ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಕೇಂದ್ರೀಯ ಮೀಸಲು ಪಡೆಯ ಯೋಧರೊಬ್ಬರು ಇಲ್ಲಿನ ಸ್ಥಳೀಯ ಗರ್ಭಿಣಿಗೆ ರಕ್ತದಾನ ಮಾಡಿ ತಾಯಿಯೊಂದಿಗೆ ಮಗುವಿನ ಜೀವವನ್ನೂ ಉಳಿಸಿ ಎಲ್ಲರ ಮನ ಗೆದ್ದಿದ್ದಾರೆ.
25 ವರ್ಷದ ಮಹಿಳೆಯೊಬ್ಬರಿಗೆ ಡೆಲಿವರಿ ಸಮಯದಲ್ಲಿ ಸಮಸ್ಯೆಯಾಗಿ, ಅವರ ದೇಹದಲ್ಲಿ ರಕ್ತದ ಕೊರತೆ ಉಂಟಾಗಿತ್ತು. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ 53ನೇ ಬೆಟಾಲಿಯನ್‍ನ ಸಿಆರ್‌ಪಿಎಫ್ ಯೋಧ ಗೋಯಲ್ ಶೈಲೇಶ್ ಅವರು ಮಹಿಳೆಗೆ ರಕ್ತ ನೀಡಿ, ತಾಯಿ ಮತ್ತು ಮಗುವಿನ ಪ್ರಾಣವನ್ನು ಉಳಿಸಿದ್ದಾರೆ.
Advertisement
Advertisement
ಡೆಲಿವರಿ ಸಮಯದಲ್ಲಿ ಮಹಿಳೆಯ ದೇಹದಲ್ಲಿ ರಕ್ತದ ಅಭಾವ ಉಂಟಾದಾಗ ಗುಲ್‍ಶಾನ್ ನಿವಾಸಿಗಳಾದ ಆಕೆಯ ಕುಟುಂಬಸ್ಥರು ‘ಮದಾದ್ಗರ್’ ಮೂಲಕ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಸಂಪರ್ಕಿಸಿದ್ದಾರೆ. ‘ಮದಾದ್ಗರ್’ ಕಾಶ್ಮೀರದ ಜನತೆಗೆ ವೈದ್ಯಕೀಯ ತುರ್ತು ಸೇವೆ ಒದಗಿಸಲು ಸಿಆರ್‌ಪಿಎಫ್ ಸ್ಥಾಪಿಸಿದ ಸಹಾಯವಾಣಿಯಾಗಿದ್ದು, ಕರೆ ಬಂದ ತಕ್ಷಣ ಯೋಧ ಆಸ್ಪತ್ರೆಗೆ ತೆರಳಿ ಸಹಾಯ ಮಾಡಿ ಎರಡು ಜೀವಗಳಿಗೆ ಪುನರ್ಜನ್ಮ ನೀಡಿದ್ದಾರೆ.
Advertisement
The relation of blood.
Constable Gohil Shailesh of #53Bn donated blood to 25 yr old lady of #Kashmir who urgently needed blood due to complications during delivery.
His blood saved a mother, a child, a family and created a bond for life. pic.twitter.com/kUM92pJQAy
— ????????CRPF???????? (@crpfindia) April 19, 2019
Advertisement
ಈ ಬಗ್ಗೆ ಸಿಆರ್‌ಪಿಎಫ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿ ಯೋಧನಿಗೆ ಅಭಿನಂದನೆ ಅರ್ಪಿಸಿದೆ. ಇದು ರಕ್ತದ ಸಂಬಂಧ. 53ನೇ ಬೆಟಾಲಿಯನ್ ಕಾನ್‍ಸ್ಟೇಬಲ್ ಗೋಹಿಲ್ ಶೈಲೇಶ್ ಅವರು ಡೆಲಿವರಿ ಸಮಯದಲ್ಲಿ ತೊಂದರೆ ಅನಿಭವಿಸುತ್ತಿದ್ದ 25 ವರ್ಷದ ಮಹಿಳೆಗೆ ರಕ್ತದಾನ ಮಾಡಿದ್ದಾರೆ. ಅವರ ರಕ್ತವು ತಾಯಿ ಹಾಗೂ ಮಗು ಇಬ್ಬರ ಜೀವವನ್ನು ಉಳಿಸಿ ಒಂದು ಬಂಧವನ್ನು ಸೃಷ್ಟಿಸಿದೆ ಎಂದು ಬರೆದು ಯೋಧ ರಕ್ತ ನೀಡುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದೆ.
We are proud of our soldiers and their sacrifice for Humanity.They feel proud to DONATE each and every drop of their bodys blood for the service of the Nation and for UNIVERSAL PEACE. Their thoughts are beyond IMAGINATION. Jai hind. https://t.co/4w21yxjjZk
— Rajendra Kumar Rai (@Rajendr61990322) April 19, 2019
ಯೋಧನ ಈ ನಿಸ್ವಾರ್ಥ ಸಹಾಯಕ್ಕೆ ಎಲ್ಲೆಡೆಯಿಂದ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಯೋಧನ ಕಾರ್ಯಕ್ಕೆ ನೆಟ್ಟಿಗರು ಸಲಾಂ ಹೊಡೆಯುತ್ತಿದ್ದಾರೆ.