ಬೆಂಗಳೂರು: ಅದು 8 ವರ್ಷಗಳಿಂದ ನಡಿತಾ ಇದ್ದ ಕಾಮಗಾರಿ. ಉದ್ಘಾಟನೆಗೂ ಸಿದ್ಧವಾದ ಆ ಬೃಹತ್ ಪಾರ್ಕಿಂಗ್ ಕಟ್ಟಡಕ್ಕೆ ವ್ಯಯಿಸಿದ್ದು ಬರೋಬ್ಬರಿ 80 ಕೋಟಿ ಅನುದಾನ. ಆದರೆ ಆ ಕಟ್ಟಡ ಉದ್ಘಾಟನೆಗೆ ಮುನ್ನವೇ ಸೋರುತ್ತಿದೆ.
Advertisement
ಚಿಕ್ಕಪೇಟೆ, ಗಾಂಧಿನಗರ, ಮೆಜೆಸ್ಟಿಕ್‍ನಂತಹ ಬೆಂಗಳೂರಿನ ಹಾಟ್‍ಸ್ಪಾಟ್‍ಗಳಿಗೆ ನಿತ್ಯ ಸಾವಿರಾರು ಜನ ಭೇಟಿ ನೀಡುತ್ತಾರೆ. ಇಲ್ಲಿಗೆ ಬರುವವರಿಗೆ ವಾಹನಗಳ ಪಾರ್ಕಿಂಗ್ ನದ್ದೇ ದೊಡ್ಡ ತಲೆ ಬಿಸಿ. ಹೀಗಾಗಿ ಈ ಪ್ರಮುಖ ಏರಿಯಾಗಳಿಗೆ ಬಂದೋಗುವ ಜನರಿಗೆ ಅನುಕೂಲವಾಗಲಿ ಅಂತಲೇ ಸರ್ಕಾರ, ಫ್ರೀಡಂಪಾರ್ಕ್ ಬಳಿ ಬೃಹತ್ ಪಾರ್ಕಿಂಗ್ ಕಟ್ಟಡವೊಂದನ್ನ ನಿರ್ಮಿಸಿದೆ. ಆದರೆ ಈ ಬಹುಮಹಡಿ ಕಟ್ಟಡ ಇನ್ನು ಉದ್ಘಾಟನೆಯೇ ಆಗಿಲ್ಲ, ಅಷ್ಟರಲ್ಲೇ ಬಿರುಕು ಬಿಟ್ಟಿದ್ದು, ಸೋರಲು ಶುರುವಾಗಿದೆ.
Advertisement
Advertisement
ಇದು ಗಾಂಧಿನಗರ ವಿಧಾನಸಭಾ ಕ್ಷೇತ್ರದ ಫ್ರೀಡಂಪಾರ್ಕ್ ಬಳಿ ಇರುವ ಪಾರ್ಕಿಂಗ್ ಕಟ್ಟಡ. ಸುಮಾರು 2 ಎಕರೆ ವಿಸ್ತೀರ್ಣದಲ್ಲಿ ಈ ಕಟ್ಟಡ ಇದ್ದು, ಕಾಮಗಾರಿಯೂ ಶೇ.95 ರಷ್ಟು ಮುಗಿದಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ಆದರೆ ಅದಕ್ಕೂ ಮುನ್ನವೇ ಕಳಪೆ ಕಾಮಗಾರಿಯಿಂದ 3 ಅಂತಸ್ತಿನ ಈ ಕಟ್ಟಡದಲ್ಲಿ ಬಿರುಕು ಬಿಟ್ಟಿದೆ. ಅಷ್ಟೆ ಅಲ್ಲದೆ ಸೋರಿಕೆಯೂ ಆಗ್ತಿದೆ. ಬಿಬಿಎಂಪಿ ವಿರುದ್ಧ ಶೇ.40 ಕಮಿಷನ್, ಕಳಪೆ ಕಾಮಗಾರಿ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ನಾಳೆ KRS ಸುತ್ತಮುತ್ತ ಟ್ರಯಲ್ ಬ್ಲಾಸ್ಟ್- ತೀವ್ರ ವಿರೋದಧ ನಡುವೆಯೂ ಪ್ರಾಯೋಗಿಕವಾಗಿ ಸಿದ್ಧತೆ
Advertisement
ಸೋರಿಕೆ, ಬಿರುಕಿನ ನಡುವೆ ಬಿಬಿಎಂಪಿ ಖಾಸಗಿಯವರೆಗೆ ಪಾರ್ಕಿಂಗ್ ನಿರ್ವಹಣೆ ಮಾಡಲು ಟೆಂಡರ್ ನೀಡಿದೆ. ಸುಮಾರು 2 ಕೋಟಿ ಡೆಪಾಸಿಟ್ ಹಾಗೂ ಬರೋಬ್ಬರಿ 5 ವರ್ಷ ಪಾರ್ಕಿಂಗ್ ನಿರ್ವಹಣೆ ಮಾಡಲು ಟೆಂಡರ್ ಕರೆದಿದೆ. ಈ ಟೆಂಡರ್‍ಗೆ 4 ಖಾಸಗಿ ಏಜೆನ್ಸಿ ಕಂಪನಿಗಳು ಅರ್ಜಿ ಸಲ್ಲಿಸಿದ್ದವು. ಆದರೆ ಕಟ್ಟಡದಲ್ಲಿ ನೀರು ಸೋರಿಕೆ ಆಗ್ತಾ ಇರೋದನ್ನ ನೋಡಿದ ಖಾಸಗಿ ಕಂಪನಿಗಳು ತಮ್ಮ ಅರ್ಜಿ ವಾಪಸ್ ಪಡೆದಿದೆ.
2015ರಲ್ಲಿ ಈ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದ್ದ ಬಿಬಿಎಂಪಿ, ಕೆ.ಎಂ.ವಿ ಎಂಬ ಕಂಪನಿಗೆ ಬರೋಬ್ಬರಿ 80 ಕೋಟಿಗೆ ಟೆಂಡರ್ ನೀಡಿದೆ. ಸದ್ಯ ಪಾರ್ಕಿಂಗ್ ಕಟ್ಟಡದ ಕಾಮಗಾರಿ ಮುಗಿದು 8 ತಿಂಗಳು ಕಳೆದಿದೆ. ಆದ್ರೆ ಮತ್ತೊಂದು ಕಡೆ ಬಿಬಿಎಂಪಿ ಕಟ್ಟಡ ಕಾಮಗಾರಿಯ 25 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದು, ಗುತ್ತಿಗೆದಾರರಿಗೆ ಪಾವತಿ ಮಾಡಿಲ್ಲ. ಅದೇನೇ ಆಗ್ಲಿ, 8 ವರ್ಷಗಳ ದೀರ್ಘಕಾಲದ ಈ ಕಾಮಗಾರಿಯಲ್ಲಿ, ಆರಂಭದಲ್ಲಿಯೇ ಕಳಪೆ ಕಂಡು ಬಂದಿದ್ದು, ನಿಜಕ್ಕೂ ವಿಪರ್ಯಾಸ.