ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಟೂಲ್ ಕಿಟ್ ನಡೆಯುತ್ತಿದೆ. ಅದು ಕೆಪಿಸಿಸಿ ಅಲ್ಲ. ಕೆಪಿಟಿಸಿ ಆಗಿ ಮಾರ್ಪಾಡಾಗಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಬದಲಾಗಿ ಕರ್ನಾಟಕ ಪ್ರದೇಶ ಟೂಲ್ ಕಿಟ್ ಕಮಿಟಿ ಆಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
Advertisement
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆಶಿ ಅಧ್ಯಕ್ಷರಾದ ಮೇಲೆ, ಕೆಪಿಸಿಸಿ ಹೋಗಿ ಕೆಪಿಟಿಸಿ ಆಗಿದೆ. ಕರ್ನಾಟಕ ಪ್ರದೇಶ್ ಟೂಲ್ ಕಿಟ್ ಕಮಿಟಿ ಆಗಿದೆ. ಈಗ ಗೊತ್ತಾಗುತ್ತಿದೆ. 2014ರಿಂದ ಮಾಡ್ತಿದ್ದಾರೆ. ಆಗ ಬಿಜೆಪಿ ಸರ್ಕಾರ ಇರಲಿಲ್ಲ. ಇದೀಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ ಹಾಗಾಗಿ ಪಿಎಸ್‍ಐ ಹಗರಣದ ವಿಚಾರಣೆ ಮಾಡಲು ಸಿಐಡಿ ತನಿಖೆಗೆ ನೀಡಲಾಗಿದೆ. ಕಾಂಗ್ರೆಸ್‍ನವರಿಗೆ ಸಿಐಡಿ ತನಿಖೆ ನಂಬಿಕೆ ಇಲ್ಲದಿದ್ರೆ, ಹೈಕೋರ್ಟಿಗೆ ಹೋಗಿ ನಮ್ಮ ಬಳಿ ಈ ರೀತಿಯ ಸಾಕ್ಷಿ ಇದೆ ಅಂತ ದಾಖಲೆ ಕೊಡಲಿ ಹೈಕೋರ್ಟ್ ಮೂಲಕವೇ ತನಿಖೆ ಮಾಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಜೊತೆ ದಿವ್ಯಾ ಹಾಗರಗಿ ಫೋಟೋ ತೆಗೆಸಿಕೊಂಡ ರಹಸ್ಯ ಬಯಲು
Advertisement
Advertisement
ಕಾಗಕ್ಕ, ಗೂಬಕ್ಕ ಕಥೆ ಹೇಳೋದು ಬೇಡ. ಯಾರ ಬಳಿ ಸಾಕ್ಷಿ ಇದೆ ಕೊಡಲಿ. ಸುಮ್ಮನೆ ಮಾತನಾಡೋದು ಬೇಡ. ತನಿಖಾ ಸಂಸ್ಥೆ ಮೇಲೆ ನಂಬಿಕೆ ಇಲ್ಲದಿದ್ರೆ, ದಾಖಲೆ ಹೈಕೋರ್ಟ್‍ಗೆ ಕೊಡಲಿ. ಗಾಳಿಯಲ್ಲಿ ಗುಂಡು ಹಾರಿಸೋದು ಬೇಡ. ಸಿದ್ದರಾಮಯ್ಯ ಅವರೇ ಕಿಂಗ್ ಪಿನ್ ಅಂತ ನಾನು ಹೇಳಲಾ? ನಾನು ಆ ರೀತಿ ಹೇಳಲ್ಲ, ತನಿಖೆ ನಡೆಯುತ್ತಿದೆ. ವಿಚಾರಣೆಗೆ ಹೋಗೋದು ಅಪಮಾನದ ಸಂಗತೀನಾ ಎಂದು ಪ್ರಶ್ನಸಿದರು. ಇದನ್ನೂ ಓದಿ: ಬಿಜೆಪಿಯವರು ವಿಧಾನ ಸೌಧವನ್ನು ವ್ಯಾಪಾರ ಸೌಧ ಮಾಡ್ತಿದ್ದಾರೆ: ಪ್ರಿಯಾಂಕ್ ಖರ್ಗೆ
Advertisement
ಸಚಿವ ಸಂಪುಟ ವಿಸ್ತರಣೆ ಕುರಿತಾಗಿ ಮಾತನಾಡಿ, ಸಚಿವ ಸಂಪುಟ ವಿಸ್ತರಣೆ ಸಿಎಂ ವಿವೇಚನಾ ಅಧಿಕಾರ. ಪಕ್ಷದ ಜೊತೆ ಸಮಾಲೋಚನೆ ಮಾಡಿ ಅಭಿಪ್ರಾಯ ಪಡೆದು ಸ್ವಯಂ ನಿರ್ಣಯ ಮಾಡಬೇಕು. ಒಂದೇ ವಿಚಾರ ಹೇಳೋದಾದ್ರೆ ಎಲ್ಲರ ಅಭಿಪ್ರಾಯ ಪಡೆದು ಮುಖ್ಯಮಂತ್ರಿ ಸ್ವತಂತ್ರವಾಗಿ ನಿರ್ಣಯ ಮಾಡಬೇಕು. ಇನ್ನು ಎಂಟು, ಒಂಭತ್ತು ತಿಂಗಳು ಸಿಗಲಿದೆ. ಕೆಲಸ ಮಾಡಬೇಕು ಅಷ್ಟೇ ಮುಖ್ಯಮಂತ್ರಿ ಬದಲಾವಣೆ ವಿಚಾರ ಊಹಾ ಪೂಹಕ್ಕೆ ಬೆಲೆ ಕೊಡುವ ಅವಶ್ಯಕತೆ ಇಲ್ಲ. ಮೊನ್ನೆ ಇಲ್ಲೇ ಶಾ ಬಂದಾಗ ರಾಜಕಾರಣ ಜೊತೆ ರಾಜ್ಯದ ಅಭಿವೃದ್ಧಿ, ದೇಶದ ಹಿತದೃಷ್ಟಿಯಿಂದ ಸಮಾಲೋಚನೆ ಮಾಡೋದು ಸ್ವಾಭಾವಿಕ ಎಂದರು.
ನಮ್ಮ ಪಕ್ಷ ಹತ್ತಾರು ಆಲೋಚನೆ ಮಾಡಿ ನಿರ್ಣಯ ತಗೋತಾರೆ. ಯತ್ನಾಳ್ ಅವರು ಚರ್ಚೆ ಮಾಡಿದ್ದಾರೆ, ಸಿಎಂ ಆಯ್ಕೆ ವೇಳೆ ಅನೇಕರು ಇದ್ದರು, ಎಲ್ಲಾ ಶಾಸಕರು ಉಪಸ್ಥಿತಿ ಇದ್ದರು ಯಾರನ್ನೂ ಮರೆಮಾಚಿ ಸಿಎಂ ಆಯ್ಕೆ ಮಾಡಿಲ್ಲ. ಕೆಲವರು ಸಂತೆ ಮಾತನಾಡ್ತಾರೆ. ಬೇರೆ ಪಕ್ಷದವರ ದಾರಿ ತಪ್ಪಿಸಲು ಈ ರೀತಿ ಹೇಳಿರಬಹುದು. ಯತ್ನಾಳ್ ಹೇಳಿರೋದು ತಪ್ಪು ಈ ಬಗ್ಗೆ ಅವರೇ ಸ್ಪಷ್ಟೀಕರಣ ನೀಡಬೇಕು. ವಿಪಕ್ಷಗಳಿಗೆ ಈ ಹೇಳಿಕೆಗಳು ಆಹಾರವಾಗಬಹುದು ಎಂದು ತಿಳಿಸಿದರು. ಇದನ್ನೂ ಓದಿ: ಅಂದು ಕಿತ್ತಾಡಿಕೊಂಡಿದ್ದ ಸಾರಾ ಮಹೇಶ್, ಎಚ್. ವಿಶ್ವನಾಥ್ ಇಂದು ದೋಸ್ತಿಗಳು
ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಆಗ್ತಿದೆ. ಇಂದು ಮಂಡ್ಯ ಮತ್ತು ಕೋಲಾರ ಜಿಲ್ಲೆಯಿಂದ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮಂಡ್ಯ ಗೆಲ್ಲದೆ ನಮ್ಮ ಗೆಲುವು ಪರಿಪೂರ್ಣ ಆಗದು. ಬಹಳ ಜನ ಬರ್ತಾರೆ ಕಾದು ನೋಡಿ. ನಮ್ಮ ಮಿಷನ್ 150ಗೆ ನಿಟ್ಟಿನಲ್ಲಿ ಕೆಲಸ ಮಾಡ್ತಿದ್ದೇವೆ. ಮುಂದಿನ ದಿನಗಳಲ್ಲಿ ಮಂಡ್ಯವನ್ನ ಬಿಜೆಪಿ ಭದ್ರಕೋಟೆ ಮಾಡಿಕೊಳ್ಳಲಿದ್ದೇವೆ ಎಂದರು.