ಚಿಕ್ಕಮಗಳೂರು: ನಾನು ಕುಮಾರಣ್ಣ, ದೇವೇಗೌಡರು, ಸಿದ್ದರಾಮಯ್ಯನವರಿಗೆ ಬಕೆಟ್ ಹಿಡಿದಿಲ್ಲ. ನಾನು ಬಕೆಟ್ ಹಿಡಿದು ರಾಜಕಾರಣ ಮಾಡಿದವನಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಶಾಸಕ ಜಮೀರ್ ಅಹ್ಮದ್‌ಗೆ ಟಾಂಗ್ ನೀಡಿದ್ದಾರೆ.
ನಗರದ ಬೇಲೂರು ರಸ್ತೆಯ ವಕ್ಫ್ ನಿವೇಶನದಲ್ಲಿ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿನಿಲಯದ ಕಟ್ಟಡ ಕಾಮಗಾರಿ ಶಂಕುಸ್ಥಾಪನೆ ವೇಳೆ ಮಾತನಾಡಿದ ಅವರು, ಸಿ.ಟಿ ರವಿಗೆ ಮುಸ್ಲಿಂ, ಹಿಂದೂಗಳ ಮೇಲೆ ಪ್ರೀತಿ ಇಲ್ಲ, ಅಧಿಕಾರದ ಮೇಲಷ್ಟೇ ಪ್ರೀತಿ ಎಂದಿದ್ದ ಜಮೀರ್‌ಗೆ ತಿರುಗೇಟು ನೀಡಿದ್ದಾರೆ.
Advertisement
Advertisement
ಬಿಜೆಪಿ ಅಧಿಕಾರಕ್ಕೆ ಬಂದರೆ ವಾಚ್‌ಮ್ಯಾನ್ ಆಗ್ತೀನಿ ಎಂದು ಹೇಳಿದ್ರಲ್ಲಾ ಜಮೀರ್, ಮೊದಲು ಆ ಮಾತನ್ನು ಉಳಿಸಿಕೊಳ್ಳಿ. ಯಡಿಯೂರಪ್ಪನವರ ಮನೆಯಲ್ಲಿ ವಾಚ್‌ಮ್ಯಾನ್ ಆಗಿ, ಆ ಮಾತನ್ನು ಉಳಿಸಿಕೊಂಡು ಜನರಿಗೆ ಮುಖ ತೋರಿಸಿ. ನನ್ನ ನಿಯತ್ತನ್ನು ನೋಡಿ ನನ್ನ ಕ್ಷೇತ್ರದ ಜನ 4 ಬಾರಿ ಗೆಲ್ಲಿಸಿದ್ದಾರೆ. ನನ್ನ ನಿಯತ್ತು, ಅಧಿಕಾರ ಏನೆಂದು ನನ್ನ ಜನರಿಗೆ ಗೊತ್ತಿದೆ. ಮಂತ್ರಿ ಆಗಿದ್ದ ನಾನು ಪಕ್ಷದ ಕೆಲಸಕ್ಕಾಗಿ ರಾಜೀನಾಮೆ ನೀಡಿದ್ದೇನೆ ಎಂದು ಜಮೀರ್ ಕಾಲೆಳೆದಿದ್ದಾರೆ. ಇದನ್ನೂ ಓದಿ: ಪ್ರತಿಭಟನೆ ವೇಳೆ ಕಾಂಗ್ರೆಸ್ ಮುಖಂಡನ ಕೂದಲು ಹಿಡಿದು ಜೀಪಿನೊಳಗೆ ದಬ್ಬಿದ ಪೊಲೀಸರು
Advertisement
ಸಿಎಂ ಎಂದು ಬೋರ್ಡ್, ಫ್ಲೆಕ್ಸ್ ಹಾಕಿಕೊಂಡ ತಕ್ಷಣ ಸಿಎಂ ಆಗ್ತಾರಾ? ಸೋಶಿಯಲ್ ಮೀಡಿಯಾದಲ್ಲಿ ಹೇಳಿ, ಜನರ ಬಾಯಲ್ಲಿ ಕೂಗಿಸುತ್ತಿದ್ದಂತೆ ಸಿಎಂ ಆಗ್ತಾರಾ? ಜನ ಕೊಟ್ಟಿದ್ದನ್ನೇ ಉಳಿಸಿಕೊಂಡಿಲ್ಲ, ಇನ್ನು ಗಳಿಸೋದು ಉಂಟಾ? ಎಂದು ಕಾಂಗ್ರೆಸ್ ಹಾಗೂ ಸಿಎಂ ಕುರ್ಚಿಗಾಗಿ ಕಿತ್ತಾಡುತ್ತಿರುವ ಸಿದ್ದು, ಡಿಕೆಶಿ ವಿರುದ್ಧ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.
Advertisement
ಜನ ಪಕ್ಷಕ್ಕೆ ಮತ ಹಾಕಬೇಕು. ಆ ಪಕ್ಷ ಗೆಲ್ಲಬೇಕು. ಆಮೇಲೆ ಆ ಪಕ್ಷ ತೀರ್ಮಾನ ಮಾಡಬೇಕು. ಕಳೆದ 8-10 ವರ್ಷದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ಪಂಜಾಬ್‌ನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು, ಅಲ್ಲಿ ಕಳೆದುಕೊಂಡರು. ನೂರಕ್ಕೆ ನೂರರಷ್ಟು ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲೂ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಮುಖ್ಯಮಂತ್ರಿ ಆಗಬೇಕಾದರೆ ಜನಾದೇಶ ಬೇಕು: ಸಿದ್ದರಾಮಯ್ಯ ಟೀಂಗೆ ಎಂಟಿಬಿ ತಿರುಗೇಟು
ಕರ್ನಾಟಕದಲ್ಲಿ ಕಾಂಗ್ರೆಸ್ ಹಗಲುಗನಸು ಕಾಣುತ್ತಿದೆ. ಸಿದ್ದರಾಮಯ್ಯನ ಸ್ಟೈಲಲ್ಲೇ ಹೇಳೋದಾದ್ರೆ ಅಪ್ಪನ ಆಣೆ ಸಿಎಂ ಆಗಲ್ಲ ಎಂದು ಹೇಳಬಹುದು. ಆಪಾದನೆ ಬಂದಾಗ ಈಶ್ವರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಈಗ ಮುಖ್ಯಮಂತ್ರಿ ಪರಿಶೀಲನೆ ಮಾಡಬೇಕು ಎಂದರು. ಪಕ್ಷ ಕಟ್ಟಿ, ಬೆಳೆಸಿದ ಹಲವು ಪ್ರಮುಖರಲ್ಲಿ ಈಶ್ವರಪ್ಪನವರೂ ಕೂಡ ಒಬ್ಬರು ಎಂದಿದ್ದಾರೆ.