ಮಾಸ್ಕೋ: ನಮ್ಮ ಕಚ್ಚಾ ತೈಲ ಆಮದಿಗೆ ನಿಷೇಧ ಹೇರಿದರೆ 1 ಬ್ಯಾರೆಲ್ ತೈಲದ ಬೆಲೆ 300 ಡಾಲರ್(ಅಂದಾಜು 23 ಸಾವಿರ ರೂ.)ಗೆ ಏರಿಕೆಯಾಗಬಹುದು ಎಂದು ರಷ್ಯಾ ವಿಶ್ವಕ್ಕೆ ಎಚ್ಚರಿಕೆ ನೀಡಿದೆ.
ಪಾಶ್ಚಿಮಾತ್ಯ ದೇಶಗಳಿಂದ ರಷ್ಯಾದ ಪೆಟ್ರೋಲಿಯಂ ಉತ್ಪನ್ನಗಳ ಆಮದುಗಳ ಮೇಲಿನ ನಿಷೇಧವು ಜಾಗತಿಕ ಆರ್ಥಿಕತೆಗೆ ಕೆಟ್ಟ ಪರಿಣಾಮಗಳನ್ನು ಉಂಟುಮಾಡುತ್ತದೆ. ಇದರಿಂದ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‍ಗೆ ಡಾಲರ್ 300ಗೆ ಏರಬಹುದು ಎಂದು ರಷ್ಯಾದ ಉಪ ಪ್ರಧಾನಿ ಅಲೆಕ್ಸಾಂಡರ್ ನೊವಾಕ್ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಮೋದಿ ಸ್ಟ್ರಾಂಗ್: ಸೇನಾಬಲ ಬಳಸಿ ಪಾಕ್‍ಗೆ ತಿರುಗೇಟು ನೀಡುವ ಸಾಧ್ಯತೆ!
Advertisement
Advertisement
ರಷ್ಯಾದ ತೈಲ ಆಮದಿಗೆ ಅಮೆರಿಕ ನಿರ್ಬಂಧ ಹೇರಿದೆ. ಈ ಹಿನ್ನೆಲೆ ಸಿಟ್ಟಾಗಿರುವ ರಷ್ಯಾ, ಈ ನಿರ್ಧಾರ ವಿಶ್ವ ಮಾರುಕಟ್ಟೆಗೆ ದುರಂತ ಪರಿಣಾಮಗಳಿಗೆ ಕಾರಣವಾಗುತ್ತದೆ. ಈಗಾಗಲೇ ಮಾರುಕಟ್ಟೆಯಲ್ಲಿ ಬ್ಯಾರೆಲ್‍ಗೆ 130 ಡಾಲರ್(ಅಂದಾಜು 10 ಸಾವಿರ ರೂ.) ದಾಟಿದೆ. ಒಂದು ವೇಳೆ ರಷ್ಯಾ ಕಚ್ಚಾ ತೈಲದ ಮೇಲೆ ನಿಷೇಧ ಹೇರಿದರೆ ಕಚ್ಚಾ ತೈಲದ ಬೆಲೆ ಊಹೆಗೂ ಮೀರಿ ಏರಿಕೆಯಾಗುತ್ತೆ ಎಂದು ಖಡಕ್ ಎಚ್ಚರಿಕೆಯನ್ನು ರಷ್ಯಾ ಕೊಟ್ಟಿದೆ.
Advertisement
Advertisement
ಯುರೋಪಿಯನ್ ಮಾರುಕಟ್ಟೆಯಲ್ಲಿ ರಷ್ಯಾದ ತೈಲದ ಪ್ರಮಾಣವನ್ನು ತ್ವರಿತವಾಗಿ ಬದಲಾಯಿಸುವುದು ಅಸಾಧ್ಯ. ಇದು ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಯುರೋಪಿಯನ್‍ಗೆ ಹೆಚ್ಚು ದುಬಾರಿಯಾಗುತ್ತೆ ಎಂದು ನೊವಾಕ್ ತಿಳಿಸಿದ್ದಾರೆ. ಇದನ್ನೂ ಓದಿ: ಕಚ್ಚಾ ತೈಲ ಬೆಲೆ ಏರಿಕೆ ಬೆನ್ನಲ್ಲೇ ಭಾರತಕ್ಕೆ ರಷ್ಯಾದಿಂದ ಭಾರೀ ಆಫರ್