ದುಬೈ: ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನ್ ರೊನಾಲ್ಡೊ ತನ್ನ ಪತ್ನಿಯ ಹುಟ್ಟುಹಬ್ಬಕ್ಕೆ ಬುರ್ಜ್ ಖಲಿಫಾದಲ್ಲಿ ಲೇಸರ್ ಶೋ ಏರ್ಪಡಿಸುವ ಮೂಲಕ ಪತ್ನಿಗೆ ಉಡುಗೊರೆಯನ್ನು ನೀಡಿದ್ದಾರೆ.
ಜಾರ್ಜಿನಾ ರೊಡ್ರಿಗಸ್ ಅವರ 28ನೇ ಹುಟ್ಟುಹಬ್ಬವನ್ನು ಆಚರಿಸಲು ವಿಶ್ವದ ಅತಿ ಎತ್ತರದ ಕಟ್ಟಡವಾದ ದುಬೈನಲ್ಲಿರುವ ಬುರ್ಜ್ ಖಲೀಫಾದ ಮೇಲೆ ರೊನಾಲ್ಡೊ ಪತ್ನಿಯ ಭಾವಚಿತ್ರವಿರುವ ಲೇಸರ್ ಶೋ ಏರ್ಪಡಿಸಿದ್ದಾರೆ. ಇದರಲ್ಲಿ ಜಾರ್ಜಿಯಾವ ಅವರ ಫೋಟೋ ವೀಡಿಯೊವು ದುಬೈನಲ್ಲಿರುವ ಬುರ್ಜ್ ಖಲೀಫಾದಲ್ಲಿ ಗೋಚರಿಸಿದೆ.
View this post on Instagram
- Advertisement
ಐದು ಬ್ಯಾಲನ್ ಡಿ ಓರ್ ಪ್ರಶಸ್ತಿಗಳ ವಿಜೇತ ರೊನಾಲ್ಡೊ, ದುಬೈನ ಹೃದಯಭಾಗದಲ್ಲಿರುವ ಐಕಾನಿಕ್ ಟವರ್ ಮೇಲೆ ತನ್ನ ಪತ್ನಿಯ ಜನ್ಮದಿನದ ಶುಭಾಶಯ ಕೋರಲು ಬರೋಬ್ಬರಿ 50,000 ಪೌಂಡ್‍ಗಳನ್ನು ಖರ್ಚು ಮಾಡಿದ್ದಾರೆ.
- Advertisement
ತಮ್ಮ ಪತ್ನಿಯ ಹುಟ್ಟುಹಬ್ಬಕ್ಕೆ ಶುಭಕೋರಿರುವ ರೊನಾಲ್ಡೊ ಈ ವಿಡಿಯೋವನ್ನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಯಾತ್ರಾರ್ಥಿಗಳಿಗಾಗಿ ಪಾಕಿಸ್ತಾನದ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಲು ಭಾರತ ಸಿದ್ಧ
View this post on Instagram
ವೀಡಿಯೋದಲ್ಲಿ ಏನಿದೆ?: ಸುಮಾರು ಮೂರರಿಂದ ನಾಲ್ಕು ನಿಮಿಷಗಳ ಕಾಲ ಲೈಟ್ ಮತ್ತು ಲೇಸರ್ ಶೋನಲ್ಲಿ ರೊನಾಲ್ಡೊ ಹಾಗೂ ಅವರ ಪತ್ನಿ ಹೆಸರು ಬುರ್ಜ್ ಖಲಿಫಾದ ಮೇಲೆ ಪ್ರದರ್ಶನಗೊಂಡಿತು. ನಂತರ ಹ್ಯಾಪಿ ಬರ್ತ್‍ಡೇ ಜಿಯೋ ಸಂದೇಶದೊಂದಿಗೆ ಕೊನೆಗೊಂಡಿತು. ಇದನ್ನೂ ಓದಿ: ಮಾಜಿ ಆರ್‌ಸಿಬಿ ಆಟಗಾರನ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ