ಬೆಂಗಳೂರು: ನಗರದ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ನಡೆದ ರಾಹುಲ್ ಗಾಂಧಿಯ ಸಂವಾದ ಕಾರ್ಯಕ್ರಮದ ವೇಳೆ “ಮೋದಿ, ಮೋದಿ” ಎಂದು ಘೋಷಣೆ ಕೂಗಿದ ಟೆಕ್ಕಿಗಳಿಗೆ ಪೊಲೀಸರು ಲಾಠಿ ಏಟು ನೀಡಿದ್ದಾರೆ.
ಸೋಮವಾರ ಸಂಜೆ ಮಾನ್ಯತಾ ಟೆಕ್ ಪಾರ್ಕಿ ನ ಆಂಪಿ ಥಿಯೇಟರ್ ನಲ್ಲಿ ನವೋದ್ಯಮಿಗಳ ಜೊತೆ ರಾಹುಲ್ ಗಾಂಧಿ ಸಂವಾದ ಕಾರ್ಯಕ್ರಮ ಆಯೋಜನೆಗೊಂಡಿತ್ತು. ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ಕುಳಿತಿದ್ದ ಟೆಕ್ಕಿಗಳು “ಮೋದಿ ಮೋದಿ” ಎಂದು ಕರೆದು ಆರಂಭದಲ್ಲೇ ಮುಖಭಂಗ ಮಾಡಿದ್ದಾರೆ.
Advertisement
@KiranKS @Jaggesh2 @ShefVaidya grand reception to Rahul Gandhi in Manyata tech park, Bengaluru. You must listen to the crowd chanting Modi when Rahul arrives. pic.twitter.com/elEii9EXCO
— NAGESH (@newnageshv2) March 18, 2019
Advertisement
ಭಿತ್ತಿಪತ್ರಗಳನ್ನು ಹಿಡಿದು ಮೋದಿ ಪರ ಘೋಷಣೆ ಕೂಗಿದ ಟೆಕ್ಕಿಗಳು, “ಮತ್ತೊಮ್ಮೆ ಮೋದಿ”, “ಈ ಸಲ 400 ಸೀಟುಗಳು ಬಿಜೆಪಿಗೆ”, “ಸಾಫ್ ನಿಯತ್ ಸಬ್ ಕಾ ವಿಕಾಸ್” ಎಂದು ಬರೆದಿರುವ ಭಿತ್ತಿಪತ್ರಗಳನ್ನು ಹಿಡಿದು ಘೋಷಣೆ ಕೂಗಿದರು.
Advertisement
ಮೋದಿ ಪರ ಘೋಷಣೆ ಕೂಗುತ್ತಿದ್ದಂತೆ ಪೊಲೀಸರು ಟೆಕ್ಕಿಗಳನ್ನು ಚದುರಿಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಟೆಕ್ಕಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿ ಮೋದಿ ಪರ ಘೋಷಣೆ ಕೂಗಿದ ಟೆಕ್ಕಿಗಳ ಮೇಲೆ ಲಾಠಿ ಬೀಸಿದ್ದಾರೆ.