Bengaluru CityKarnatakaLatestMain Post

ನನ್ನನ್ನು ಮಾತ್ರ ಟಾರ್ಗೆಟ್ ಮಾಡಿದ್ದಾರೆ ಬಿಜೆಪಿ ದ್ವೇಷದ ರಾಜಕೀಯ ಮಾಡುತ್ತಿದೆ: ಡಿಕೆಶಿ

ಬೆಂಗಳೂರು: ಬಿಜೆಪಿ ದ್ವೇಷದ ರಾಜಕಾರಣ ಮಾಡಿದೆ. ನಾವು ಪಾದಯಾತ್ರೆ ನಡೆಸಿದ್ದಕ್ಕೆ ನಮ್ಮ ಮೇಲೆ ಕೇಸ್ ಹಾಕಿ ಕೋರ್ಟ್‍ಗೆ ಅಲೆಯುವಂತೆ ಮಾಡಿದೆ. ನನ್ನನ್ನು ಮಾತ್ರ ಟಾರ್ಗೆಟ್ ಮಾಡಿದೆ. ಬಿಜೆಪಿ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ದ್ವೇಷದ ರಾಜಕಾರಣ ಮಾಡಿದೆ. ನಾವು ಪಾದಯಾತ್ರೆ ನಡೆಸಿದ್ದಕ್ಕೆ ನಮ್ಮ ಮೇಲೆ ಕೇಸ್ ಹಾಕಿ ಕೋರ್ಟ್‍ಗೆ ಅಲೆಯುವಂತೆ ಮಾಡಿದೆ. ಇದಕ್ಕೆಲ್ಲ ಜನ ಉತ್ತರ ಕೊಡಬೇಕು. ನಾವು ನಮಗೋಸ್ಕರ ಹೋರಾಟ ಮಾಡಿದ್ವಾ?. ನಾವು ರೈತ ಪರ ಹೋರಾಟ ಮಾಡಿದ್ದು. ಇವತ್ತು ಜನಪ್ರತಿನಿಧಿ ನ್ಯಾಯಾಲಯದಲ್ಲಿ ಸಮನ್ಸ್ ಆಗಿತ್ತು. ಕೊರೊನಾ ವೈರಸ್ ಸಂದರ್ಭದಲ್ಲಿ ಕೇಸ್ ಹಾಕಿದ್ದಾರೆ. ಹತ್ತು ಸಾವಿರ ಜನ ಸೇರಿಸಿದ್ದಾರೆ ಅಂತಾ ಕೇಸ್ ಹಾಕಿದ್ದಾರೆ. ಆರು ಜನರ ಮೇಲೆ ಕೇಸ್ ಇದೆ. ಉದ್ದೇಶಪೂರ್ವಕವಾಗಿ ಕೇಸ್ ಹಾಕಿದ್ದಾರೆ. ಪಾದಯಾತ್ರೆ ಕೇಸ್, ರಾಮನಗರ ಕೇಸ್‍ನಿಂದಾಗಿ ಕೋರ್ಟ್‍ಗೆ ಅಲೆದಾಡಬೇಕು ಅಂತಾ ಅವರ ಉದ್ದೇಶ. ಶಿವಮೊಗ್ಗದಲ್ಲಿ ಈಶ್ವರಪ್ಪ, ರಾಘವೇಂದ್ರ ಪ್ರತಿಭಟನೆ ಮಾಡಿದ್ರು ಆಗ ಕಾನೂನು ಇರಲಿಲ್ವಾ ಕೊರೊನಾ ಇರಲಿಲ್ಲವಾ?. ಇದನ್ನು ಜನರು ನೋಡಬೇಕು ಬಿಜೆಪಿಗೆ ಉತ್ತರ ನೀಡಬೇಕು. ಕೇವಲ ದ್ವೇಷದಿಂದ ಮಾಡುತ್ತಿದ್ದಾರೆ. ರೈತರ ಪರವಾಗಿ ಹೋರಾಡಿದ್ದಕ್ಕೆ ಕೇಸ್ ಹಾಕಿದ್ದಾರೆ. ಹೋರಾಟ ಹತ್ತಿಕ್ಕುತ್ತಿದ್ದಾರೆ. ನಾವು ಯಾವುದಕ್ಕೂ ಜಗ್ಗಲ್ಲ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ದೃಷ್ಟಿಯಲ್ಲಿ ಗಲಭೆ ಆರೋಪಿಗಳಿಗೆ ಹಲಾಲ್, ಕಬಾಬ್ ನೀಡಿ ಉಪಚರಿಸಬೇಕಿತ್ತೇ?: ಬಿಜೆಪಿ ಕಿಡಿ

ಪಿಎಸ್‍ಐ ಪರೀಕ್ಷೆ ಅಕ್ರಮದಲ್ಲಿ ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಂಧನ ವಿಚಾರವಾಗಿ ಮಾತನಾಡಿ, ಯಾರೇ ಇರಬಹುದು ಅವರ ವಿರುದ್ಧ ಕ್ರಮಕೈಗೊಳ್ಳಿ ಹಗರಣವನ್ನು ಬಯಲಿಗೆಳೆದಿದ್ದೆ ಕಾಂಗ್ರೆಸ್ ಪ್ರಿಯಾಂಕ್ ಖರ್ಗೆ ಮೊದಲು ಹಗರಣ ಕುರಿತು ಮಾತನಾಡಿದ್ದರು ಎಂದರು. ಇದನ್ನೂ ಓದಿ: ಪರೀಕ್ಷಾ ಕೇಂದ್ರದಲ್ಲೂ ಹಿಜಬ್‌ ವಿದ್ಯಾರ್ಥಿನಿಯರ ಹೈಡ್ರಾಮಾ – ಮನೆಗೆ ನಡೆದ ವಿದ್ಯಾರ್ಥಿನಿಯರು

52 ಸಾವಿರ ಜನ ಪಿಎಸ್‍ಐ ಪರೀಕ್ಷೆ ಬರೆದಿದ್ದಾರೆ. ಅವರಿಗೆ ಅನ್ಯಾಯವಾಗಲಿದೆ. ಪಿಎಸ್‍ಐ ಪೋಸ್ಟ್‌ಗೆ 50 ರಿಂದ 60 ಲಕ್ಷ ಲಂಚ ಕೊಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿವೆ. ಈ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದೆ. ಎಲ್ಲಿ ನೋಡಿದ್ರು ಲಂಚ, ಲಂಚ ಎಂದು ಬಿಜೆಪಿ ವಿರುದ್ಧ ಕೆಂಡ ಕಾರಿದರು.

Leave a Reply

Your email address will not be published.

Back to top button