ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ದಿನಪೂರ್ತಿ ಮನೆಯಲ್ಲಿಯೇ ಇರಬೇಕು. ಬೇಸರವಾದಾಗ ಹೊರಗೆ ಹೋಗಿ ಏನಾದರೂ ತಿಂದುಕೊಂಡು ಬರೋಣ ಎಂದರೂ ಆಗುವುದಿಲ್ಲ. ಇತ್ತ ಮನೆಯಲ್ಲಿ ಮಕ್ಕಳು ಸೇರಿದಂತೆ ಎಲ್ಲರೂ ಇರುವುದರಿಂದ ತಿನ್ನಲೂ ಏನಾದರೂ ಕೇಳುತ್ತಿರುತ್ತಾರೆ…ಅವರಿಗಾಗಿ ಏನ್ ಮಾಡೋದು ಎಂದು ಯೋಚನೆ ಮಾಡುತ್ತಿರುತ್ತೀರಾ. ಆದ್ದರಿಂದ ನಿಮಗಾಗಿ ಕೆಲವೇ ನಿಮಿಷಗಳಲ್ಲಿ ರೆಡಿಯಾಗುವ ಕಡ್ಲೆಬೇಳೆ ಖಾರ ಫ್ರೈ ಮಾಡುವ ವಿಧಾನ ಇಲ್ಲಿದೆ…..
ಬೇಕಾಗುವ ಸಾಮಗ್ರಿಗಳು
1. ಕಡ್ಲೆಬೇಳೆ – 1/4 ಕೆಜಿ
2. ಖಾರದ ಪುಡಿ – ರುಚಿಗೆ ತಕ್ಕಷ್ಟು
3. ಉಪ್ಪು – ರುಚಿಗೆ ತಕ್ಕಷ್ಟು
4. ಎಣ್ಣೆ – ಕರಿಯಲು
Advertisement
Advertisement
ಮಾಡುವ ವಿಧಾನ
* ಮೊದಲು 4-5 ಗಂಟೆಗಳ ಕಾಲ ಕಡ್ಲೆಬೇಳೆಯನ್ನು ನೀರಿನಲ್ಲಿ ನೆನೆಸಿ ಸೋಸಿಕೊಳ್ಳಿ.
* ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಲು ಬಿಡಿ.
* ಎಣ್ಣೆ ಕಾದ ಮೇಲೆ ಸಣ್ಣ ಸಣ್ಣ ತೂತಿರುವ ಜಾಲರಿಯೊಳಗೆ ಕಡ್ಲೆಬೇಳೆಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ.
* ಬೇಳೆ ನಿಂದಿರುವ ಕಾರಣ 2-3 ನಿಮಿಷಗಳ ಕಾಲ ಬೇಯಿಸಿದರೆ ಗರಿಗರಿ ಎನ್ನುತ್ತೆ. ಹೀಗೆ ಎಲ್ಲಾ ಬೇಳೆಯನ್ನು ಫ್ರೈ ಮಾಡಿಕೊಳ್ಳಿ.
* ಈಗ ಒಂದು ಮಿಕ್ಸಿಂಗ್ ಬೌಲ್‍ಗೆ ಫ್ರೈ ಮಾಡಿದ ಕಡ್ಲೆಬೇಳೆ ಹಾಕಿಕೊಂಡು ಉಪ್ಪು ಖಾರವನ್ನು ಮಿಕ್ಸ್ ಮಾಡಿ.
(ನಿಮಗೆ ಉಪ್ಪು, ಖಾರ ತಿಂದು ಬೇಜರಾಗಿದ್ರೆ, ಗರಂ ಮಸಾಲ, ಮ್ಯಾಗಿ ಮಸಾಲ, ಪೆಪ್ಪರ್ ಪೌಡರ್ ಮಸಾಲವನ್ನು ಸಹ ಬಳಸಬಹುದು. ಟೇಸ್ಟೂ ಚೆನ್ನಾಗಿರುತ್ತದೆ)
Advertisement
ಈ ರೀತಿ ಕಡ್ಲೆಬೇಳೆ ಖಾರ ಫ್ರೈ ಮಾಡಿದರೆ ಇದನ್ನು ಕೆಲದಿನಗಳ ಕಾಲ ಇಟ್ಟುಕೊಂಡು ತಿನ್ನಬಹುದು.