಲ್ಯ ಹೆಚ್ಚಾದಂತೆ ಶ್ರೀಮಂತಿಕೆ ಹೆಚ್ಚಾಗುತ್ತದೆ. ಅದಕ್ಕೆ ಮೋದಿ ಕಾರಣ ಎಂದರೆ ಏನು ಅರ್ಥ? ಮೋದಿಯನ್ನು ಚರ್ಚೆಗೆ ಕರೆಯುತ್ತೀರಾ? ದೇಶಕ್ಕೆ ಒಬ್ಬರೇ ಮೋದಿ. ಇಂತಹ ಚರ್ಚೆಗಳಿಗೆ ಅವರು ಏಕೆ ಬೇಕು ಎಂದು ಟಾಂಗ್ ನೀಡಿದರು.