ಬೆಂಗಳೂರು: ಕುಂಕುಮ ಇಟ್ಟವರು ಯಾರಾದ್ರೂ ಬಾಂಬ್ ಹಾಕಿದ್ರಾ? ಬಾಂಬ್ ಹಾಕುವವರು ಯಾರು ಎಂದರೇ ಟೋಪಿ ಹಾಕಿದವರು ಎಂದು ಸನ್ನೆ ಮಾಡಿ ತೋರಿಸುವ ಮೂಲಕ ಸಿಟಿ ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Advertisement
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಖಾಸಗಿ ಕಲ್ಯಾಣಮಂಟಪದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಈ ದೇಶದಲ್ಲಿ ಭಯೋತ್ಪಾದಕರಿಗೆ ಬಿರಿಯಾನಿ ತಿನಿಸೋ ಕಾಲ ಇತ್ತು. ಹಾಂಗಂತ ಈಗಲೂ ಬಿರಿಯಾನಿ ತಿನಿಸಬೇಕಾ? ಈಗ ಬಿರಿಯಾನಿ ಗಿರಿಯಾನಿ ಇಲ್ಲ. ಈಗ ಯಾರಾದ್ರೂ ಬಾಲ ಬಿಚ್ಚಿದ್ರೇ ಜೆಸಿಬಿ ಹೋಗುತ್ತೆ. ಬುಲ್ಡೋಜರ್ ಘರ್ಜಿಸುತ್ತೆ. ಈ ರೀತಿ ಮಾಡೋದು ಸರಿನೋ ತಪ್ಪೋ? ಎಂದು ಬಿಜೆಪಿ ಕಾರ್ಯಕರ್ತರಿಗೆ ಪ್ರಶ್ನೆ ಮಾಡಿದರು. ಈಗ ಭಯೋತ್ಪಾದನೆ ಮಾಡುವವರಿಗೆ ಬಿರಿಯಾನಿ ತಿನಿಸಲ್ಲ. ಬಂದೂಕಿನಿಂದ ದಾಳಿ ಮಾಡುವವರಿಗೆ ಸೈನಿಕರ ಬಂದೂಕಿನಿಂದಲೇ ಉತ್ತರ ಕೊಡ್ತೀವಿ. ಸರ್ಜಿಕಲ್ ಸ್ಟ್ರೈಕ್ ಮೂಲಕ ಉತ್ತರ ಕೊಟ್ಟಿದ್ದೇವೆ ಎಂದರು. ಇದನ್ನೂ ಓದಿ: ನನ್ನನ್ನು ಮಾತ್ರ ಟಾರ್ಗೆಟ್ ಮಾಡಿದ್ದಾರೆ ಬಿಜೆಪಿ ದ್ವೇಷದ ರಾಜಕೀಯ ಮಾಡುತ್ತಿದೆ: ಡಿಕೆಶಿ
Advertisement
Advertisement
ಸಿದ್ದರಾಮಯ್ಯ ಹೇಳ್ತಾರೆ ತಾನು ಹಿಂದೂ ಅಂತ ಆದ್ರೆ ಸಿದ್ದರಾಮಯ್ಯಗೆ ಕೇಸರಿ ಟೋಪಿ ಮಾತ್ರ ಬೇಡ. ನಾನು ಹಿಂದೂ ಆದ್ರೆ ಕೇಸರಿ ಟೋಪಿ ಹಾಕೋಕೆ ಬಂದಾಗ ಏನು ಮಾಡಿದ್ರು? ಕಿತ್ತಾಕಿದ್ರು. ಸಿದ್ದರಾಮಯ್ಯಗೆ ಕುಂಕುಮ ಇಟ್ಟವರ ಕಂಡ್ರೆ ಹೆದರಿಕೆ ಆಗುತ್ತಂತೆ, ನಮ್ಮ ತಾಯಂದಿರು ಕುಂಕಮ ಇಡ್ತಾರೋ ಇಲ್ವಾ?. ಟೋಪಿ ಕಂಡ್ರೆ ಸಿದ್ದರಾಮಯ್ಯಗೆ ಬಹಳ ಪ್ರೀತಿ. ಕೇಸರಿ ಪೇಟಾ ತೊಟ್ಟವರು ಯಾರು ಬಾಂಬ್ ಹಾಕಲಿಲ್ಲ. ಕೇಸರಿ ಶಾಲು ಹಾಕಿದವರು ಭಾರತ್ ಮಾತಾ ಕೀ ಜೈ ಅಂದ್ರು ಎಂದು ಸಿದ್ದರಾಮಯ್ಯ ನಡೆಯನ್ನು ಖಂಡಿಸಿದರು. ಇದನ್ನೂ ಓದಿ: ನಾಳೆಯಿಂದ ಹಿಜಬ್ ನಾಟಕ ಮಾಡಿದ್ರೆ ಕ್ರಿಮಿನಲ್ ಕೇಸ್: ರಘುಪತಿ ಭಟ್ ಎಚ್ಚರಿಕೆ
Advertisement
ತಪ್ಪು ಮಾಡಿದವರನ್ನು ತಲೆ ಮೇಲೆ ಕೂರಿಸಿಕೊಳ್ಳುವ ಜನ ನಾವಲ್ಲ. ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ದಾಳಿ ಬಗ್ಗೆ ಕಾಂಗ್ರೆಸ್ ಪಕ್ಷದ ನಿಲುವೇನು? ತಪ್ಪು ಮಾಡಿದವರು ನೀರು ಕುಡಿಯಲೇ ಬೇಕು, ಶಿಕ್ಷೆ ಆಗಲೇ ಬೇಕು. ತಪ್ಪು ಮಾಡಿದರು ವೋಟಿನಾಸೆಗೆ ಓಲೈಸೋ ಕಾಲವಿಲ್ಲ. ತಪ್ಪು ಮಾಡಿದವರು ಬಡವರು, ಶ್ರೀಮಂತರು ಅನ್ನೋ ಪ್ರಶ್ನೆ ಇಲ್ಲ. ಶ್ರೀರಾಮ ನವಮಿಯಂದು ಯಾಕೆ ಕಲ್ಲು ಎಸೆಯುತ್ತಾರೆ. ನಾವು ಏನಾದ್ರು ಅವರ ಮೆರವಣಿಗೆ ವೇಳೆ ಕಲ್ಲು ಹಾಕ್ತೀವಾ? ಎಂದು ಪ್ರಶ್ನೆ ಮಾಡಿದರು.