ಚಿತ್ರದುರ್ಗ: ನಿರಂತರ ಮಳೆಯಿಂದಾಗಿ (Rain) ಅಪಾರ ಪ್ರಮಾಣದಲ್ಲಿ ಈರುಳ್ಳಿ, ಹೂವು ಸೇರಿದಂತೆ ವಿವಿಧ ಬೆಳೆಗಳು ಹಾನಿಗೊಳಗಾಗಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯ ಚಳ್ಳಕೆರೆ (Challakere) ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಳ್ಳಕೆರೆ ತಾಲೂಕಿನ ಬಾಲೆನಹಳ್ಳಿ ಗ್ರಾಮದಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಈರುಳ್ಳಿ ಬೆಳೆಯ ಜಮೀನಿಗೆ ಇಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು (Horticulture Department) ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ವಿಷ್ಣು ಸ್ಮಾರಕ ವಿಚಾರ – ನಾಳೆ ಸಿಎಂ ಭೇಟಿಯಾಗಲಿರುವ ಭಾರತಿ ವಿಷ್ಣುವರ್ಧನ್
ರೈತರು ಅಲ್ಪಕಾಲದಲ್ಲೇ ಲಾಭದಾಯಕ ಬೆಳೆ ಎಂದು ಈರುಳ್ಳಿ ಬಿತ್ತನೆ ಮಾಡಿದ್ದರು. ಆದರೆ ನಿರಂತರ ಮಳೆ ಹೆಚ್ಚಾಗಿ ಜಮೀನಿನಲ್ಲೇ ಈರುಳ್ಳಿ ಕೊಳೆಯಲಾರಂಭಿಸಿದೆ. ಮತ್ತೊಂದೆಡೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಳೆ ದಿಢೀರ್ ಕುಸಿದಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದ್ದರಿಂದ ಅಧಿಕಾರಿಗಳು ಈರುಳ್ಳಿ ಬೆಳೆ ನಷ್ಟ ಕುರಿತಂತೆ ಸರ್ಕಾರಕ್ಕೆ ಸರಿಯಾದ ಮಾಹಿತಿ ಕೊಟ್ಟು ಬೆಳೆ ವಿಮೆ ಬೆಳೆ ಪರಿಹಾರವನ್ನು ಸಿಗುವಂತೆ ಮಾಡಬೇಕು ಎಂದು ರೈತ ಮುಖಂಡ ಚಿದಾನಂದಪ್ಪ ತಿಪ್ಪೇಸ್ವಾಮಿ ಮನವಿ ಮಾಡಿದರು. ಇದನ್ನೂ ಓದಿ: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರಿಗೆ ಕಠಿಣ ಶಿಕ್ಷೆ ಅವಶ್ಯಕ, ಕೇಂದ್ರದ ತನಿಖೆ ಆಗಲಿ: ಡಾ.ಮಂಜುನಾಥ್
ಇನ್ನು ಇದೇ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ತೋಟಗಾರಿಕೆ ಸಹಾಯಕಾಧಿಕಾರಿ ಮಧು ಅವರು, ಬೆಳೆ ಹಾನಿಯಾದ ಪ್ರದೇಶಗಳಿಗೆ ಇಂದು ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿರಂತರವಾಗಿ ಮಳೆ ಆಗಿರುವ ಕಾರಣ ಈರುಳ್ಳಿ ಬೆಳೆಗೆ ಮಚ್ಚೆರೋಗ, ಹಳದಿ ರೋಗ ಸೇರಿದಂತೆ ಈರುಳ್ಳಿ ಬೆಳೆಗೆ ವಿವಿಧ ರೋಗ ಕಾಣಿಸಿಕೊಂಡಿದ್ದು, ಈಗಾಗಲೇ ಈರುಳ್ಳಿ ಬೆಳೆ ಕಟಾವಿಗೆ ಬಂದಿದ್ದರೂ ಪ್ರಯೋಜನವಿಲ್ಲ. ಆದರೆ ಈರುಳ್ಳಿ ಕಟಾವು ಮಾಡಿದ ನಂತರ ಮಳೆಗೆ ಸಿಲುಕದಂತೆ ಎಚ್ಚರಿಕೆವಹಿಸಿ ಕಟಾವು ಮಾಡಿದ ಬೆಳೆಯನ್ನ ಸಂರಕ್ಷಣೆ ಮಾಡಿಕೊಳ್ಳುವಂತೆ ರೈತರಿಗೆ ಸೂಚಿಸಿದರು. ಇದನ್ನೂ ಓದಿ: ಪವನ್ ಖೇರಾ ಬಳಿ 2 ವೋಟರ್ ಐಡಿ – ಬಿಜೆಪಿ ಬಾಂಬ್, EC ನೋಟಿಸ್ ಜಾರಿ
ಈ ವೇಳೆ ಬೆಳೆ ಹಾನಿಗೆ ಸೂಕ್ತ ಪರಿಹಾರಕ್ಕೆ ಇಲಾಖೆಗೆ ಮಾಹಿತಿ ನೀಡುವ ಭರವಸೆ ನೀಡಿದ್ದು, ರೈತರಾದ ಓಟಿ ತಿಪ್ಪೇಸ್ವಾಮಿ, ಚಿದಾನಂದಪ್ಪ ಅವರು ತ್ವರಿತವಾಗಿ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದರು. ಈ ಸಂಧರ್ಭದಲ್ಲಿ ರೈತರಾದ ಕೃಷ್ಣಪ್ಪ, ಮಲ್ಲ ರೆಡ್ಡಿ, ತಿಮ್ಮ ರೆಡ್ಡಿ, ಸುಭಾಷ್ ರೆಡ್ಡಿ, ಸೇರಿದಂತೆ ಬಾಲೇನ ಹಳ್ಳಿಯ ಅನೇಕ ರೈತರು ಉಪಸ್ಥಿತರಿದ್ದರು. ಇದನ್ನೂ ಓದಿ: ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲು ಆರೋಪ – ಕಂದಾಯ ನಿರೀಕ್ಷಕ, ಗ್ರಾಮಾಡಳಿತ ಅಧಿಕಾರಿ ಸಸ್ಪೆಂಡ್

