ಚಿಕ್ಕಮಗಳೂರು: ಮಾನ ಇದ್ದವರು ಮಾನದ ಬಗ್ಗೆ ಯೋಚನೆ ಮಾಡುತ್ತಾರೆ. ಮಾನ ಇಲ್ಲದವರು ಏನು ಯೋಚನೆ ಮಾಡುತ್ತಾರೆ. ಮಾನನಷ್ಟ ಮೊಕದ್ದಮೆ ಹೂಡಲಿ ಅದು ಅಂತಹ ಸಂದರ್ಭದಲ್ಲಿ ಅವರಿಗೆ ತಿರುಗುಬಾಣವಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ವಾಗ್ದಾಳಿ ನಡೆಸಿದರು.
ನಗರದ ದಂಟರಮಕ್ಕಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ಸಿ.ಟಿ.ರವಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದಿದ್ದ ಡಿಕೆಶಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಚಿಕ್ಕಮಗಳೂರಿನ (Chikkamagaluru) ಬಗ್ಗೆ ಯಾವುದೇ ತಿಳುವಳಿಕೆ ಹಾಗೂ ಮಾಹಿತಿ ಇಲ್ಲ. ಚಿಕ್ಕಮಗಳೂರಿನಲ್ಲಿ ಹಿಂದುತ್ವ ಹಾಗೂ ಅಭಿವೃದ್ಧಿಯೇ ಗೆಲ್ಲುವುದು ಎಂದು ಭವಿಷ್ಯ ನುಡಿದರು.
Advertisement
Advertisement
ನಾವು ನಮ್ಮ ಅಭಿವೃದ್ಧಿ ಹಾಗೂ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಮತ ಕೇಳುತ್ತೇವೆ. ಕಾಂಗ್ರೆಸ್ಸಿಗರು ಏನೆಂದು ಕೇಳುತ್ತಾರೆ. ಕಾಂಗ್ರೆಸ್ಸಿಗರು ತಮ್ಮ ತಮ್ಮ ಆಡಳಿತದ ಆಳ್ವಿಕೆಯಲ್ಲಿ ಏನು ಮಾಡಿದ್ದೇವೆ ಎಂದು ಮತವನ್ನು ಕೇಳುತ್ತಾರೆ. ಕಾಂಗ್ರೆಸ್ಸಿಗರಿಗೆ ಇಲ್ಲಿ ಮತ ಕೇಳಲು ಮುಖವೇ ಇಲ್ಲ, ಮಾಡಿರುವ ಕೆಲಸವೂ ಇಲ್ಲ. ನಾನು ಕಾಂಗ್ರೆಸ್ಸಿಗರಿಗೆ (Congress) ಸವಾಲು ಹಾಕುತ್ತೇನೆ. ಅವರು ತಮ್ಮ ಕಾಲದಲ್ಲಿ ಇಂತದ್ದು ಕೆಲಸ ಮಾಡಿದ್ದೇವೆಂದು ಹೇಳಿ ನೈತಿಕತೆ ಇದ್ದರೆ ಮತ ಕೇಳಲಿ ಎಂದರು.
Advertisement
ಚಿಕ್ಕಮಗಳೂರಿನ ಜನರಿಗೆ ಸಿ.ಟಿ. ರವಿ ಏನೆಂದು ಗೊತ್ತು? ನಾನು ಈ ಮಣ್ಣಿನ ಮಗ. ಡಿ.ಕೆ.ಶಿವಕುಮಾರ್ ಚಾಲೆಂಜ್ ಹಾಕಿರುವುದು ಚಿಕ್ಕಮಗಳೂರಿನ ಜನಕ್ಕೆ, ನನಗಲ್ಲ. ಜನ ಅವರ ಸವಾಲನ್ನು ಸ್ವೀಕರಿಸಿ ಅದಕ್ಕೆ ತಕ್ಕ ಉತ್ತರ ನೀಡುತ್ತಾರೆ. ಡಿ.ಕೆ. ಶಿವಕುಮಾರ್ ಅವರಿಗಿರುವ ಆತಂಕವನ್ನು ಹೊರಹಾಕಿದ್ದಾರೆ. ದೇ ಆರ್ ಆಲ್ ಮೈ ಬ್ರದರ್ಸ್ ಅಂತ ಅವರೇ ಹೇಳಿದ್ದು, ನಾನಲ್ಲ. ಡಿಜೆ-ಕೆಜೆ ಹಳ್ಳಿಯಲ್ಲಿ ಬೆಂಕಿ ಹಾಕಿದವರಿಗೆ ಬೆಂಬಲ ನೀಡಿದ್ದು ಯಾರು? ತನ್ನದೇ ಪಕ್ಷದ ದಲಿತ ಶಾಸಕನಿಗೆ ರಕ್ಷಣೆ ನೀಡದೆ ರಾಜಕಾರಣ ಮಾಡಿದವರು ಯಾರು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಲಿಂಗಾಯತರು, ಒಕ್ಕಲಿಗರು ಭಿಕ್ಷುಕರಲ್ಲ, ಇದು ನಮಗೆ ಬೇಕಾಗಿಲ್ಲ: ಡಿಕೆಶಿ ಕಿಡಿ
Advertisement
ಡಿಕೆಶಿ ಅವರು ಏನಾದರೂ ಮಾಡಿ ಸಿಎಂ ಆಗಬೇಕೆಂದು ಹೊರಟಿದ್ದಾರೆ. ನನ್ನ ಪ್ರಕಾರ ಈ ಬಾರಿ ಅದು ಆಗಲ್ಲ. ಅವರು ಸಿಎಂ ಆಗೋಕೆ ಸಾಧ್ಯವೇ ಇಲ್ಲ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಪ್ರಶ್ನೆ ಹಾಗೂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವ ಪ್ರಶ್ನೆಯೇ ಇಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಸಿಟಿ ರವಿ ವಿರುದ್ಧ ಡಿಕೆಶಿ ಮಾನನಷ್ಟ ಕೇಸ್?