ನವದೆಹಲಿ: ಗಾಂಧಿಯನ್ನು ಹತ್ಯೆ ಮಾಡಿದ್ದು ಬ್ರಾಹ್ಮಣ ಸಮುದಾಯದ ನಾಥೂರಾಮ್ ಗೂಡ್ಸೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಮಹಾತ್ಮ ಗಾಂಧಿ ಮೇಲೆ ಜನರು ನಂಬಿಕೆ ಇಟ್ಟಿದ್ದರು, ಆದರೂ ದೇಶ ವಿಭಜನೆಯಾಯಿತು. ಟಿಪ್ಪು ಸುಲ್ತಾನ್ (Tippu Sultan) ಜಾತಿ ಉಲ್ಲೇಖಿಸಿ ಅವನು ಮಾಡಿದ ಮಾರಣಹೋಮದ ಬಗ್ಗೆ ಅವರು ಮಾತನಾಡುತ್ತಾರಾ? ಸತ್ಯವನ್ನು ಹೇಳಲು ಧೈರ್ಯ ಇಲ್ಲದವನು ರಾಜಕೀಯ ನಪಂಸಕ ಎಂದು ಸಿ.ಟಿ ರವಿ (CT Ravi) ವಾಗ್ದಾಳಿ ನಡೆಸಿದ್ದಾರೆ.
Advertisement
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಸರ್ವಾಂತರ್ಯಾಮಿ, ಸರ್ವಜ್ಞರಾಗಿದ್ದಾರೆ ಅವರಿಗೆ ಎಲ್ಲವೂ ಗೊತ್ತಿದೆ. ಈಗ ಯಾವುದರ ಬಗ್ಗೆ ಚರ್ಚೆಯಾಗಬೇಕು? ಜಾತಿಯ ಬಗ್ಗೆ ಚರ್ಚೆಯಾಗಬೇಕೊ ಅಥವಾ ಅಭಿವೃದ್ಧಿ ಬಗ್ಗೆಯೂ ದೇವೇಗೌಡ (HD Devegowda) ರು ಮೊದಲ ಬಾರಿ ಮಂತ್ರಿಯಾಗಿದ್ದು, ರಾಮಕೃಷ್ಣ ಹೆಗಡೆ ಕಾಲದಲ್ಲಿ ರಾಮಕೃಷ್ಣ ಹೆಗಡೆ ಯಾವ ಜಾತಿ? ಜಾತಿ ರಾಜಕಾರಣ ಮಾಡುವವರು ಜಾತ್ಯತೀತರು ಹಿಂದುತ್ವ, ಅಭಿವೃದ್ಧಿ ಅಜೆಂಡಾ ಇಟ್ಟುಕೊಂಡವರು ಕೋಮುವಾದಿಗಳ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಹಸಿವಿನಿಂದ ಬಳಲಿದವರನ್ನು ರಕ್ಷಣೆ ಮಾಡಿದ್ದು ಸಿದ್ದರಾಮಯ್ಯ ಸರ್ಕಾರ: ಜಮೀರ್
Advertisement
Advertisement
ಕೆಆರ್ಎಸ್ (KRS Dam) ಗೆ ಹಾರಿ ಶಿಕ್ಷಕ ಆತ್ಮಹತ್ಯೆ ಆರೋಪದ ಬಗ್ಗೆ ಮಾತನಾಡಿ, ಯಾರೋ ಎಲ್ಲೂ ಹೋಗಿ ಸತ್ತರೆ ಯಾರು ಜವಬ್ದಾರಿ? ಹೊಳೆನರಿಸಿಪುರದಲ್ಲಿ ರೈಲ್ವೆ ಟ್ರ್ಯಾಕ್ಗೆ ಬಿದ್ದು ಇಬ್ಬರು ಸತ್ತರೆ ಅದಕ್ಕೆ ಹೊಣೆ ಯಾರು? ಸತ್ಯಹರಿಶ್ಚಂದ್ರ ಥರ ಇರೋರು ಬೇರೆಯವರ ಮೇಲೆ ಆರೋಪ ಮಾಡಬಹುದು. ಜಂತಕಲ್ ಮೈನಿಂಗ್ ಕೇಸ್ (Janthakal mining case) ಯಾರ ಮೇಲೆ ಇದೆ ಯಾರು ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ನಾನು ಜಾಮೀನಿನ ಮೇಲೆ ಆಚೆ ಇಲ್ಲ ಇಂದು ತಿರುಗೇಟು ನೀಡಿದರು. ಹೆಚ್ಡಿಕೆಗೆ ಪುರೋಹಿತರು ಅಡ್ಡಗಟ್ಟಿದ ವಿಚಾರವಾಗಿ ಮಾತನಾಡಿ ಆಕ್ಷನ್ ಗೆ ರಿಯಾಕ್ಷನ್ ಇರುತ್ತೆ ಎಂದರು.
Advertisement
ಬಿಜೆಪಿಯಲ್ಲಿ ಯಡಿಯೂರಪ್ಪ (BS Yediyurappa) ಕಡೆಗಣನೆ ಹೆಚ್ಡಿಕೆ ಆರೋಪದ ಬಗ್ಗೆ ಮಾತನಾಡಿ, ಯಡಿಯೂರಪ್ಪ ಜೊತೆ ಯಾವಾಗಲೂ ಕುಮಾರಸ್ವಾಮಿ ನಿಂತಿಲ್ಲ, ಅವರ ಜೊತೆ ನಿಂತಿದ್ದರೆ ಅವರ ಬಗ್ಗೆ ಮಾತನಾಡಲು ನೈತಿಕತೆ ಇರುತ್ತಿತ್ತು. ಸಿಂಪತಿಗೂ ಕೂಡ ಸರಕಾರ ಮಾಡಲು ಬಿಡಲಿಲ್ಲ ಕಾಂಗ್ರೆಸ್ (Congress) ನವರ ಜೊತೆ ಸೇರಿ ಸಿಎಂ ಆದವರು ಹೆಚ್ಡಿಕೆ, ಬಿಎಸ್ ವೈ ಆನಂದದಿಂದ ಪಕ್ಷದಲ್ಲಿ ಇದ್ದಾರೆ ಅವರು ಆನಂದದಿಂದ ಇರೋದನ್ನು ನೋಡಿ ಇವರಿಗೆ ಸಂಕಟ ಅವರು ಬೆಳಸಿದ ಪಕ್ಷ ಬಿಜೆಪಿ, ಬಿಜೆಪಿಯಿಂದ ಬೆಳೆದ ನಾಯಕ ಬಿಎಸ್ವೈ ಎಂದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k