ಬೆಂಗಳೂರು: ಸಿಟಿ ರವಿ ಪ್ರಕರಣದಲ್ಲಿ (CT Ravi) ಪ್ರತಿಷ್ಠೆಗೆ ಬಿದ್ದು ಏನೋ ಮಾಡಲು ಹೋಗಿ ಏನೋ ಮಾಡಿ ರಾಜ್ಯ ಸರ್ಕಾರ (Karnataka Government) ಯಡವಟ್ಟು ಮಾಡಿಕೊಂಡಿತಾ ಎಂಬ ಪ್ರಶ್ನೆ ಈಗ ಎದ್ದಿದೆ.
ಹೌದು. ಸದನದಲ್ಲಿ ಆದ ವಿಚಾರವನ್ನು ಹೊರಗೆ ತಂದು ಸಿಟಿ ರವಿ ಬಂಧನ ಮಾಡಿದ ನಂತರದ ಬೆಳವಣಿಗೆ, ಪೋಲೀಸರ (Police) ವರ್ತನೆಯಿಂದ ಸರ್ಕಾರಕ್ಕೆ ಡ್ಯಾಮೇಜ್ ಆಗಿದೆ.
Advertisement
ಏನೇನು ಯಡವಟ್ಟಾಗಿದೆ?
ಅಧಿವೇಶನ ನಡೆಯುತ್ತಿರುವಾವಾಗಲೇ ಜನಪ್ರತಿನಿಧಿ ಬಂಧಿಸಿದ್ದು ಈಗ ಸಾಕಷ್ಟು ಚರ್ಚೆ ಆಗುತ್ತಿದೆ. ಕರ್ನಾಟಕ ವಿಧಾನಸಭೆ ಕಾರ್ಯವಿಧಾನ ಮತ್ತು ಕಲಾಪ ನಿಯಮಾವಳಿಯ ಅನ್ವಯ ಸಭಾಧ್ಯಕ್ಷರ ಅನುಮತಿ ಇಲ್ಲದೇ ಬಂಧನ ಮಾಡುವಂತಿಲ್ಲ. ಆದರೆ ಈ ಪ್ರಕರಣದಲ್ಲಿ ಸ್ಪೀಕರ್ ಅವರ ಅನುಮತಿ ಪಡೆಯದೇ ಬಂಧಿಸಲಾಗಿದೆ.
Advertisement
Advertisement
ಬಿಎನ್‌ಎಸ್ ಕಾಯ್ದೆಯ ಸೆಕ್ಷನ್ 75 ಕ್ಕೆ 3 ವರ್ಷ ಸಜೆ ಇದೆ. 79 ಕ್ಕೆ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಆದರೆ 7 ವರ್ಷಗಳ ಒಳಗಿನ ಶಿಕ್ಷೆಗೆ ನೋಟಿಸ್ ನೀಡಬೇಕು. ಆದರೆ ನೋಟಿಸ್ ನೀಡದೇ ಅರೆಸ್ಟ್ ಮಾಡಲಾಗಿದೆ. ಸಿಟಿ ರವಿಗೆ ಜಾಮೀನು ನೀಡಿದ ಆದೇಶದಲ್ಲಿ ಹೈಕೋರ್ಟ್ ಈ ವಿಚಾರವನ್ನು ಉಲ್ಲೇಖಿಸಿದೆ.
Advertisement
ಸಿಟಿ ರವಿ ಬಂಧನ ಬಳಿಕ ಪೊಲೀಸರ ವರ್ತನೆಯ ಬಗ್ಗೆ ಭಾರೀ ಅನುಮಾನ ವ್ಯಕ್ತವಾಗುತ್ತಿದೆ. ಯಾವ ಠಾಣೆಯ ಪೊಲೀಸರು (Police) ಬಂಧನ ಮಾಡಿದ್ದಾರೋ ಠಾಣೆಯಲ್ಲೇ ಆರೋಪಿಯನ್ನು ಇಟ್ಟುಕೊಳ್ಳಬೇಕು. ಒಂದು ವೇಳೆ ಕಾನೂನು ಸುವ್ಯವಸ್ಥೆಗೆ ಅಡ್ಡಿಯಾದರೆ ಭದ್ರತೆ ಪೊಲೀಸರನ್ನು ಕರೆಸಿಕೊಳ್ಳಬೇಕು ಅಥವಾ ಭದ್ರತೆ ಹೆಚ್ಚು ಇರುವ ಜಾಗದಲ್ಲಿ ಆರೋಪಿಯನ್ನು ಇಟ್ಟುಕೊಳ್ಳೇಬಕು. ಆದರೆ ಪೊಲೀಸರು ಠಾಣೆಯಲ್ಲಿ ಇರಿಸದೇ ರಾತ್ರಿಯಿಡಿ ಬೆಳಗಾವಿಯನ್ನು ಸುತ್ತಿಸಿದ್ದು ಯಾಕೆ ಎನ್ನುವುದೇ ದೊಡ್ಡ ಪ್ರಶ್ನೆ. ಕಾನೂನಿನ ಪ್ರಕಾರ ಏನು ನಿಯಮ ಪಾಲನೆ ಮಾಡಬೇಕೋ ಆ ನಿಯಮವನ್ನು ಪೊಲೀಸರು ಮಾಡಬೇಕಿತ್ತು. ಆದರೆ ಇಲ್ಲಿ ಪೊಲೀಸರು ಯಾರದ್ದೋ ಅದೇಶವನ್ನು ಪಾಲನೆ ಮಾಡಲು ರಾತ್ರಿಯಿಡಿ ಸುತ್ತಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಸದನದಲ್ಲಿ ಪ್ರಸ್ತಾಪವಾದ ವಿಚಾರಗಳನ್ನ ಹೊರಗೆ ತರಲು ಅವಕಾಶವಿಲ್ಲ. ಒಂದು ವೇಳೆ ಈ ಪ್ರಕರಣಕ್ಕೆ ಅವಕಾಶ ನೀಡಿದರೆ ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ಜನಪ್ರತಿನಿಧಿಗಳ ಮೇಲೆ ಹಲವು ಕೇಸ್ ದಾಖಲಿಸಲು ಅವಕಾಶ ನೀಡಿದಂತಾಗುತ್ತದೆ. ಸಿಟಿ ರವಿ ಪರ ವಕೀಲರು ಈ ವಿಚಾರವನ್ನು ಕೋರ್ಟ್ ಗಮನಕ್ಕೆ ತಂದಿದ್ದರು. ಈ ವಿಷಯಗಳು ರಾಜ್ಯ ಸರ್ಕಾರಕ್ಕೆ, ಕಾನೂನು ಪಂಡಿತರಿಗೆ, ಪೊಲೀಸರಿಗೆ ತಿಳಿದಿದ್ದರೂ ಸಿಟಿ ರವಿಯನ್ನು ಬಂಧಿಸಿದ್ದು ಹೇಗೆ ಎನ್ನುವುದೇ ಈಗ ದೊಡ್ಡ ಪ್ರಶ್ನೆ.
ಹೈಕೋರ್ಟ್ ಆದೇಶದಲ್ಲಿ ಏನಿದೆ?
ತಮ್ಮ ವಿರುದ್ಧದ ಎಫ್‌ಐಆರ್ ರದ್ದು ಕೋರಿ ಸಿಟಿ ರವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿ ಉಮಾ ಅವರಿದ್ದ ನ್ಯಾಯಪೀಠ ಮಧ್ಯಂತರ ರಿಲೀಫ್ ನೀಡಿತ್ತು. ಸಿಟಿ ರವಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿ. ತಕ್ಷಣ ರಿಲೀಸ್‌ಗೆ ಸೂಚಿಸಿತು. ಹೈಕೋರ್ಟ್ ಆದೇಶ ಬೆನ್ನಲ್ಲೇ, ಸಿಟಿ ರವಿಯನ್ನು ಬೆಂಗಳೂರಿಗೆ ಕರೆತರ್ತಿದ್ದ ಪೊಲೀಸರು, ದಾವಣಗೆರೆ ಬಳಿ ಮಾರ್ಗಮಧ್ಯೆಯೇ ರಿಲೀಸ್ ಮಾಡಿದ್ದರು. ಸಿಟಿ ರವಿ ಪ್ರಕರಣದಲ್ಲಿ ಪೊಲೀಸರು ಸರಿಯಾಗಿ ಕಾನೂನು ಪ್ರಕ್ರಿಯೆ ಮಾಡಿಲ್ಲ ಎಂದು ನ್ಯಾಯಾಧೀಶರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಹೈಕೋರ್ಟ್ ಆದೇಶದಲ್ಲಿ ಏನಿದೆ?
ರಾಜ್ಯದ ಜನತೆಯ ಹಿತದೃಷ್ಟಿಯಿಂದ ಆರೋಪಿತ ಘಟನೆ ಅತ್ಯಂತ ದುರದೃಷ್ಟಕರ. ಸಿಆರ್‌ಪಿಸಿ ಸೆಕ್ಷನ್ 41ಎ ಅನ್ವಯ ಪೊಲೀಸರು ಪ್ರಕ್ರಿಯೆ ಪಾಲನೆ ಮಾಡಬೇಕಿತ್ತು. ಸಿಟಿ ರವಿ ಅವರು ಪರಿಷತ್ ಸದಸ್ಯರಾಗಿದ್ದು, ಎಲ್ಲಿಯೂ ಪರಾರಿಯಾಗುವ ಸಂಭವ ಇಲ್ಲ.
ಸಿಟಿ ರವಿ ತನಿಖೆಗೆ ಲಭ್ಯ ಆಗುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಆಗಲ್ಲ. ಬೆಳಗಾವಿ ಕನ್ನಡಸೌಧದಲ್ಲಿ ನಡೆದ ಘಟನೆಗಳ ಬಗ್ಗೆ ಸಭಾಪತಿ ಏನನ್ನು ಉಲ್ಲೇಖಿಸಿಲ್ಲ. ತಕ್ಷಣ ಬಿಡುಗಡೆ ಸಂಬಂಧಿಸಿದಂತೆ ಮಧ್ಯಂತರ ಕೋರಿಕೆಗೆ ಸಿಟಿ ರವಿ ಅರ್ಹರಾಗಿದ್ದಾರೆ. ಹೀಗಾಗಿ ಸಿಟಿ ರವಿ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು.