ಶ್ರೀನಗರ: ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದೆ. ಈ ನಡುವೆ ಸಿಆರ್‌ಪಿಎಫ್ ಯೋಧರೊಬ್ಬರು ಕರ್ತವ್ಯ ಸಲ್ಲಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ಫೋಟೋ ನೋಡಿದವರು ಆ ಚಳಿಯಲ್ಲೂ ಎದೆಗುಂದದೆ ಕರ್ತವ್ಯ ಸಲ್ಲಿಸುತ್ತಿರುವ ಯೋಧನಿಗೆ ಸಲಾಂ ಎಂದಿದ್ದಾರೆ.
No, this is not Batman. He's Constable Aijaz of CRPF performing his duty in Union Territory of J&K despite massive snowfall. Policing is a 24/7 service. CRPF means business. CRPF stands for professionalism. #Kashmir pic.twitter.com/UvuUoLsHE4
— Kashyap Kadagattur ???????? (@iamkash_kr) November 8, 2019
Advertisement
ಸಿಆರ್‌ಪಿಎಫ್ ಸಹಾಯಕ ಕಮಾಂಡೆಂಟ್ ಕಶ್ಯಪ್ ಕಡಗತ್ತೂರ್ ಅವರು ಈ ಫೋಟೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದರು. ಫೋಟೋದಲ್ಲಿ ಸಿಆರ್‌ಪಿಎಫ್ ಕಾನ್‍ಸ್ಟೇಬಲ್ ಐಜಾಝ್ ಅವರು ತಮ್ಮ ಸೇನೆಯ ಸಮವಸ್ತ್ರದ ಮೇಲೆ ಹಳದಿ ಬಣ್ಣ ಕೋಟ್ ಹಾಕಿ ನಿಂತಿದ್ದಾರೆ. ಅವರ ಸುತ್ತ ಭಾರೀ ಪ್ರಮಾಣದಲ್ಲಿ ಹಿಮ ಬಿದ್ದಿರುವುದನ್ನು ಕೂಡ ಫೋಟೋದಲ್ಲಿ ಕಾಣಬಹುದಾಗಿದೆ.
Advertisement
Salute! Hope to spend time with our braves in the valley. Hopefully soon. Stay warm! stay safe.
— GAURAV C SAWANT (@gauravcsawant) November 9, 2019
Advertisement
ಇವರು ಬ್ಯಾಟ್‍ಮ್ಯಾನ್ ಅಲ್ಲ. ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಆರ್‌ಪಿಎಫ್ ಕಾನ್‍ಸ್ಟೇಬಲ್ ಐಜಾಝ್. ಭಾರೀ ಪ್ರಮಾಣದಲ್ಲಿ ಹಿಮಪಾತವಾಗುತ್ತಿದ್ದರೂ ಧೈರ್ಯದಿಂದ ಕರ್ತವ್ಯ ಸಲ್ಲಿಸುತ್ತಿರುವ ಯೋಧ. ವೃತ್ತಿಪರತೆಗೆ ಮತ್ತೊಂದು ಹೆಸರೇ ಸಿಆರ್‌ಪಿಎಫ್ ಎಂದು ಬರೆದು ಹೆಮ್ಮೆಯಿಂದ ಯೋಧನ ಫೋಟೋವನ್ನು ಕಶ್ಯಪ್ ಕಡಗತ್ತೂರ್ ಶೇರ್ ಮಾಡಿಕೊಂಡಿದ್ದಾರೆ.
Advertisement
More than Batman for me , I don't know if Batman exist but Mr Ajiaz do.
crpf works in much harder environments with strict discipline without any complaints.
— €/-@#$ /3$@ (@shail016) November 9, 2019
ಈ ಫೋಟೋ ಸದ್ಯ ಎಲ್ಲೆಡೆ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಯೋಧನ ಕಾರ್ಯಕ್ಕೆ ಸಲಾಂ ಎಂದಿದ್ದಾರೆ. ಕೆಲವರು ಬ್ಯಾಟ್‍ಮ್ಯಾನ್ ಇದ್ದಾನೋ ಇಲ್ಲವೋ ಗೊತ್ತಿಲ್ಲ. ಆದರೆ ನಮಗೆ ನಮ್ಮ ಯೋಧರೆ ಸೂಪರ್‍ಹೀರೋ. ಕಷ್ಟಕರ ಪ್ರದೇಶದಲ್ಲಿ ಶಿಸ್ತಿನಿಂದ ನಮ್ಮ ಸಿಆರ್‌ಪಿಎಫ್ ಯೋಧರು ಕರ್ತವ್ಯ ಸಲ್ಲಿಸುತ್ತಿದ್ದಾರೆ. ಅವರಿಗೊಂದು ಸಲಾಂ ಎಂದು ಟ್ವೀಟ್ ಮಾಡಿ ಯೋಧರಿಗೆ ಗೌರವ ಸಲ್ಲಿಸಿದ್ದಾರೆ.
Salute is merely a small word to the sacrifices of our CRPF and Army Jawans.
More power to you all for keeping us safe.
????????????
— Pranavsinh (@Pranavsinh9) November 8, 2019