ಮುಂಬೈ: ವಿಂಡೀಸ್ ವಿರುದ್ಧದ ನಾಲ್ಕನೇಯ ಏಕದಿನ ಪಂದ್ಯದಲ್ಲಿ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಅನುಷ್ಕಾ ಶರ್ಮಾ ಹೆಸರನ್ನು ಹೇಳಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಪ್ರೋತ್ಸಾಹಿಸಿದ್ದಾರೆ.
ಹೌದು. ಅಭಿಮಾನಿಗಳು ಅನುಷ್ಕಾ ಶರ್ಮಾ ಹೆಸರನ್ನು ಹೇಳುತ್ತಿದ್ದಂತೆ ನಕ್ಕ ವಿರಾಟ್ ಕೊಹ್ಲಿ ಕೈ ಎತ್ತಿ ಥಂಪ್ಸ್ ಅಪ್ ಮಾಡಿ ಧನ್ಯವಾದ ಸೂಚಿಸಿದರು.
ಈ ಹಿಂದೆ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ನೀಡಿದ್ದಾಗ ಅಭಿಮಾನಿಗಳು ಅನುಷ್ಕಾ ವಿರುದ್ಧ ಟ್ರೋಲ್ ಮಾಡಿ ಟೀಕಿಸುತ್ತಿದ್ದರು. ಕೊಹ್ಲಿ ಪ್ರದರ್ಶನ ಕಳಪೆಯಾಗಲು ಅನುಷ್ಕಾ ಕಾರಣ ಎಂದು ಬರೆದು ಟೀಕಿಸುತ್ತಿದ್ದರು. ಇದಕ್ಕೆ ಕಿಡಿಕಾರಿದ್ದ ಕೊಹ್ಲಿ ಅನುಷ್ಕಾ ಪರ ನಿಂತು ಅಭಿಮಾನಿಗಳಿಗೆ ಗರಂ ಆಗಿಯೇ ಉತ್ತರಿಸಿ ನನ್ನ ಆಟದ ವಿಚಾರಕ್ಕೆ ಬೇರೆಯವರನ್ನು ಎಳೆದು ತರಬೇಡಿ ಎಂದು ಗುಡುಗಿದ್ದರು.
ಅನುಷ್ಕಾ ಮತ್ತು ಕೊಹ್ಲಿ ಈಗ ದಂಪತಿಯಾಗಿದ್ದು, ಅಭಿಮಾನಿಗಳು ಈ ಜೋಡಿಗೆ `ವಿರುಷ್ಕಾ’ ಎಂದು ಹೆಸರನ್ನು ಇಟ್ಟಿದ್ದಾರೆ. ಈಗ ಕ್ರೀಡಾಂಗಣದಲ್ಲಿ ಕೊಹ್ಲಿ ಬದಲು ಅನುಷ್ಕಾ ಎಂದು ಕರೆಯುತ್ತಿದ್ದು, ಕೊಹ್ಲಿ ಸಹ ಅಭಿಮಾನಿಗಳ ಈ ಪ್ರೋತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.instagram.com/p/Bpi7W2MBuW8/?taken-by=virat.kohlifans