ಬೆಂಗಳೂರು: ಸಲಿಂಗ ಸಂಬಂಧಕ್ಕೆ ಸುಪ್ರೀಂಕೋರ್ಟ್ ಮಾನ್ಯತೆ ನೀಡಿದೆ. ಸುಪ್ರೀಂ ಕೋರ್ಟ್ ಆದೇಶದ ನಂತರ ಕಬ್ಬನ್ ಪಾರ್ಕ್ ನ ಪೊದೆಗಳಲ್ಲಿ ಸಲಿಂಗಿಗಳು ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರಿಗೆ ಮುಂಜುಗರ ಉಂಟು ಮಾಡುತ್ತಿದೆ.
ಸಲಿಂಗಕಾಮಿಗಳಿಗೆ ಸುಪ್ರೀಂಕೋರ್ಟ್ ಕಾನೂನಿನ ಮಾನ್ಯತೆ ನೀಡಿದ್ದೆ ತಡ ಕಬ್ಬನ ಪಾರ್ಕ್‍ನಲ್ಲಿ ಸಲಿಂಗಿಗಳು ಹಾಗೂ ಲೈಗಿಂಕ ಅಲ್ಪ ಸಂಖ್ಯಾತರ ಹಾವಳಿ ಹೆಚ್ಚಾಗಿದೆ. ಸಾಮಾನ್ಯ ಸಾರ್ವಜನಿಕರು ಹಾಗೂ ಕಬ್ಬನ್ ಪಾರ್ಕ್ ವೀಕ್ಷಣೆಗೆ ಬರುವ ಪ್ರವಾಸಿಗಳಿಗೆ ಸಲಿಂಗಿಗಳ ಈ ನಡವಳಿಕೆ ಮುಂಜುಗರ ತರಿಸಿದ್ದು, ಪೊಲೀಸ್ ಭದ್ರತೆ ಹೆಚ್ಚಿಸುವಂತೆ ಕಬ್ಬನ್ ಪಾರ್ಕ್ ಅಸೋಶಿಯೇಷನ್ ಅಧ್ಯಕ್ಷ ಉಮೇಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಸಲಿಂಗಕಾಮ ಅಪರಾಧವಲ್ಲ: 156 ವರ್ಷದ ಬ್ರಿಟಿಷ್ ಕಾನೂನು ರದ್ದು – ಐಪಿಸಿ ಸೆಕ್ಷನ್ 377 ಏನು ಹೇಳುತ್ತೆ?
Advertisement
ಸುಪ್ರೀಂಕೋರ್ಟ್ ತೀರ್ಪು ನೀಡ್ತಾ ಇದ್ದಂತೆ ಸಲಿಂಗ ಕಾಮಿಗಳು ಅಂದು ಸಂಭ್ರಮಾಚರಣೆ ನಡೆಸಿದರು. ಮಾನವೀಯತೆ ಆಧಾರದಲ್ಲಿ ಸಮಾಜದ ಹಲವರು ಸುಪ್ರೀಂ ಆದೇಶಕ್ಕೆ ಸಂತಸ ವ್ಯಕ್ತಪಡಿಸಿದರು. ಆದ್ರೇ ಸಂಜೆಯಾಗುತ್ತಿದ್ದ ಹಾಗೆ ಪ್ರಕೃತಿಯ ಸೊಬಗಿಗೆ ಹೆಸರಾದ ಕಬ್ಬನ್ ಪಾರ್ಕ್ ನಲ್ಲಿ ಸಲಿಂಗ ಕಾಮಿಗಳ ಹಾವಳಿ ಹೆಚ್ಚಾಗಿದ್ದು ಆತಂಕ ಹೆಚ್ಚಿಸಿದೆ. ಒಟ್ಟಾರೆ, ಸುಪ್ರೀಂ ಆದೇಶದಿಂದಾಗಿ ಕಬ್ಬನ್ ಪಾರ್ಕ್ ಪೊಲೀಸರಿಗೆ ಮತ್ತೊಂದು ಹೊಸ ತಲೆ ನೋವು ಶುರುವಾಗಿದ್ದು, ಸಲಿಂಗಿಗಳ ಈ ಹುಚ್ಚಾಟಕ್ಕೆ ಯಾವ್ ರೀತಿ ಬ್ರೇಕ್ ಹಾಕ್ತಾರೋ ಕಾದು ನೋಡಬೇಕಿದೆ. ಇದನ್ನೂ ಓದಿ: ಸಲಿಂಗಕಾಮ ಅನುವಂಶೀಯ ಅಸ್ವಸ್ಥತೆ, ದೇಶದಲ್ಲಿ ಎಚ್‍ಐವಿ ಹೆಚ್ಚಾಗಲಿದೆ: ಸುಬ್ರಮಣಿಯನ್ ಸ್ವಾಮಿ
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv