ನವದೆಹಲಿ: ಶನಿವಾರ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡಗಳ ನಡುವಿನ ಪಂದ್ಯ ರೋಚಕತೆಯಿಂದ ಕೂಡಿತ್ತು. ಕ್ರೀಡಾಂಗಣದ ತುಂಬಾ ಸಿಎಸ್‌ಕೆ ಅಭಿಮಾನಿಗಳೇ (CSK Fans) ಹೆಚ್ಚಿನ ಸಂಖ್ಯೆಯಲ್ಲಿದ್ದರು. ಶಿಳ್ಳೆ, ಚಪ್ಪಾಳೆ ಮಳೆಗರೆಯುತ್ತಾ ಆಟಗಾರರನ್ನ ಹುರಿದುಂಬಿಸಿದರು.
- Advertisement -
ಕೊನೆಯ ಲೀಗ್ ಪಂದ್ಯವನ್ನಾಡಿದ ಚೆನ್ನೈ ಸೂಪರ್ ಕಿಂಗ್ಸ್ ರನ್ ಹೊಳೆಯಲ್ಲಿ ತೇಲಾಡಿತು. ಕೊನೆಯವೆರೆಗೂ ಸಿಕ್ಸರ್, ಬೌಂಡರಿ ಅಬ್ಬರಿಸುತ್ತಾ ಅಭಿಮಾನಿಗಳ ಕಣ್ಣಿಗೆ ಹಬ್ಬವನ್ನುಂಟುಮಾಡಿತು. ಈ ವೇಳೆ ಸಿಎಸ್‌ಕೆ ಅಭಿಮಾನಿಗಳು ವಿಶೇಷ ಪೋಸ್ಟರ್‌ಗಳನ್ನು ಹಿಡಿದು ಗಮನ ಸೆಳೆದರು. ಇದನ್ನೂ ಓದಿ: ಧೋನಿ ಕ್ಯಾಪ್ಟನ್ ಆಗಿದ್ದಿದ್ದರೆ RCB ಮೂರು ಬಾರಿ ಕಪ್ ಗೆಲ್ಲುತ್ತಿತ್ತು ಎಂದ ಪಾಕ್ ಮಾಜಿ ಕ್ರಿಕೆಟಿಗ
- Advertisement -
- Advertisement -
ಅಭಿಮಾನಿಯೊಬ್ಬರು ʻಮಹಿ (MS Dhoni) ನೋಡಲು 2,185 ಕಿಮೀ ಟ್ರಾವೆಲ್ ಮಾಡಿ ಬಂದಿದ್ದೇನೆʼ ಎಂದು ಹಿಡಿದುಕೊಂಡಿದ್ದರೆ, ಮತ್ತೊಬ್ಬಳು ಯುವತಿ ʻಮಹಿ ನೋಡೋದಕ್ಕಾಗಿ ನನ್ನ ಟ್ರಿಪ್ ಮಿಸ್ ಮಾಡಿಕೊಂಡೆʼ ಅಂತಾ ಪೋಸ್ಟರ್ ಹಿಡಿದುಕೊಂಡಿದ್ದು ಕ್ಯಾಮೆರಾದಲ್ಲಿ ಸೆರೆಯಾಯಿತು. ಇಷ್ಟು ದಿನ 6 ಅಥವಾ 7ನೇ ವಿಕೆಟ್‌ಗೆ ಕ್ರೀಸ್‌ಗೆ ಬರುತ್ತಿದ್ದ ಮಹಿ, ಶನಿವಾರ ಅಭಿಮಾನಿಗಳಿಗೆ ನಿರಾಸೆಯುಂಟಾಗದಿರಲೆಂದು 4ನೇ ವಿಕೆಟ್‌ಗೆ ಕಣಕ್ಕಿಳಿದಿದ್ದರು. ಆದ್ರೆ ಸಿಕ್ಸರ್, ಬೌಂಡರಿ ಸಿಡಿಸದೇ ಒಂದು, 2 ರನ್ ಕದಿಯುವಷ್ಟರಲ್ಲೇ ಯಶಸ್ವಿಯಾದರು.
- Advertisement -
ಈ ಹಿಂದೆ ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಗೋವಾ ಮೂಲದ ಧೋನಿ ಅಭಿಮಾನಿಯೊಬ್ಬ, ತನ್ನ ಬೈಕ್ ಮಾರಿ ಐಪಿಎಲ್ ಟಿಕೆಟ್ ಖರೀದಿಸಿದ್ದ. ಮತ್ತೊಬ್ಬ ಅಭಿಮಾನಿ 1,700 ಕಿಮೀ ನಿಂದ ಟ್ರಾವೆಲ್ ಮಾಡಿ ಬಂದಿರುವುದಾಗಿ ಹೇಳಿಕೊಂಡಿದ್ದ. ಪೋಸ್ಟರ್ ವೈರಲ್ ಆಗುತ್ತಿದ್ದಂತೆ ಸಿಎಸ್‌ಕೆ ಅಭಿಮಾನಿಗಳು ನೀನು ಪಕ್ಕಾ ಫ್ಯಾನ್ ಬಿಡು ಗುರು ಅಂತಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಧೋನಿ ನೋಡಲು ಬೈಕ್ ಮಾರಿ IPL ಟಿಕೆಟ್ ಖರೀದಿಸಿದ ಅಭಿಮಾನಿ
2023ರ 16ನೇ ಐಪಿಎಲ್ ಆವೃತ್ತಿ ಮಹೇಂದ್ರ ಸಿಂಗ್ ಧೋನಿ ಅವರ ಕೊನೆಯ ಐಪಿಎಲ್ ಆಗಿದೆ. ಆದ್ದರಿಂದ ಪ್ರತಿ ಪಂದ್ಯದಲ್ಲೂ ಧೋನಿ ಆಟವನ್ನ ನೋಡಲು ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ.
ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ 3 ವಿಕೆಟ್ ನಷ್ಟಕ್ಕೆ 223 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿ ಸೋಲೊಪ್ಪಿಕೊಂಡಿತು.