ಬೆಂಗಳೂರು: ಗಾಂಧಿಗಿರಿ ನಡೆಯಬೇಕಾದ ಕಾಲದಲ್ಲಿ ದಾದಾಗಿರಿ ನಡೆಯುತ್ತಿದೆ. ಅದಕ್ಕೆ ತಾಜಾ ಉದಾಹರಣೆ ನನ್ನ ಮೇಲೆ ಹಾಗೂ ಮುನಿರತ್ನ (Munirathna) ಮೇಲೆ ನಡೆದ ಹಲ್ಲೆ ಎಂದು ಸಿಟಿ ರವಿ (CT Ravi) ಆಕ್ರೋಶ ವ್ಯಕ್ತಪಡಿಸಿದರು.
ಇಂದು ಶಾಸಕ ಮುನಿರತ್ನ ನಿವಾಸಕ್ಕೆ ಆಗಮಿಸಿ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ಜಾಸ್ತಿ ದಿನ ನಡೆಯುವುದಿಲ್ಲ. ಮುನಿರತ್ನ ಅವರನ್ನ ಮಾತನಾಡಿಸಲು ಬಂದಿದ್ದೇನೆ. ಕಾಂಗ್ರೆಸ್ (Congress) ಅಧಿಕಾರ ದುರುಪಯೋಗ ಮಾಡಿಕೊಂಡಿದೆ. ಮುನಿರತ್ನ ಅವರ ಮೇಲೆ ನಡೆದಿರುವ ಹಲ್ಲೆ ದುರಾದೃಷ್ಟಕರ. ಪ್ರಜಾಪ್ರಭುತ್ವದಲ್ಲಿ ಆಯ್ಕೆ ಆಗಿರುವ ಶಾಸಕರ ಮೇಲೆ ಈ ರೀತಿ ಆಗಬಾರದು ಎಂದರು. ಇದನ್ನೂ ಓದಿ: 10 ಕೋಟಿ ಮೌಲ್ಯದ ಜಮೀನನ್ನು 10 ಲಕ್ಷಕ್ಕೆ ಕೊಟ್ಟು ಅಗ್ರಿಮೆಂಟ್ – ಮೋಸ ಹೋದೆನೆಂದು ಸರ್ಕಾರಿ ಶಾಲಾ ಶಿಕ್ಷಕ ಆತ್ಮಹತ್ಯೆ
Advertisement
Advertisement
ನನ್ನ ವಿಚಾರವನ್ನು ಮೂರು ಆಯಾಮದಲ್ಲಿ ನೋಡಬೇಕು. ಆರ್ಟಿಕಲ್ 194 ಪ್ರಕಾರ ಪರಮಾಧಿಕಾರವನ್ನು ಸಭಾಪತಿಗಳಿಗೆ ಕೊಡಲಾಗಿದೆ. ಸಭಾಪತಿಗಳ ನಿರ್ಣಯ ಅವರಿಗೆ ಬಿಟ್ಟಿದ್ದು. ಆದರೆ ಈ ಸರ್ಕಾರ ಕಾನೂನು ದುರ್ಬಳಕೆ ಮಾಡಿದೆ. ನನಗೆ ನೋಟಿಸ್ ಕೊಟ್ಟಿರಲಿಲ್ಲ, ಅಲ್ಲದೆ ಬಂಧನ ಮಾಡಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ ಎಂದು ದೂರಿದರು.
Advertisement
Advertisement
ಬಂಧನದ ನಂತರ ಮೂಲಭೂತ ಹಕ್ಕನ್ನು ಉಲ್ಲಂಘನೆ ಮಾಡಲಾಗಿದೆ. ನನ್ನ ಜೀವನದಲ್ಲಿ ಹೋರಾಟದ ಮೂಲಕ ಬಂದವನು ಬೆನ್ನು ತೋರಿಸಿ ಓಡಿಹೋದವನಲ್ಲ. ಇಂದಿರಾಗಾಂಧಿ ಅಧಿಕಾರವನ್ನ ದುರುಪಯೋಗ ಮಾಡಿಕೊಂಡು ತುರ್ತುಪರಿಸ್ಥಿತಿ ನಿರ್ಮಾಣ ಮಾಡಿದರು. ಈ ಗೂಂಡಾಗಿರಿ ಬಹಳ ದಿನ ನಡೆಯುವುದಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಅಪರಂಜಿ ಚಿನ್ನವೋ ನನ್ನಾ ಮನೆಯ ದೇವತೆ – ಅನೂಪ್ ಮಂಜುಶ್ರೀಯದ್ದು ಪ್ರೇಮ ವಿವಾಹ
ನಾನು ಬೆನ್ನು ತೋರಿಸಿ ಓಡಿ ಹೋಗುವುದಿಲ್ಲ. ಆ ಅಭ್ಯಾಸ ನನಗಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾ ಗಾಂಧಿ ಅವರ ಪರಿಸ್ಥಿತಿ ಏನಾಯ್ತು? ಈಗಾಗಲೇ ನಾನು ಕೇಂದ್ರದ ಎಲ್ಲರ ಗಮನಕ್ಕೆ ತಂದಿದ್ದೇನೆ. ಪಕ್ಷ ನನ್ನ ಜೊತೆ ಇದೆ ಎಂದರು.