ಅಬುಧಾಬಿ: ಕೆಕೆಆರ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 2 ವಿಕೆಟ್‍ಗಳ ರೋಚಕ ಜಯ ದಾಖಲಿಸುವ ಮೂಲಕ 16 ಅಂಕಗಳೊಂದಿಗೆ ಪ್ಲೇ ಆಫ್‍ಗೆ ಬಹುತೇಕ ಲಗ್ಗೆ ಇಟ್ಟಿದೆ. ರವೀಂದ್ರ ಜಡೇಜಾರ ಅಮೋಘ ಬ್ಯಾಟಿಂಗ್ ನೆರವಿನಿಂದ ಕೆಕೆಆರ್ ನೀಡಿದ್ದ 172 ರನ್‍ಗಳ ಗುರಿ ಬೆನ್ನತ್ತಿ ಕೊನೆಯ ಬಾಲ್‍ನಲ್ಲಿ ಜಯ ತನ್ನದಾಗಿಸಿಕೊಂಡಿತು.
Advertisement
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ, ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಕೆಕೆಆರ್ ತಂಡಕ್ಕೆ ಆರಂಭದಲ್ಲೆ ಗಿಲ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ರಾಹುಲ್ ತ್ರಿಪಾಠಿ ಹಾಗೂ ವೆಂಕಟೇಶ್ ಐಯ್ಯರ್ ಉತ್ತಮ ಜೊತೆಯಾಟ ಆಡಿದರು. 2ನೇ ವಿಕೆಟ್‍ಗೆ ಈ ಜೋಡಿ 40ರನ್‍ಗಳ ಜೊತೆಯಾಟವಾಡಿತು. ಇದನ್ನೂ ಓದಿ: ಸಂಜು ಸ್ಯಾಮ್ಸನ್‍ಗೆ 24 ಲಕ್ಷ ದಂಡ – ಆಟಗಾರರಿಗೂ ಭಾರೀ ಫೈನ್
Advertisement
ಕೆಕೆಆರ್ ಪರ ತ್ರಿಪಾಠಿ 45ರನ್ (33 ಎಸೆತ 4 ಬೌಂಡರಿ 1 ಸಿಕ್ಸರ್)ಗಳಿಸಿದರೆ ನಿತೀಶ್ ರಾಣಾ 37ರನ್ (27 ಎಸೆತ 3 ಬೌಂಡರಿ 1 ಸಿಕ್ಸರ್) ಹೊಡೆದರು. ಇಬ್ಬರ ವಿಕೆಟ್ ಪತನದ ನಂತರ ಬಿರುಸಿನ ಆಟವಾಡಿದ ರಸೆಲ್ ಹಾಗೂ ದಿನೇಶ್ ಕಾರ್ತಿಕ್ ಸಿಎಸ್‍ಕೆ ಬೌಲರ್‍ಗಳನ್ನು ಬೆಂಡೆತ್ತಿದ್ದರು. ರಸೆಲ್ 20ರನ್ (15 ಎಸೆತ 2 ಬೌಂಡರಿ 1 ಸಿಕ್ಸರ್) ಗಳಿಸಿದರೆ ಕಾರ್ತಿಕ್ 26 ರನ್ (11 ಎಸೆತ 3 ಬೌಂಡರಿ 1 ಸಿಕ್ಸರ್) ಚಚ್ಚಿದರು. ಸಿಎಸ್‍ಕೆ ಪರ ಹೆಜೆಲ್‍ವುಡ್ ಹಾಗೂ ಠಾಕೂರ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.ಇದನ್ನೂ ಓದಿ: ಧೋನಿ ಗೂಗ್ಲಿಗೆ ಕ್ಲೀನ್ ಬೌಲ್ಡ್ ಆದ ಜಡೇಜಾ
Advertisement
ಕೆಕೆಆರ್ ಟಾರ್ಗೆಟ್ ಬೆನ್ನತ್ತಿದ ಸಿಎಸ್‍ಕೆಗೆ ಡು ಫ್ಲೆಸಿಸ್ ಹಾಗೂ ಗಾಯಕ್ವಾಡ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‍ಗೆ ಈ ಜೋಡಿ 8.2 ಓವರ್‍ಗಳಲ್ಲಿ 74 ರನ್‍ಗಳನ್ನು ಕಲೆ ಹಾಕಿತು. ಉತ್ತಮವಾಗಿ ಆಡುತ್ತಿದ್ದ ಗಾಯಕ್ವಾಡ್ 40ರನ್ (28 ಎಸೆತ 2 ಬೌಂಡರಿ 3 ಸಿಕ್ಸರ್) ಸಿಡಿಸಿ ರಸೆಲ್‍ಗೆ ವಿಕೆಟ್ ಒಪ್ಪಿಸಿದರು. ಬಳಿಕ 43 ರನ್ (30 ಎಸೆತ 7 ಬೌಂಡರಿ) ಗಳಿಸಿ ಫಾಫ್ ಡು ಪ್ಲೆಸಿಸ್ ಪ್ರಸಿದ್ಧಕೃಷ್ಣಗೆ ವಿಕೆಟ್ ಕೊಟ್ಟು ಹೊರ ನಡೆದರು. ನಂತರ ಜೊತೆಯದ ಮೊಯಿನ್ ಅಲಿ ಹಾಗೂ ರಾಯುಡು ಉತ್ತಮ ಆಟವಾಡುವ ಲಕ್ಷಣ ತೋರಿಸಿದರು, ರಾಯುಡು ಕೇವಲ 10 ರನ್ ಗಳಿಸಿ ನರೈನ್‍ಗೆ ವಿಕೆಟ್ ಒಪ್ಪಿಸಿದರು.
Advertisement
ನಂತರ ಧೋನಿ ಹಾಗೂ ಸುರೇಶ್ ರೈನಾ ಗೆಲುವಿನ ದಡ ಸೇರಿಸಲು ವಿಫಲವಾದರು. ಇನ್ನೆನು ಚೆನ್ನೈ ಪಂದ್ಯವನ್ನು ಕೈಚೆಲ್ಲಿತ್ತು ಎನ್ನುವಾಗ ಜಡೇಜಾ ಪ್ರಸಿದ್ಧ ಕೃಷ್ಣ ಎಸೆದ 19ನೇ ಓವರ್‍ನಲ್ಲಿ 22 ರನ್ ಕೆಲೆಹಾಕಿ ಜಯದ ಹೊಸ್ತಿಲಲ್ಲಿ ನಿಲ್ಲಿಸಿದರು. ಈ ಓವರಿನಲ್ಲಿ ಮೊದಲ ಎರಡು ಎಸೆತದಲ್ಲಿ ಸಿಂಗಲ್ ರನ್ ಬಂದರೆ ನಂತರ ಎರಡು ಎಸೆತದಲ್ಲಿ ಸಿಕ್ಸರ್, ಕೊನೆತ ಎರಡು ಎಸೆತದಲ್ಲಿ ಜಡೇಜಾ ಬೌಂಡರಿ ಸಿಡಿಸಿದರು.
ಕೊನೆಯ ಓವರ್‍ನಲ್ಲಿ ಗೆಲ್ಲಲು 4 ರನ್‍ಗಳ ಬೇಕಾಗಿತ್ತು. ನರೈನ್ ಎಸೆದ ಮೊದಲ ಎಸೆತದಲ್ಲೆ ಸ್ಯಾಮ್ ಕರ್ರ್‍ನ್ ವಿಕೆಟ್ ಒಪ್ಪಿಸಿದರು. ಎರಡನೇ ಎಸೆತವನ್ನು ಠಾಕೂರ್ ಡಾಟ್ ಮಾಡಿದರೇ ಮೂರನೇ ಎಸೆತದಲ್ಲಿ 3 ರನ್ ಗಳಿಸಿದರು 4 ನೇ ಡಾಟ್ ಆಯಿತು. 5ನೇ ಎಸೆತದಲ್ಲಿ ಜಡೇಜಾ ನರೈನ್‍ಗೆ ಎಲ್‍ಬಿ ಬಲೆಗೆ ಬಿದ್ದರು. ಕೊನೆಯ ಎಸೆದಲ್ಲಿ ಗೆಲ್ಲಲು ಒಂದು ರನ್ ಬೇಕಿತ್ತು. ದೀಪಕ್ ಚಹಾರ್ ರನ್ ಹೊಡೆಯುವ ಮೂಲಕ ಚೆನ್ನೈ ರೋಚಕ ಗೆಲುವು ಸಾಧಿಸಿತು. ಚೆನ್ನೈ ಪರ ಜಡೇಜಾ 22ರನ್ ( 8 ಎಸೆತ, 2 ಬೌಂಡರಿ 2 ಸಿಕ್ಸರ್ ) ಸಿಡಿಸಿ ಮಿಂಚಿದರು.