ಚಿಕ್ಕಮಗಳೂರು: ಪಾಕಿಸ್ತಾನದಲ್ಲಿ (Pakistan) ರಾಷ್ಟ್ರಧ್ವಜ (National Flag) ಹಾರಿಸೋದು ಕಾಂಗ್ರೆಸ್‌ಗೆ ಭಯೋತ್ಪಾದನೆ ಅನ್ನಿಸುತ್ತಿದೆ. ಇದು ಕಾಂಗ್ರೆಸ್ ನ ಅಧೋಗತಿಗೆ ಸಾಕ್ಷಿ. ಪಾಕಿಸ್ತಾನದ ಹುಚ್ಚುನಾಯಿ ಕಚ್ಚಿದವರು ಮಾತ್ರ ಹೀಗೆ ಹೇಳಲು ಸಾಧ್ಯ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ (CT Ravi) ಲೇವಡಿ ಮಾಡಿದ್ದಾರೆ.
Advertisement
ದತ್ತಪೀಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇಸ್ಲಾಮಾಬಾದ್‌ನಲ್ಲಿ (ಪಾಕ್ ರಾಜಧಾನಿ) ತಿರಂಗ ಹಾರಿಸುತ್ತೇನೆ ಎಂದು ನಾನು ಹೇಳಿದ್ದೇನೆ. ಆದ್ರೆ ರಾಷ್ಟ್ರಧ್ವಜ ಹಾರಿಸೋದು ಕಾಂಗ್ರೆಸ್‌ಗೆ (Congress) ಭಯೋತ್ಪಾದನೆ ಅಂತೆ. ಭಯೋತ್ಪಾದಕರಿಗೂ (Terrorism) ದೇಶಭಕ್ತರಿಗೂ ವ್ಯತ್ಯಾಸ ಗೊತ್ತಿಲ್ಲದ ಮತಿಭ್ರಮಣೆಯ ಮಾನಸಿಕತೆ ಕಾಂಗ್ರೆಸ್ ನದ್ದು ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಬಿಜೆಪಿ ಸೇರಿದ್ದ ಪಟೀದಾರ್ ಚಳುವಳಿಯ ನಾಯಕ ಹಾರ್ದಿಕ್ ಪಟೇಲ್‍ಗೆ ಗೆಲುವು
Advertisement
Advertisement
ಇಸ್ಲಾಮಾಬಾದ್ ನಲ್ಲಿ ರಾಷ್ಟ್ರಧ್ವಜ ಹಾರಿಸೋದೂ ಕಾಂಗ್ರೆಸ್‌ಗೆ ಭಯೋತ್ಪಾದಕತೆ ಅಂತೆ. ಕಾಂಗ್ರೆಸ್‌ನ ಅಧೋಗತಿಗೆ ಇದು ಸಾಕ್ಷಿ. ನಮ್ಮ ದೇಶದ ಹುಚ್ಚುನಾಯಿ ಕಚ್ಚಿದ್ರೂ ಹಾಗೇ ಹೇಳಲ್ಲ. ಯಾವುದೋ ಪಾಕಿಸ್ತಾನದ ಹುಚ್ಚುನಾಯಿ ಮಾಜಿ ಸಚಿವ ಮಹದೇವಪ್ಪನಿಗೆ ಕಚ್ಚಿರಬೇಕು. ಪಾಕಿಸ್ತಾನದ ಹುಚ್ಚುನಾಯಿ ಕಚ್ಚಿರೋರು ಮಾತ್ರ ಹೀಗೆ ಹೇಳೋಕೆ ಸಾಧ್ಯ. ಕಾಂಗ್ರೆಸ್‌ಗೂ ಜಿಹಾದಿಗಳ ಮನಸ್ಥಿತಿಗೂ ಯಾವುದೇ ವ್ಯತ್ಯಾಸವಿಲ್ಲ. ದೇಶದ ಹಿತದೃಷ್ಟಿಯಿಂದ ಇಂತಹವರನ್ನ ನಿಮ್ಹಾನ್ಸ್‌ಗೆ ಸೇರಿಸಿ ಟೆಸ್ಟ್ ಮಾಡಿಸೋದು ಒಳ್ಳೆಯದು. ಒಂದು ವೇಳೆ ಇದು ಮಹದೇವಪ್ಪ ಅವರ ವೈಯಕ್ತಿಕ ಹೇಳಿಕೆ ಮಾತ್ರ ಅನ್ನೋದಾದ್ರೆ, ಕಾಂಗ್ರೆಸ್ ಸ್ಪಷ್ಟನೆ ಕೊಡಲಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: 1 ತಿಂಗಳ ಹಿಂದೆ ಪಿಯೂಷ್ ಗೋಯಲ್ ಹೇಳಿದ್ದ ಭವಿಷ್ಯ ನಿಜವಾಯ್ತು – ವೀಡಿಯೋ ವೈರಲ್
Advertisement
ಇದೇ ವೇಳೆ ಗುಜರಾತ್ ಚುನಾವಣೆ ಕುರಿತು ಮಾತನಾಡಿ, ಗುಜರಾತ್ ಚುನಾವಣೆಯ ಫಲಿತಾಂಶ ರಾಜ್ಯದ ಮೇಲೆ ಭಾಗಶಃ ಪರಿಣಾಮ ಬೀರುತ್ತೆ. ಹಾಗಂತ ನಾವಿಲ್ಲಿ ಸುಮ್ಮನೆ ಕೂರೋ ಹಾಗಿಲ್ಲ, ಕಷ್ಟಪಡಲೇಬೇಕು. ನಮಗೆ ಈಗಿರುವ ವಾತಾವರಣದಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಸರ್ಕಾರದ ಅವಧಿ ಮುಗಿದ ಮೇಲೆ ಚುನಾವಣೆಗೆ ಹೋಗುತ್ತೇವೆ. ಮಧ್ಯಂತರದಲ್ಲಿ ಚುನಾವಣೆ ನಡೆಸಬೇಕಾದ ಅವಶ್ಯಕತೆ ನಮಗಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.