ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನ ಸಹಜ ಎನ್ನುವ ರೀತಿ ಬಿಂಬಿಸುವ ಕೆಲಸ ನಡೆಯುತ್ತಿದೆ: ಸಿ.ಟಿ.ರವಿ

Public TV
1 Min Read
ct ravi

ಚಿಕ್ಕಮಗಳೂರು: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯವನ್ನ ಸಹಜ ಎಂಬ ರೀತಿಯಲ್ಲಿ ಬಿಂಬಿಸುವ ಕೆಲಸವನ್ನ ಮಾಡಿರುವುದನ್ನ ಗಮನಿಸಿದ್ದೇವೆ. ಅವರು ಇಂತಹ ಆಟವನ್ನ ನಡೆಸಿಕೊಂಡೇ ಬಂದಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಅವರಿಗೆ ಎಲ್ಲೋ ಒಂದ ಕಡೆ ಕಡಿವಾಣ ಹಾಕಬೇಕಾಗುತ್ತದೆ. ನಮ್ಮ ಪೊಲೀಸರು ಸಮರ್ಥರಿದ್ದಾರೆ. ಕಡಿವಾಣ ಹಾಕುತ್ತಾರೆ. ಇನ್ನೂ ತ್ರಿಪುರಾ ಘಟನೆಯನ್ನ ಖಂಡಿಸಿ ನಡೆಸುತ್ತಿರುವ ಪ್ರತಿಭಟನೆಗಳಲ್ಲಿ ಪ್ರತಿಭಟನಾಕಾರರು ಪ್ರಚೋದನೆ ಕೊಡುವಂತಹಾ ಹಾಗೂ ಕಾನೂನನ್ನ ಉಲ್ಲಂಘಿಸುವ ಕೆಲಸವನ್ನ ಮಾಡುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: 5-6 ದಿನ ಪುನೀತ್ ಸಮಾಧಿ ಬಳಿ ಯಾರನ್ನೂ ಬಿಡಲ್ಲ: ಅರಗ ಜ್ಞಾನೇಂದ್ರ

ct ravi

ನಾವು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಈಗಾಗಲೇ ಗೃಹ ಸಚಿವರು ಹೇಳಿದ್ದಾರೆ. ಅಂತಹಾ ಕೆಲಸವನ್ನ ಯಾರೇ ಮಾಡಿದ್ದರು ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆಂದು ಭರವಸೆ ನೀಡಿದ್ದಾರೆ. ನಾವು ಅದರ ನಿರೀಕ್ಷೆಯಲ್ಲೇ ಇದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗೌಪ್ಯವಾಗಿ ಬೂಸ್ಟರ್ ಡೋಸ್  ಪಡೆಯುತ್ತಿರುವ ಆರೋಗ್ಯ ಸಿಬ್ಬಂದಿ

ct ravi

ಉಪಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ಈಗ ಇರುವ ಮಾಹಿತಿ ಪ್ರಕಾರ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪರವಾದ ಒಲವು ಹೆಚ್ಚಿತ್ತು. ಪೋಲಿಂಗ್ ಪಸರ್ಂಟೇಜ್ ಗಮನಿಸಿದಾಗ ಬಿಜೆಪಿ ಒಳ್ಳೆಯ ಮೆಜಾರಿಟಿಯಲ್ಲಿ ಗೆಲ್ಲಬಹುದು ಎಂಬುದು ನನ್ನ ಭಾವನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *