ಬೆಂಗಳೂರು: ಡಿಕೆಶಿ ನಟ್ಟು ಬೋಲ್ಟ್ ಟೈಟ್ ಮಾಡುತ್ತೇವೆ ಎಂದು ಎಲ್ಲೋ ಒಂದು ಕಡೆ ಲೂಸ್ ಲೂಸಾಗಿ ಮಾತನಾಡಿರಬಹುದು ಎಂದು ಪರಿಷತ್ ಸದಸ್ಯ ಸಿ.ಟಿ.ರವಿ (CT Ravi) ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಖರ್ಗೆ ಅವ್ರ ಮಾತಿಗೆ ನಾನು ಬದ್ಧನಾಗಿದ್ದೇನೆ – ಡಿಕೆಶಿ
Advertisement
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬೆದರಿಕೆ ಹಾಕುವುದು ಗೌರವ ಸಂಗತಿಯೇ? ಕಲಾವಿದರು ಕಾಂಗ್ರೆಸ್ ಜೀತದಾಳುಗಳಲ್ಲ, ಡಿಕೆಶಿ ನಟ್ಟು ಬೋಲ್ಟ್ ಟೈಟ್ ಮಾಡುತ್ತೇವೆ ಎಂದು ಎಲ್ಲೋ ಒಂದು ಕಡೆ ಲೂಸ್ ಲೂಸಾಗಿ ಮಾತನಾಡಿರಬಹುದು ಎಂದು ಹೇಳಿದರು.
Advertisement
ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂಬ ಮೊಯ್ಲಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರ ಪಕ್ಷ ನಿರ್ಣಯ ಮಾಡಿ ಮುಖ್ಯಮಂತ್ರಿ ಎಂದು ಒಪ್ಪಿದರೆ ಸಿಎಂ ಆಗ್ತಾರೆ. ಹೀಗೆ ಹೇಳುವುದರ ಮೂಲಕ ನಾನೇ ಮುಖ್ಯಮಂತ್ರಿ ಎಂದು, ಸಿಎಂ ಅವರನ್ನ ಇಳಿಸುತ್ತೇವೆ ಅಂತ ಯಾಕೆ ಅಪಮಾನ ಮಾಡ್ತೀರಾ? ಇಳಿಸುವುದಾದರೆ ಒಂದೇ ದಿನ ಇಳಿಸಿ. ಅವರನ್ನು ಕೂರಿಸಿ, ಯಾಕೆ ಸಿದ್ದರಾಮಯ್ಯ ಅವರಿಗೆ ಅಪಮಾನ ಮಾಡ್ತೀರಾ? ಬಜೆಟ್ ಮಂಡಿಸುವ ವೇಳೆ ಈ ರೀತಿ ಆದರೆ ಅಪಮಾನ ಎಂದು ವ್ಯಂಗ್ಯವಾಡಿದರು.ಇದನ್ನೂ ಓದಿ: ‘ಅರಗಿಣಿ ಮೇಲೆ ‘ವಿದ್ಯಾಪತಿ’ಗೆ ಲವ್- ನಾಗಭೂಷಣ್, ಮಲೈಕಾ ರೊಮ್ಯಾಂಟಿಕ್ ಸಾಂಗ್ ಔಟ್
Advertisement
Advertisement