ಬೆಂಗಳೂರು: ದೇಶಭಕ್ತಿ ಇರೋರು ಸೇನೆ ಸೇರ್ತಾರೆ ದೇಶಭಕ್ತಿ ಇಲ್ಲದಿರೋರು ಸಿದ್ದರಾಮಯ್ಯ ಥರ ಮಾತನಾಡುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement
ಅಗ್ನಿಪಥ್ ವಿಚಾರವಾಗಿ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಗ್ನಿಪಥ್ ವಿಚಾರ ಬಗ್ಗೆ ಮೂರೂ ಸೇನೆಯ ದಂಡನಾಯಕರೂ ಸ್ಪಷ್ಟಪಡಿಸಿದ್ದಾರೆ. ಇಸ್ರೇಲ್, ಸ್ವಿಟ್ಜರ್ಲೆಂಡ್, ರಷ್ಯಾ, ಅಮೆರಿಕಗಳಲ್ಲಿ ಯುವಕರನ್ನು ಸೇನೆಗೆ ಭರ್ತಿಮಾಡಿಕೊಳ್ಳುವ ಅವಕಾಶ ಇದೆ. ಎಂಟತ್ತು ದೇಶಗಳು ಶಿಕ್ಷಣದ ಜೊತೆಗೆ ಸೇನೆಗೂ ತರಬೇತಿ ಕೊಡುತ್ತಿವೆ. ಇದರಿಂದ ಅವರ ಕಾರ್ಯಕ್ಷಮತೆ ಹೆಚ್ಚುತ್ತೆ. ನಾಲ್ಕುವರ್ಷದ ಪ್ಯಾಕೇಜ್ ಸಿಗುತ್ತೆ. ಕೇಂದ್ರ, ರಾಜ್ಯ, ಬ್ಯಾಂಕಿಂಗ್ ವಲಯಗಳಲ್ಲಿ ಸೇರಲು ಆಧ್ಯತೆಯನ್ನೂ ನೀಡಲಾಗುತ್ತದೆ. ಅಗ್ನಿಪಥ್ ಸಾಮರ್ಥ್ಯ ತುಂಬುವ ಕೆಲಸ ಮಾಡುತ್ತೆ, ದುರ್ಬಲ ಮಾಡಲು ತಂದಿದ್ದಲ್ಲ. ಸೇನೆ ದುರ್ಬಲ ಮಾಡಲು ಸೇನೆಗೆ ತಗೋತಿದ್ದಾರಾ? ಇಲ್ಲ ಅಲ್ವಾ? ಸಿದ್ಧಾಂತ ಇಲ್ಲದಿರೋರು ಸಿದ್ದರಾಮಯ್ಯ ಥರ ಮಾತನಾಡುತ್ತಾರೆ ಸಿದ್ದರಾಮಯ್ಯ ಎಡಬಿಡಂಗಿ ಎಂದು ಮೊನ್ನೆನೇ ಹೇಳಿದ್ದೇನೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಲ್ಲ: ಫಾರೂಕ್ ಅಬ್ದುಲ್ಲಾ
Advertisement
Advertisement
ಸೈನ್ಯಕ್ಕೆ ಹೋಗುವವನ ಮನಸ್ಸಿನ ಸ್ಥಿತಿ ಹೇಗೆ ಇರಬೇಕು? ಅದು ಜಾಬ್ ಗ್ಯಾರಂಟಿ ಸ್ಕೀಮ್ ಅಲ್ಲ. ಇದು ಭಾರತ ಮಾತೆಯ ಸೇವೆ. ಅಲ್ಲಿ ಹೋಗೊದು ಬೆಂಕಿ ಹಾಕೋಕೆ ಅಲ್ಲ. ಬೆಂಕಿ ಹಾಕೋರು ಸೈನ್ಯಕ್ಕೆ ಹೋದರೆ ಇನ್ನೂ ಅಪಾಯಕಾರಿ. ಈ ಬೆಂಕಿ ಹಾಕಿರುವ ಹಿಂದೆ ಷಢ್ಯಂತ್ರ ಇರಬಹುದು ಎಂಬ ಅನುಮಾನ. ದೇಶ ಪ್ರೇಮ ಇರುವವರು ಬೆಂಕಿ ಹಾಕಲ್ಲ. ಇದರ ಹಿಂದೆ ಪೂರ್ವ ಯೋಜನೆ ಇದೆ ಅನಿಸುತ್ತಿದೆ. ದೇಶದ ಆಸ್ತಿ ಸುಡೋರು ಯಾರು ಸೈನ್ಯಕ್ಕೆ ಸೇರೋರು ಅಲ್ಲ. ಅನೇಕ ಕಾರಣಕ್ಕೆ ದೇಶ ವಿರೋಧ ಮಾಡೋರು ಹೀಗೆ ಮಾಡಿರಬಹುದು. ಮೊದಲೇ ಬೆಂಕಿ ಪೊಟ್ಟಣ ತಂದಿದ್ರು, ಪೆಟ್ರೋಲ್ ತಂದಿದ್ರು. ಏಕಾಏಕಿ ಬೆಂಕಿ ಹಾಕಿದ್ರು. ಕೆಲವರಿಗೆ ಯಾವ ಕಾರಣಕ್ಕೂ ದೇಶಕ್ಕೆ ಒಳ್ಳೆಯದು ಆಗಬಾರದು ಅನ್ನೋದು ಇರತ್ತೆ. ಇವರ ರೈತ ಹೋರಾಟ ನೋಡಿ ಪಂಜಾಬ್‍ನಲ್ಲಿ ಕಾಂಗ್ರೆಸ್ ಸೋಲಿಸಿದರು ಎಂದರು. ಇದನ್ನೂ ಓದಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯ ಆಪ್ತ ಸಹಾಯಕ ಎಂದು ಹಣ ಪಡೆದು ವಂಚನೆ – ಪ್ರಕರಣ ದಾಖಲು
Advertisement
ಪಠ್ಯ ಪರಿಷ್ಕರಣೆ ವಿರುದ್ಧ ಫ್ರೀಡಂಪಾರ್ಕ್‍ನಲ್ಲಿ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ಹೋರಾಟ ಮಾಡೋದು ತಪ್ಪಲ್ಲ. ಆದ್ರೆ ಅವರು ಯಾವ ಉದ್ದೇಶಕ್ಕೆ ಹೋರಾಟ ಮಾಡ್ತಿದ್ದಾರೋ ಆ ವಿಚಾರದಲ್ಲಿ ಅವರಿಗೆ ಮಾಹಿತಿ ಕಮ್ಮಿ ಇದೆ. ಕುವೆಂಪು ಪಾಠ ತೆಗೆದಿದ್ರು ಬರಗೂರು ರಾಮಚಂದ್ರಪ್ಪ. ಅದರ ಬದಲು ಪೆರಿಯಾರ್ ಪಾಠ ಸೇರಿಸಿದ್ರು. ಪೆರಿಯಾರ್ ಶ್ರೀರಾಮನಿಗಿಂತ ರಾವಣನೇ ಹೆಚ್ಚು ಅಂದವರು. ಇದೀಗ ಅಂಬೇಡ್ಕರ್ ಬಗ್ಗೆ ಪರಿಷ್ಕರಣೆಯಲ್ಲಿ ಇನ್ನೂ ಹೆಚ್ಚಿನ ಮಾಹಿತಿ ಸೇರಿಸಲಾಗಿದೆ. ಕೆಲವರಿಗೆ ಇದು ರಾಜಕಾರಣ. ಕೆಲವರಿಗೆ ದೇಶ ಸೇವೆ ಬೇಕಾಗಿಲ್ಲ. ಹೀಗಾಗಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ ಎಂದು ಹರಿಹಾಯ್ದರು.