-ಕಾಂಗ್ರೆಸ್‍ನಿಂದ ಪ್ರಾಮಾಣಿಕತೆ ನಿರೀಕ್ಷಿಸಬೇಡಿ
-ಖರ್ಗೆ ಸಂವಿಧಾನ ನನಗೆ ಗೊತ್ತಿಲ್ಲ
ಕಲಬುರಗಿ: ಅಂಗೈ ಹುಣ್ಣಿಗೆ ಸಾಕ್ಷಿ ನೋಡಬೇಕಾದ ಅವಶ್ಯಕತೆ ಇಲ್ಲ. ಮುಸ್ಲಿಂ ರಾಜರ ಆಳ್ವಿಕೆಯಲ್ಲಿ ಹಿಂದೂ ದೇವಾಲಯದ ಮೇಲೆ ಮಸೀದಿ ಕಟ್ಟಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
Advertisement
ಕಲಬುರಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜ್ಞಾನವ್ಯಾಪಿ ಮಸೀದಿ ಬಗ್ಗೆ ಸರ್ವೇಕ್ಷಣಾ ನಡೆಯುತ್ತಿದೆ. ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ಮೇಲೆ ಸತ್ಯ ಗೊತ್ತಾಗಲಿದೆ. ಅಂಗೈ ಹುಣ್ಣಿಗೆ ಸಾಕ್ಷಿ ನೋಡಬೇಕಾದ ಅವಶ್ಯಕತೆ ಇಲ್ಲ. ಮುಸ್ಲಿಂ ರಾಜರ ಆಳ್ವಿಕೆಯಲ್ಲಿ ಹಿಂದೂ ದೇವಾಲಯದ ಮೇಲೆ ಮಸೀದಿ ಕಟ್ಟಿದ್ದಾರೆ. ಸ್ವತಂತ್ರ ಭಾರತದಲ್ಲಿ ಸತ್ಯಕ್ಕೂ ಸಾಕ್ಷಿ ಬೇಕು. ಹಾಗಾಗಿ ಸಾಕ್ಷಿ ಒದಗಿಸುವ ಕೆಲಸ ನಡೆಯುತ್ತಿದೆ ಎಂದರು.
Advertisement
Advertisement
ಶ್ರೀರಂಗಪಟ್ಟಣ ಮೂಡಲಬಾಗಿಲಿನಲ್ಲಿ ಆಂಜನೇಯ ದೇವಸ್ಥಾನ ಇದ್ದ ಬಗ್ಗೆ ಸಾಕ್ಷಿ ಇದೆ. ಟಿಪ್ಪು ಅದರ ಮೇಲೆ ಜಾಮೀಯಾ ಮಸೀದಿ ಕಟ್ಟಿರುವುದು. ಅಲ್ಲಿನ ಮಕ್ಕಳಿಗೂ ಗೊತ್ತಿದೆ. ಅಲ್ಲಿನ ಸರ್ವೇಕ್ಷಣ ಮಾಡಿದರೆ, ಸತ್ಯ ಗೊತ್ತಾಗುತ್ತದೆ. ಟಿಪ್ಪು ಕನ್ನಡ ಪ್ರೇಮಿ ಅಂತಾರೆ, ಆದರೆ ಆತ ಆಡಳಿತ ಭಾಷೆಯನ್ನು ಪರ್ಷಿಯನ್ ಭಾಷೆ ಮಾಡಿದ್ದ. ಹಾಗಾಗಿ ಮೇಲಿನ ತೆರೆ ಸರಿಸಿದರೆ ಸತ್ಯ ಗೊತ್ತಾಗುತ್ತದೆ ಎಂದು ಹೇಳಿದರು.
Advertisement
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಸಾಯಿ ಶಂಕರ ಶಾಲೆಯಲ್ಲಿ ಭಜರಂಗದಳ ನೂರಾರು ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದು, ಈ ವಿಚಾರವಾಗಿ ಮಾತನಾಡಿದ ಅವರು, ಭಜರಂಗದಳ ಪ್ರತಿ ವರ್ಷ ಅಭ್ಯಾಸ ವರ್ಗ ನಡೆಸುತ್ತದೆ. ಪೊಲೀಸ್ ಇಲಾಖೆ ಕೂಡಾ ತರಬೇತಿ ನೀಡುತ್ತದೆ. ಆದರೆ ಬಾಂಬ್ ಹಾಕುವ ತರಬೇತಿ ಕೊಟ್ಟಿಲ್ಲ. ಬದಲಾಗಿ ಏರ್ ಗನ್ ತರಬೇತಿ ನೀಡಿದೆ. ಅದರಲ್ಲಿ ತಪ್ಪೇನಿಲ್ಲ ಎಂದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಪರಿಸರವಾದಿಗಳ ತೀವ್ರ ವಿರೋಧ
ಕಾಂಗ್ರೆಸ್‍ಗೆ ನಿಯಮ ಮಾಡುವುದು ಗೊತ್ತು ಅದನ್ನು ಬೈಪಾಸ್ ಮಾಡುವುದು ಗೊತ್ತು. ಐದು ವರ್ಷ ಕಾರ್ಯಕರ್ತನಾಗಿ ದುಡಿದಿದ್ದರೆ, ಟಿಕೆಟ್ ನೀಡಬಹುದು ಎನ್ನುವ ಪರ್ಯಾಯ ಮಾರ್ಗವನ್ನು ಹುಡುಕಿ ಕೊಂಡಿದ್ದಾರೆ. ಕಾಂಗ್ರೆಸ್‍ನಿಂದ ಪ್ರಾಮಾಣಿಕತೆ, ದೇಶಭಕ್ತಿ ನಿರೀಕ್ಷೆ ಮಾಡಲೇಬೇಡಿ. ವಂಶವಾಹಿನಿ ಹೊರತಾದ ರಾಜಕಾರಣ. ಮತಿಯ ಓಲೈಕೆ ಇಲ್ಲದ ರಾಜಕಾರಣ, ಭ್ರಷ್ಟಾಚಾರ ರಹಿತ ಆಡಳಿತ ಕಾಂಗ್ರೆಸ್ ನಿಂದ ನಿರೀಕ್ಷೆ ಮಾಡಿದರೆ ಭ್ರಮ ನಿರಸನವಾಗುತ್ತದೆ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಬಿಜೆಪಿಯವರಿಗೆ ಸಂವಿಧಾನ ಕಲಿಸಬೇಕಾಗಿದೆ ಎಂಬ ಪ್ರಿಯಾಂಕ ಖರ್ಗೆ ಹೇಳಿಕೆ ಕುರಿತಂತೆ ಮಾತನಾಡಿದ ಅವರು, ನಮಗೆ ಅಂಬೇಡ್ಕರ್ ಸಂವಿಧಾನದ ಬಗ್ಗೆ ಗೊತ್ತು. ಆದರೆ ಪ್ರಿಯಾಂಕ್ ಖರ್ಗೆ ಅವರ ಸಂವಿಧಾನದ ಬಗ್ಗೆ ಗೊತ್ತಿಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಅಶ್ವತ್ಥನಾರಾಯಣ ಪ್ರಯೋಗ ಫೇಲ್ಯೂರ್ – ಹೈಕಮಾಂಡ್ ಅಸಮಾಧಾನದಿಂದ ಏಕಾಂಗಿಯಾದ ಸಚಿವ
ಚಿಕ್ಕಮಗಳೂರು ದತ್ತ ಪೀಠದ ಘೋರಿಗಳಿಗೆ ಮಾಂಸ ನೈವೇದ್ಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಅಕ್ಷಮ್ಯ ಅಪರಾಧ. ಇದರ ಹಿಂದೆ ಯಾರೇ ಇದ್ದರೂ ಕ್ರಮ ಆಗಬೇಕು. ನಿನ್ನೆ ರಾತ್ರಿಯಷ್ಟೇ ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಜಿಲ್ಲಾಧಿಕಾರಿಗೆ ವಾಟ್ಸಪ್ ಸಂದೇಶ ಕಳುಹಿಸಿದ್ದೇನೆ. 300 ಮೀಟರ್ ವ್ಯಾಪ್ತಿಯಲ್ಲಿ ಪ್ರಾಣಿ ಬಲಿ ನಿಶ್ಯಿದ್ಧವಾಗಿದೆ. ಆದರೂ ಹೇಗೆ ಅವಕಾಶ ಕೊಟ್ಟರೋ ಗೊತ್ತಿಲ್ಲ. ಪ್ರಾಣಿ ಬಲಿ ಮಾಡಿದವರ ವಿರುದ್ಧ ಮತ್ತು ನಿರ್ಲಕ್ಷ್ಯ ತೋರಿದ ಮುಜರಾಯಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದರ ಹಿಂದೆ ಯಾರಿದ್ದಾರೆ, ಅವರ ವಿರುದ್ಧವೂ ಸೂಕ್ತ ಕ್ರಮ ಆಗಬೇಕು. ನಿಯಂತ್ರಣ ಜವಾಬ್ದಾರಿ ಹೊತ್ತವರು ನಿರ್ಲಕ್ಷ್ಯತನ ಮಾಡಿದ್ದು ಸರಿಯಲ್ಲ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು. ನಾನು ಊರಲ್ಲಿ ಇಲ್ಲದ ಸಮಯ ಈ ಘಟನೆ ನಡೆದಿದೆ. ನಾನು ಹೋದ ಮೇಲೆ ಪರಿಶೀಲಿಸುವೆ ಎಂದರು