– ಕಾಂಗ್ರೆಸ್‌ನವರಿಗೆ ಆಪರೇಷನ್ ಸಿಂಧೂರದ ಅಪಪ್ರಚಾರ ಟಾಸ್ಕ್ ಕೊಟ್ಟಂಗೆ ಕಾಣ್ತಿದೆ
ಬೆಂಗಳೂರು: ಕಾಂಗ್ರೆಸ್‌ನವರು ಭಯೋತ್ಪಾದನೆ ಬೆಳೆಸುವ ಕೇಂದ್ರಗಳಿಗೆ ನೀರು ಗೊಬ್ಬರ ಹಾಕಿ ಪೋಷಿಸುತ್ತಿದ್ದಾರೆ ಎಂದು ಪರಿಷತ್ ಸದಸ್ಯ ಸಿ.ಟಿ ರವಿ(C T Ravi) ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ(Bengaluru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವ್ರು ಆಪರೇಷನ್ ಸಿಂಧೂರದ(Operation Sindoor) ಬಗ್ಗೆ ಅಪಸ್ವರದ ಮಾತಾಡ್ತಿದ್ದಾರೆ. ಯಾಕೆ ಕದನ ನಿಲ್ಲಿಸಿದ್ರಿ ಅಂತಿದ್ದಾರೆ. ಇನ್ನು ಕೆಲವರು ಕೇವಲ ನಾಲ್ಕು ವಿಮಾನ ಹಾರಿಸಿದ್ರು ಅಂದಿದ್ದಾರೆ. ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ದಿನೇಶ್, ಕೊತ್ತೂರು ಮಂಜುನಾಥ್ ಇವರಿಗೆಲ್ಲ ಆಪರೇಷನ್ ಸಿಂಧೂರದ ಬಗ್ಗೆ ಅಪಪ್ರಚಾರ ಮಾಡುವ ಟಾಸ್ಕ್ ಕೊಟ್ಟಂಗೆ ಕಾಣ್ತಿದೆ ಎಂದರು. ಇದನ್ನೂ ಓದಿ: ಕಾನ್ ಫೆಸ್ಟಿವಲ್‌ನಲ್ಲಿ ಕನ್ನಡತಿ- ಅಮ್ಮನ ಸೀರೆ ಗೌನ್ ಮಾಡಿದ ದಿಶಾ ಮದನ್
ಜೊತೆಗೆ ಕಾಂಗ್ರೆಸ್‌ನವ್ರಲ್ಲೇ ದ್ವಂದ್ವ ಕಾಣ್ತಿದೆ. ಇಡೀ ದೇಶ ಯುದ್ಧ ಬೇಕು ಅನ್ನುವಾಗ ಸಿದ್ದರಾಮಯ್ಯ(Siddaramaiah) ಯುದ್ಧ ಬೇಡ ಅಂದ್ರು. ನಂತರ ಸಿದ್ದರಾಮಯ್ಯ ಹಣೆ ಮೇಲೆ ದೊಡ್ಡ ಕುಂಕುಮ ಹಾಕಿಕೊಂಡು ಸುದ್ದಿಗೋಷ್ಠಿ ಮಾಡಿ ಸೈನಿಕರನ್ನು ಶ್ಲಾಘಿಸಿದರು. ಇಡೀ ಕ್ರೆಡಿಟ್ ಸೈನ್ಯಕ್ಕೆ ಅಂದ ಸಿದ್ದರಾಮಯ್ಯ ಈಗ ಅಪಪ್ರಚಾರ ಯಾಕೆ ಮಾಡ್ತಿದ್ದಾರೆ. ನಿಮ್ಮ ಅಪಪ್ರಚಾರ ಸೈನ್ಯದ ಬಗ್ಗೆನೋ ಅಥವಾ ರಾಜಕೀಯ ನಾಯಕತ್ವಕ್ಕೋ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಚಿನ್ನಸ್ವಾಮಿ ಮೈದಾನದಲ್ಲಿ ಮಕ್ಕಳಂತೆ ಈಜಾಡಿದ ಡೇವಿಡ್!
ಪ್ರಧಾನಿ ಮೋದಿಯವರು ಸೇನೆಗೆ ಎಲ್ಲಾ ಸ್ವಾತಂತ್ರ‍್ಯ ಕೊಟ್ಟಿದ್ರು. ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ಬಂದ್ ಮಾಡಿದ್ರು, ಪಾಕ್ ಉಗ್ರ ಪೋಷಕ ರಾಷ್ಟ್ರ ಅಂತ ಇಡೀ ಜಗತ್ತಿಗೆ ಹೇಳಿದ್ದಾರೆ. 9 ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ, ನೂರಾರು ಉಗ್ರರನ್ನ ನರಕಕ್ಕೆ ಕಳಿಸಿದ್ದಾರೆ. ಆ ಉಗ್ರರಿಗೆ ಜನ್ನತ್ ಸಿಗಲ್ಲ ಅಂದ್ರು. ಯುದ್ಧ ನಿಲ್ಲಿಸಿಲ್ಲ. ಇದು ತಾತ್ಕಾಲಿಕ ಅಷ್ಟೇ, ಮತ್ತೆ ಯುದ್ಧ ಶುರುವಾದ್ರೆ ಅವರ ತಲೆ, ಬಾಲ ಎರಡೂ ಕಟ್ ಆಗುತ್ತದೆ. ಭಯೋತ್ಪಾದನೆಯ ಮೂಲ ಕಿತ್ತು ಹಾಕಲು ಕಾಂಗ್ರೆಸ್(Congress) ಕೂಡಾ ನಮ್ಮ ಜೊತೆ ಕೈ ಜೋಡಿಸಲಿ ಎಂದಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳ ಅರೆಸ್ಟ್ – ಚಿನ್ನಾಭರಣ ಸೇರಿ 7.89 ಲಕ್ಷ ಮೌಲ್ಯದ ವಸ್ತು ಜಪ್ತಿ
ಭಯೋತ್ಪಾದನೆ(Terrorism) ಬೆಳೆಸುವ ಕೇಂದ್ರಗಳಿಗೆ ನೀರು ಗೊಬ್ಬರ ಹಾಕಿ ಕಾಂಗ್ರೆಸ್‌ನವರು ಪೋಷಿಸುತ್ತಿದ್ದಾರೆ. ಕಾಂಗ್ರೆಸ್‌ನವರ ಮನಸ್ಥಿತಿ ಬದಲಾಗಬೇಕು. ಭಯೋತ್ಪಾದನೆಯೆ ಡಿಎನ್‌ಎ ಕಿತ್ತು ಹಾಕಿ ಮೊದಲು. ಆ ಡಿಎನ್‌ಎ ಕರ್ನಾಟಕದಲ್ಲೂ ಇದೆ, ಜಗತ್ತಲ್ಲೂ ಇದೆ. ಮೊದಲು ಇದನ್ನ ಮಟ್ಟ ಹಾಕಬೇಕು ಎಂದು ಗುಡುಗಿದರು.
ಭಯೋತ್ಪಾದನೆ ಮೂಲಕ್ಕೆ 1400 ವರ್ಷಗಳ ಇತಿಹಾಸ ಇದೆ. ಬದಲಾದ ಸಂದರ್ಭ, ಬದಲಾದ ರೀತಿಯಲ್ಲಿ ಅದು ನಡೀತಿದೆ. ಕರ್ನಾಟಕದಲ್ಲೂ ಭಯೋತ್ಪಾದಕರ ಕೇಂದ್ರಗಳಿವೆ. ಮತದ ಹೆಸರಲ್ಲಿ ಅಲ್ಲಿ ಏನು ಕಲಿಸ್ತಿದ್ದಾರೆ? ಅದಕ್ಕೆ ಯಾರ ಪೋಷಣೆ ಇದೆ? ನಮ್ಮ ಪೋಷಣೆ ಪ್ರಶಂಸೆ ಸೇನೆಗೆ ಅಂತಾ ಕಾಂಗ್ರೆಸ್‌ನವರು ಹೇಳಿದ್ರು. ಹಾಗಾದ್ರೆ ಟೀಕೆ ಯಾರಿಗೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಆಪರೇಷನ್ ಸಿಂಧೂರ ಸಮಾಧಾನ ತಂದಿಲ್ಲ ಅಂದಿದ್ದು, ಸೇನೆ ಬಗ್ಗೆ ಹಗುರವಾಗಿ ಮಾತಾಡಿಲ್ಲ: ಮಂಜುನಾಥ್ ಸ್ಪಷ್ಟನೆ
ತಾಜ್ ಹೊಟೇಲ್ ಮೇಲೆ ದಾಳಿ ಆದಾಗ, ವಾರಣಾಸಿ ಸ್ಫೋಟ, ರೈಲು ಸ್ಫೋಟ, ಮಾಲೇಗಾಂವ್ ಸ್ಫೋಟ, ಅಹಮದಾಬಾದ್ ಬಾಂಬ್ ಸ್ಫೋಟ, ದೆಹಲಿ ಬಾಂಬ್ ಸ್ಫೋಟ, ಪುಣೆ ಬಾಂಬ್ ಸ್ಫೋಟ ಇದೆಲ್ಲ ಆದಾಗ ಕಾಂಗ್ರೆಸ್‌ನವರು ಯಾವ ಕ್ರಮ ಕೈಗೊಂಡರು. ಯಾವ ಸರ್ಜಿಕಲ್ ಸ್ಟ್ರೈಕ್ ಮಾಡಿದ್ರು? ಕಾಂಗ್ರೆಸ್‌ನವ್ರು ಸೇನೆಗೆ ಸ್ವಾತಂತ್ರ‍್ಯ ಕೊಟ್ಟಿದ್ರಾ? ಆಗೆಲ್ಲ ಭಯೋತ್ಪಾದನೆ ಬೇರು ಸಮೇತ ಕಿತ್ತು ಹಾಕಬೇಕು ಅಂತ ಅನಿಸಿಲಿಲ್ಲ. ಈಗ ಅನಿಸ್ತಿರೋದ್ರ ಹಿಂದೆ ಕಾರಣ ಏನಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಇಡೀ ದೇಶ, ಸೇನೆ, ಸೈನಿಕರು ಮೋದಿ ಪಾದಗಳಿಗೆ ನಮಸ್ಕರಿಸುತ್ತಾರೆ: ಡಿಸಿಎಂ ವಿವಾದಾತ್ಮಕ ಹೇಳಿಕೆ
ಭಯೋತ್ಪಾದನೆಯ ಮೂಲ ಡಿಎನ್‌ಎನಲ್ಲೇ ಇದೆ. ಆ ಡಿಎನ್‌ಎ ಕಿತ್ತು ಹಾಕಬೇಕು. ಇಥಿಯೋಪಿಯಾ, ಸೂಡಾನ್, ಹಮಾಸ್ ಭಯೋತ್ಪಾದನೆ, ಆಫ್ಘಾನಿಸ್ತಾನ, ಇರಾಕ್, ಇರಾನ್, ಟ್ವಿನ್ ಟವರ್ ಸ್ಫೋಟ ಇದಕ್ಕೆಲ್ಲಾ ಯಾವ ಭಯೋತ್ಪಾದನೆಯ ಡಿಎನ್‌ಎ ಕಾರಣ? ಈ ಡಿಎನ್‌ಎ ಅನ್ನು ಮತಬ್ಯಾಂಕ್‌ಗಾಗಿ ಪೋಷಿಸ್ತಿರೋರು ಯಾರು? ದೆ ಆರ್ ಮೈ ಬ್ರದರ್ಸ್ ಅಂದವರು ಯಾರು? ಬಿಜೆಪಿ ಸರ್ಜಿಕಲ್ ಸ್ಟ್ರೈಕ್ ಮಾಡಿದಾಗ ಸಾಕ್ಷಿ ಕೇಳಿದವ್ರು ಇದೇ ಕಾಂಗ್ರೆಸ್‌ನವರು. ಈಗ ಪಾಕ್ ಉಗ್ರರ ಮೇಲಿನ ದಾಳಿಗೆ ಭಾರತ ಜಾಗತಿಕ ಸಾಕ್ಷ್ಯ ಕೊಟ್ಟಿದೆ ಎಂದರು.