ನವದೆಹಲಿ: ಮುಸ್ಲಿಮರು ಶೇ. 99 ರಷ್ಟು ಪಾಕಿಸ್ತಾನದಲ್ಲಿದ್ದಾರೆ. ಅಲ್ಲಿನ ಪರಿಸ್ಥಿತಿ ಮತ್ತು ಹಣೆ ಬರಹ ಹೇಗಾಗಿದೆ? ಸಾಬ್ರು ವೋಟ್ ಹಾಕಿದ್ರೆ ಮಾತ್ರ ಅಧಿಕಾರಕ್ಕೆ ಬರುತ್ತೆ ಎಂಬ ಕಾಲವಿತ್ತು. ಆ ಕಾಲ ಹೋಗಿ ಬಹಳ ದಿನವಾಗಿದೆ ಜಮೀರ್ ಭಾಯ್ ಎಂದು ಶಾಸಕ ಜಮೀರ್ ಅಹಮದ್ ಖಾನ್‍ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟಾಂಗ್ ನೀಡಿದರು.
Advertisement
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವೋಟ್ ಬ್ಯಾಂಕ್ ತೋರಿಸಿ ಹೆದರಿಸೋ ಕಾಲ ಹೋಗಿ ಬಹಳ ಕಾಲವಾಗಿದೆ. ನಾವು ವೋಟ್ ಹಾಕಿದ್ರೆ ಮಾತ್ರ ಗೆಲ್ತಾರೆ ಎಂಬ ಬ್ಲ್ಯಾಕ್‌ಮೇಲ್ ಮಾಡ್ತಿದ್ರಲ್ಲ ಆ ಕಾಲವಿಲ್ಲ. ಈಗ ಭಾರತ ಮಾತಾ ಕೀ ಜೈ ಅಂದ್ರೆ ಮಾತ್ರ ರಾಜಕೀಯ. ಭಾರತ ಮಾತಾ ಕೀ ಜೈ ಅಂದ್ರೆ ಬದುಕು. ಅದನ್ನು ನೆನಪಿನಲ್ಲಿಟ್ಟಿಕೊಳ್ಳಿ ಜಮೀರ್ ಭಾಯ್ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಕಳ್ಳನಾಯಕಿಯ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಮೌನ ಪ್ರತಿಭಟನೆ ನಡೆಸುತ್ತಿದೆ – ಕಾಂಗ್ರೆಸ್ ಕಾಲೆಳೆದ ಬಿಜೆಪಿ
Advertisement
Advertisement
ಒಕ್ಕಲಿಗ ಸಮುದಾಯದ ವ್ಯಕ್ತಿ ಸಿಎಂ ಆಗಬೇಕು ಎಂಬ ವಿಚಾರವಾಗಿ ಮಾತನಾಡಿ, ನಾವು ಹಿಂದೂತ್ವ ಸಿದ್ಧಾಂತ ನಂಬಿದವರು. ಇಲ್ಲಿ ಎಲ್ಲ ಸಮುದಾಯದವರೂ ಬರುತ್ತಾರೆ. ಆದ್ರೆ ಕಾಂಗ್ರೆಸ್ಸಿಗರಿಗೆ ಜಾತಿ ಅನುಕೂಲಕ್ಕೆ ಮಾತ್ರ. ಜಾತ್ಯಾತೀತ ಸಿದ್ಧಾಂತ ಅಂದ್ರೆ ಜಾತಿ ರಾಜಕಾರಣ ಇರಲೇಬಾರದು. ಹಾಗಾಗಿ ಅವರದ್ದು ಸೋಗಲಾಡಿ ಸಿದ್ಧಾಂತ. ಅವರದ್ದು ನಕಲಿ ಜಾತ್ಯಾತೀತ ವಾದ. ಜಾತಿಗೆ ಯಾರೂ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ಜಾತಿಗೆ ಮುಖ್ಯಮಂತ್ರಿಯಾಗಬೇಕು ಎಂದರೇ ಒಕ್ಕಲಿಗರ ಸಂಘದ ಅಧ್ಯಕ್ಷರಾಗಲಿ. ಅಥವಾ ಇನ್ಯಾವುದೊ ಜಾತಿಗೆ ಅಧ್ಯಕ್ಷರಾಗಲಿ. ನಾವು ರಾಜ್ಯಕ್ಕೆ ಮುಖ್ಯಮಂತ್ರಿ ಬೇಕು ಎನ್ನುವವರು ವೈಯಕ್ತಿಕ ಕುಟುಂಬದ ಸಂಪತ್ತು ಹೆಚ್ಚು ಮಾಡಿಕೊಳ್ಳಬೇಕು ಎಂಬ ಸಿಎಂ ನಮಗೆ ಬೇಡ. ಸೋಗಲಾಡಿ ಜಾತ್ಯಾತೀತರು ನಮಗೆ ಬೇಡವೇ ಬೇಡ ಎಂದು ಕಿಡಿಕಾರಿದರು. ಇದನ್ನೂ ಓದಿ: ಆಂಜನೇಯ ದೇವಸ್ಥಾನದ ಗೋಡೆಗೆ ಮೂತ್ರ ವಿಸರ್ಜನೆ ಮಾಡಿದ್ದ ವ್ಯಕ್ತಿ ಅರೆಸ್ಟ್
Advertisement
ಸಿ.ಟಿ ರವಿಗೆ ಅಹಿಂದ ಗೊತ್ತಿಲ್ಲ? ಹಿಂದುತ್ವವೂ ಗೊತ್ತಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರು ತಮಗೆ ತಾವೇ ಬುದ್ಧಿವಂತರು ಅಂದು ಕೊಂಡಿದ್ದಾರೆ. ಬುದ್ಧಿವಂತಿಕೆಯಿಂದ ಮಾತನಾಡೋದು ಗೊತ್ತು. ಮೋದಿಯವರು ಹಿಂದುಳಿದ ಸಮುದಾಯದವರು ಅಲ್ವಾ? ಸಿದ್ದರಾಮಯ್ಯ ಅವರಿಗಾದ್ರೂ ದೊಡ್ಡ ಸಮುದಾಯ ಇದೆ. ಮೋದಿಯವರು ಅತಿ ಹಿಂದುಳಿದ ಸಮುದಾಯದವರು. ಹಿಂದುಳಿದ ವರ್ಗದವರ ಬಗ್ಗೆ ನಮಗೆ ಪಾಠ ಹೇಳಬೇಕಾ? ಹೆಚ್ಚು ಹಿಂದುಳಿದ ಸಚಿವರು, ಶಾಸಕರು ಇರುವ ಪಕ್ಷ ಬಿಜೆಪಿ. ಮೋದಿ ಸಂಪುಟದಲ್ಲಿ ಅತಿ ಹೆಚ್ಚು ಹಿಂದುಳಿದವರಿಗೆ, ಮಹಿಳೆಯರಿಗೆ, ದಲಿತರಿಗೆ ಅವಕಾಶಕೊಟ್ಟಿದೆ. ಹಿಂದುಳಿದ ಆಯೋಗಕ್ಕೆ ಸಂವಿಧಾನದ ಸ್ಥಾನಮಾನ ಕೊಟ್ಟಿದ್ದು ಬಿಜೆಪಿ. ಮಂಡಲ್ ಕಮಿಷನ್ ಆಯೋಗದ ವರದಿಯನ್ನು ಹೆಚ್ಚು ಅನುಷ್ಠಾನ ಮಾಡಿದ್ದು ವಾಜಪೇಯಿ ನೇತೃತ್ವದ ಸರ್ಕಾರ ಎಂದು ತಿರುಗೇಟು ನೀಡಿದರು.